ಅರ್ಧಶತಕ ಸಿಡಿಸಿದ ಕಿವೀಸ್ ಆಟಗಾರನನ್ನು ಟ್ರೋಲ್ ಮಾಡಿದ ‘ಆರ್​ಸಿಬಿ’ ಅಭಿಮಾನಿಗಳು; ಯಾಕೆ ಗೊತ್ತಾ?

2018ರ ಐಪಿಎಲ್​ ಆವೃತ್ತಿಯಲ್ಲಿ ಗ್ರ್ಯಾಂಡ್​ಹೋಮ್​ರನ್ನು ಆರ್​ಸಿಬಿ 2.2 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಆದರೆ, 2018-19 ಎರಡೂ ಸೀಸನ್​ನಲ್ಲಿ ಗ್ರ್ಯಾಂಡ್​ಹೋಮ್​ಗೆ ಎಷ್ಟೇ ಅವಕಾಶ ನೀಡಿದರು ಆರ್​ಸಿಬಿ ಪರ ಮಿಂಚಲಿಲ್ಲ.

Vinay Bhat | news18-kannada
Updated:September 5, 2019, 12:52 PM IST
ಅರ್ಧಶತಕ ಸಿಡಿಸಿದ ಕಿವೀಸ್ ಆಟಗಾರನನ್ನು ಟ್ರೋಲ್ ಮಾಡಿದ ‘ಆರ್​ಸಿಬಿ’ ಅಭಿಮಾನಿಗಳು; ಯಾಕೆ ಗೊತ್ತಾ?
ಕಾಲಿನ್ ಗ್ರ್ಯಾಂಡ್ಹೋಮ್
  • Share this:
ಬೆಂಗಳೂರು (ಸೆ. 05): ಶ್ರೀಲಂಕಾ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ಟಿ-20 ಸರಣಿಯನ್ನಾಡುತ್ತಿದೆ. ಮೊನ್ನೆಯಷ್ಟೆ ನಡೆದ 2ನೇ ಪಂದ್ಯದಲ್ಲಿ ಕಿವೀಸ್ 4 ವಿಕೆಟ್ಗಳ ರೋಚಕ ಜಯ ಸಾಧಿಸಿ ಸರಣಿ ವಶ ಪಡಿಸಿಕೊಂಡಿತು. ಮಧ್ಯೆ ಅರ್ಧಶತಕ ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ್ದ ನ್ಯೂಜಿಲೆಂಡ್ ಆಟಗಾರ ಕಾಲಿನ್ ಗ್ರ್ಯಾಂಡ್​ಹೋಮ್ ಟ್ರೋಲ್​​ ಆಗಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ 20 ಓವರ್​ಗೆ 9 ವಿಕೆಟ್ ಕಳೆದುಕೊಂಡು 161 ರನ್ ಬಾರಿಸಿತು. 162 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್ ಆರಂಭದಲ್ಲೇ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಷ್ಟಕ್ಕೆ ಸಿಲುಕಿತು. ಈ ಸಂದರ್ಭ ಕ್ರೀಸ್​ಗೆ ಬಂದ ಆಲ್ರೌಂಡರ್ ಆಟಗಾರ ಗ್ರ್ಯಾಂಡ್​ಹೋಮ್​​ ಪಂದ್ಯದ ಗತಿಯನ್ನೇ ಬದಲಾಯಿಸಿದರು.

ಡಾರ್ಲ್​ ಮಿಚೆಲ್ ಜೊತೆಗೂಡಿ ಸ್ಫೋಟಕ ಆಟ ಪ್ರದರ್ಶಿಸಿದ ಕಾಲಿನ್ ತಂಡಕ್ಕೆ ಗೆಲುವು ತಂದಿಟ್ಟರು. 46 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸ್​ ಸಿಡಿಸಿ 59 ರನ್ ಚಚ್ಚಿದರು. ಈ ಗೆಲುವಿನೊಂದಿಗೆ ಕಿವೀಸ್ ಟಿ-20 ಸರಣಿ ವಶ ಪಡಿಸಿಕೊಂಡಿತು. ಆದರೆ, ಪಂದ್ಯ ಮುಗಿದ ಬಳಿಕ ಗ್ರ್ಯಾಂಡ್​ಹೋಮ್​ರನ್ನು ಆರ್​ಸಿಬಿ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.

ಸಣ್ಣ ರಾಜ್ಯದ ಕ್ರಿಕೆಟಿಗರು ನಿಮಗೆ ಕಾಣಿಸಲ್ಲ; ಆಯ್ಕೆ ಸಮಿತಿ ಮೈ ಚಳಿ ಬಿಡಿಸಿದ ಸೌರಾಷ್ಟ್ರ ಆಟಗಾರ

2018ರ ಐಪಿಎಲ್​ ಆವೃತ್ತಿಯಲ್ಲಿ ಗ್ರ್ಯಾಂಡ್​ಹೋಮ್​ರನ್ನು ಆರ್​ಸಿಬಿ 2.2 ಕೋಟಿ ಕೊಟ್ಟು ಖರೀದಿ ಮಾಡಿತ್ತು. ಆದರೆ, 2018-19 ಎರಡೂ ಸೀಸನ್​ನಲ್ಲಿ ಗ್ರ್ಯಾಂಡ್​ಹೋಮ್​ಗೆ ಎಷ್ಟೇ ಅವಕಾಶ ನೀಡಿದರು ಆರ್​ಸಿಬಿ ಪರ ಮಿಂಚಲಿಲ್ಲ.

ಬ್ಯಾಟಿಂಗ್-ಬೌಲಿಂಗ್​ನಲ್ಲಿ ಕಳಪೆ ಪ್ರದರ್ಶನ ತೋರಿದ್ದರು. ಕಳೆದ ಸೀಸನ್​ನಲ್ಲಿ ಗ್ರ್ಯಾಂಡ್​ಹೋಮ್ ಆಡಿದ 4 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 46 ರನ್. ಇದರಿಂದ ಕೋಪಗೊಂಡಿದ್ದ ಅಭಿಮಾನಿಗಳು ಈಗ ನ್ಯೂಜಿಲೆಂಡ್ ತಂಡದಲ್ಲಿ ಆಡಲು ಆಗುತ್ತೆ, ಅದೇ ಐಪಿಎಲ್​ನಲ್ಲಿ ಆರ್​ಸಿಬಿ ಪರ ಈ ರೀತಿ ಬ್ಯಾಟ್ ಬೀಸಲು ಏನಾಗಿತ್ತು? ಎಂದು ಪ್ರಶ್ನಿಸಿದ್ದಾರೆ.

 


First published: September 5, 2019, 12:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading