IPL 2020: ಈ ಸಲ ಕಪ್ ನಮ್ದೆ...RCB ಜಯಘೋಷದೊಂದಿಗೆ ತೇರು ಎಳೆದ ಅಭಿಮಾನಿಗಳು

ನಾನು ಕೆಲಸ ಬೇಕು ಎಂದು ಕೇಳಿಲ್ಲ, ಹಳೇ ಹುಡುಗಿ ವಾಪಸ್ ಬರಲಿ ಎಂದೂ ಕೇಳಿಕೊಂಡಿಲ್ಲ. ಆದರೆ, ಈ ಬಾರಿ ಆರ್‌ಸಿಬಿ ಪ್ರಶಸ್ತಿ ಗೆಲ್ಲಲಿ ಎಂದು ಬೇಡುತ್ತಿದ್ದೇನೆ. ಪ್ರಶಸ್ತಿ ಗೆಲ್ಲುವ ಹಾಗೆ ಮಾಡು ತಾಯಿ ಎಂದು ಆರ್​ಸಿಬಿ ಅಭಿಮಾನಿಗಳ ಗುಂಪೊಂದು ಪಾರ್ಥನೆ ಸಲ್ಲಿಸಿತು.

zahir | news18-kannada
Updated:March 11, 2020, 8:18 PM IST
IPL 2020: ಈ ಸಲ ಕಪ್ ನಮ್ದೆ...RCB ಜಯಘೋಷದೊಂದಿಗೆ ತೇರು ಎಳೆದ ಅಭಿಮಾನಿಗಳು
IPL
  • Share this:
ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಸೀಸನ್ ಆರಂಭಕ್ಕೆ ಇನ್ನೇನು ದಿನಗಳು ಮಾತ್ರ ಉಳಿದಿವೆ. ಮಾರ್ಚ್​ 29 ರಂದು ಚುಟುಕು ಕ್ರಿಕೆಟ್ ಹಬ್ಬಕ್ಕೆ ಚಾಲನೆ ಸಿಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಸೆಣೆಸಾಟ ನಡೆಸಲಿವೆ. ಇತ್ತ ಐಪಿಎಲ್ ಆರಂಭಕ್ಕಾಗಿ ಅಭಿಮಾನಿಗಳಂತು ತುದಿಗಾಲಿನಲ್ಲಿ ಕಾದು ಕುಳಿತಿದ್ದಾರೆ. ಹಾಗೆಯೇ ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸಲು ಭರ್ಜರಿ ಹುಮ್ಮಸ್ಸಿನಲ್ಲಿದ್ದಾರೆ.

ಈ ನಡುವೆ ಕರ್ನಾಟಕದಲ್ಲು ಐಪಿಎಲ್ ಫೀವರ್ ಶುರುವಾಗಿದ್ದು, ಈ ಬಾರಿಯಂತು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಟ್ರೋಫಿ ಎತ್ತಿ ಹಿಡಿಯಲಿದೆ ಎಂದು ಬಲವಾಗಿ ನಂಬಿದ್ದಾರೆ. ಇದಕ್ಕಾಗಿ ಬಂದಲ್ಲಿ ಹೋದಲ್ಲಿ ಪೂಜೆ ಪುನಸ್ಕಾರವನ್ನು ನೆರವೇರಿಸುತ್ತಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಆರ್​ಸಿಬಿ ಅಭಿಮಾನಿಗಳ ರಥಾಭಿಮಾನ.

ಹೌದು, ರಾಯಲ್ ಚಾಲೆಂಜರ್ಸ್ ಅಭಿಮಾನಿಗಳು ಆರ್​ಸಿಬಿಗೆ ಜಯಘೋಷ ಮೊಳಗಿಸುತ್ತಾ ತೇರನ್ನು ಎಳೆಯುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಸೋತರೂ, ಗೆದ್ದರೂ ಅಭಿಮಾನ ಯಾವತ್ತಿದ್ದರೂ ಆರ್​ಸಿಬಿ ಪರ ಎಂಬ ಟ್ಯಾಗ್​ನಲ್ಲಿ ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ.

ಕೆಲ ದಿನಗಳ ಹಿಂದೆಯಷ್ಟೇ ಈ ಬಾರಿ ಕೊಹ್ಲಿ ಟೀಂ ಐಪಿಎಲ್ ಗೆದ್ದು ಬೀಗಲಿ ಎಂದು ಆರ್​ಸಿಬಿ ಅಭಿಮಾನಿಗಳು ಚಾಮುಂಡಿ ಅಮ್ಮನ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. 'ನಾನು ಕೆಲಸ ಬೇಕು ಎಂದು ಕೇಳಿಲ್ಲ, ಹಳೇ ಹುಡುಗಿ ವಾಪಸ್ ಬರಲಿ ಎಂದೂ ಕೇಳಿಕೊಂಡಿಲ್ಲ. ಆದರೆ, ಈ ಬಾರಿ ಆರ್‌ಸಿಬಿ ಪ್ರಶಸ್ತಿ ಗೆಲ್ಲಲಿ ಎಂದು ಬೇಡುತ್ತಿದ್ದೇನೆ. ಪ್ರಶಸ್ತಿ ಗೆಲ್ಲುವ ಹಾಗೆ ಮಾಡು ತಾಯಿ' ಎಂದು ಆರ್​ಸಿಬಿ ಅಭಿಮಾನಿಗಳ ಗುಂಪೊಂದು ಪಾರ್ಥನೆ ಸಲ್ಲಿಸಿತು. ಆ ವಿಡಿಯೋ ಭಾರೀ ವೈರಲ್ ಆಗಿತ್ತು. ಇದೀಗ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್​ ಅಭಿಮಾನಿಗಳ ಜಯಘೋಷದ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.

First published: March 11, 2020, 8:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading