ಕ್ರೀಡೆ

  • associate partner

Virat Kohli: ಕಿಂಗ್​ ಕೊಹ್ಲಿಯನ್ನೇ ಕೈ ಬಿಡಿ; ಆರ್​ಸಿಬಿ ಕಳಪೆ ಪ್ರದರ್ಶನಕ್ಕೆ ಸಿಟ್ಟಾದ ಫ್ಯಾನ್ಸ್​

KXIP vs RCB: ವಿರಾಟ್​ ಕೊಹ್ಲಿ ಜೀವದಾನ ನೀಡದೇ ಇದ್ದಿದ್ದರೆ ಕೆಎಲ್​ ರಾಹುಲ್​ ಸೆಂಚುರಿಯನ್ನು ಬಾರಿಸುತ್ತಿರಲಿಲ್ಲ. ತಂಡದ ಮೊತ್ತ 200 ಗಡಿ ದಾಟುತ್ತಿರಲಿಲ್ಲ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

news18-kannada
Updated:September 25, 2020, 11:36 AM IST
Virat Kohli: ಕಿಂಗ್​ ಕೊಹ್ಲಿಯನ್ನೇ ಕೈ ಬಿಡಿ; ಆರ್​ಸಿಬಿ ಕಳಪೆ ಪ್ರದರ್ಶನಕ್ಕೆ ಸಿಟ್ಟಾದ ಫ್ಯಾನ್ಸ್​
virat kohli
  • Share this:
ಉಮೇಶ್​ ಯಾದವ್​ ಕಳಪೆ ಪ್ರದರ್ಶನ ನೀಡಿದಾಗ ಎಲ್ಲರೂ ಟ್ರೋಲ್​ ಮಾಡಿದಿರಿ. ಆದರೆ, ಕೊಹ್ಲಿ ಪ್ರಮುಖ ಕ್ಯಾಚ್​ ಬಿಟ್ಟಾಗ ಎಲ್ಲರೂ ಸುಮ್ಮನಿರುವುದೇಕೆ?- ಸದ್ಯ ಹೀಗೊಂದು ವಿಚಾರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಇದಕ್ಕೆ ಕಾರಣ ಕಿಂಗ್ಸ್​ ಇಲವೆನ್​ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಬಿಟ್ಟ ಪ್ರಮುಖ ಎರಡು ಕ್ಯಾಚ್​ಗಳು ಮತ್ತು ಬ್ಯಾಟಿಂಗ್​ನಲ್ಲಿ ಶೂನ್ಯ ಸುತ್ತಿದ್ದು. ಇವೆಲ್ಲವೂ ಆರ್​ಸಿಬಿ ಸೋಲಿಗೆ ನೇರ ಕಾರಣವಾಯ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ರೋಲ್​ ಆಗುತ್ತಿದೆ.

ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಜೊತೆ ಇನಿಂಗ್ಸ್ ಆರಂಭಿಸಿದ ಪಂಜಾಬ್​ ನಾಯಕ ಕೆಎಲ್ ರಾಹುಲ್, ಉಮೇಶ್ ಯಾದವ್​ ಅವರ ಮೊದಲ ಓವರ್​ನಲ್ಲಿ 8 ರನ್ ಕಲೆಹಾಕಿದರು. ಡೇಲ್ ಸ್ಟೇನ್ ಎಸೆದ 2ನೇ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದ ರಾಹುಲ್ ಐಪಿಎಲ್​ನಲ್ಲಿ 2 ಸಾವಿರ ರನ್ ಪೂರೈಸಿ ಸಾಧನೆ ಮೆರೆದರು. 60ನೇ ಇನಿಂಗ್ಸ್​ ಮೂಲಕ ಈ ಸಾಧನೆ ಮಾಡಿ ಐಪಿಎಲ್​ನಲ್ಲಿ ಅತೀ ವೇಗದಲ್ಲಿ 2 ಸಾವಿರ ರನ್ ಪೂರೈಸಿದ ಭಾರತೀಯ ಬ್ಯಾಟ್ಸ್​ಮನ್ ಎನಿಸಿಕೊಂಡರು. ನಂತರ ನಿಧಾನವಾಗಿ ಬ್ಯಾಟ್​ ಬೀಸಲು ಶುರು ಮಾಡಿದ ರಾಹುಲ್​, 83 ರನ್​ ಕಲೆ ಹಾಕಿ ಶತಕ ಸಮೀಸಿದ್ದರು.

ಈ ವೇಳೆ ರಾಹುಲ್​ ಸಿಕ್ಸ್​ ಬಾರಿಸಲು ಮುಂದಾದರು. ಆದರೆ ಚೆಂಡು ಕೊಹ್ಲಿ ಬಳಿ ಹೋಗಿತ್ತು. ಸುಲಭ ಕ್ಯಾಚನ್ನು​ ಕೊಹ್ಲಿ ಕೈ ಚೆಲ್ಲಿದ್ದರು. ರಾಹುಲ್​ 89 ರನ್​ ಗಳಿಸಿದ್ದ ವೇಳೆಯೂ ಇದೇ ಪುನರಾವರ್ತನೆ ಆಯಿತು. ಜೀವದಾನ ಪಡೆದ ಕೆಎಲ್ ರಾಹುಲ್, ಬಳಿಕ ಬಿರುಸಿನ ಆಟಕ್ಕೆ ಮುಂದಾದರು. ಅದರಂತೆ ಸ್ಟೇನ್ ಅವರ 19ನೇ ಓವರ್​ನಲ್ಲಿ ಮೊದಲ ಎರಡು ಎಸೆತಗಳಲ್ಲಿ ಸಿಕ್ಸ್ ಹಾಗೂ ಫೋರ್​ ಬಾರಿಸಿ  62 ಎಸೆತಗಳಲ್ಲಿ ಶತಕ ಪೂರೈಸಿದರು. ಅಲ್ಲದೆ ಈ ಓವರ್​ನಲ್ಲಿ ಒಟ್ಟು 26 ರನ್ ಕಲೆಹಾಕಿದರು. ಕೊನೆಯ ಓವರ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ 23 ರನ್​ ಬಾಚಿದ ರಾಹುಲ್ ತಂಡದ ಮೊತ್ತವನ್ನು 200ರ ಗಡಿದಾಟಿಸಿದರು. ಕೊನೆಯ ಎಸೆತವನ್ನು ಸಿಕ್ಸರ್ ಸಿಡಿಸುವ ಮೂಲಕ ಪಂಜಾಬ್ ಮೊತ್ತವನ್ನು 206ಕ್ಕೆ ತಂದು ನಿಲ್ಲಿಸಿದರು.

ಕೊಹ್ಲಿ ಜೀವದಾನ ನೀಡದೇ ಇದ್ದಿದ್ದರೆ ರಾಹುಲ್​ ಸೆಂಚುರಿಯನ್ನು ಬಾರಿಸುತ್ತಿರಲಿಲ್ಲ. ತಂಡದ ಮೊತ್ತ 200 ಗಡಿ ದಾಟುತ್ತಿರಲಿಲ್ಲ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಉಮೇಶ್​ ಯಾದವ್ ಅವರನ್ನು ಟ್ರೋಲ್​ ಮಾಡುವ ಇವರು ಕೊಹ್ಲಿ ಕಳಪೆ ಪ್ರದರ್ಶನ ನೀಡಿದಾಗ ಸುಮ್ಮನಿರುವುದೇಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಕೊಹ್ಲಿ ನಾಯಕ ಸ್ಥಾನದಿಂದ ಕೆಳಗಿಳಿಯಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಕೊಹ್ಲಿ ಕುರಿತು ಹರಿದಾಡಿದ ಟ್ವೀಟ್ಸ್​
Published by: Rajesh Duggumane
First published: September 25, 2020, 11:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading