• Home
 • »
 • News
 • »
 • sports
 • »
 • Viral Video: ಇಲ್ನೋಡಿ RCB ಸೀರೆ! ಹರಾಜಲ್ಲಿ ಭಾರೀ ಬೇಡಿಕೆ, ಎಷ್ಟಕ್ಕೆ ಹರಾಜಾಯ್ತು ಗೊತ್ತಾ?

Viral Video: ಇಲ್ನೋಡಿ RCB ಸೀರೆ! ಹರಾಜಲ್ಲಿ ಭಾರೀ ಬೇಡಿಕೆ, ಎಷ್ಟಕ್ಕೆ ಹರಾಜಾಯ್ತು ಗೊತ್ತಾ?

ಆರ್​ಸಿಬಿ ಫ್ಯಾನ್ (ಸಾಂಕೇತಿಕ ಚಿತ್ರ)

ಆರ್​ಸಿಬಿ ಫ್ಯಾನ್ (ಸಾಂಕೇತಿಕ ಚಿತ್ರ)

ಮೊದಲು 150 ರೂ.ವಿನಿಂದ ಶುರುವಾಗುವ ಹರಾಜು ಪ್ರಕ್ರಿಯೆ ಒಂದೇ ಸಮನೇ ಮೇಲೇರುತ್ತಾ ಹೋಗುತ್ತದೆ. ಇತ್ತ ಭಕ್ತರು ಹರಾಜು ಬೆಲೆಯನ್ನು ಏರಿಸುತ್ತಾರೆ. ಅತ್ತ ಮಸಾಲಾ ಚಾಯ್​ ತಂಡದವರೂ ಬೆಲೆ ಏರಿಸುತ್ತಾ ಹೋಗುತ್ತಾರೆ.

 • Share this:

  ಫ್ಯಾನ್ಸ್ ಕ್ರೇಜ್ ಅತ್ಯಂತ ಹೆಚ್ಚಿರೋ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರೇ (RCB Fan Craze) ಫಸ್ಟ್ ಇದೆ. ಆರ್​ಸಿಬಿ ಒಂದೇ ಒಂದು ಸಲ ಕಪ್ ಗೆಲ್ಲದೇ ಇದ್ದರೂ ಬೆಂಬಲಿಸುವವರ ಸಂಖ್ಯೆಯೇನೂ ಕಡಿಮೆಯಿಲ್ಲ. ಆರ್​ಸಿಬಿ ಬೆಂಬಲಿಗರ (Royal Challengers Bangalore) ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ.  ಇತ್ತೀಚಿಗೆ ವಿಜೃಂಭಣೆಯಿಂದ ಜರುಗಿದ ಉತ್ತರ ಕನ್ನಡದ ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆಯಲ್ಲೂ (Sirsi Marikamba Jatre) ಆರ್​ಸಿಬಿ ಉಲ್ಲೇಖವಾಗಿದೆ. ಅರೇ! ಇದೇನು ಅಂದ್ಕೊಂಡ್ರಾ? ಹೌದು, ಪ್ರಸಿದ್ಧ ವಿಡಿಯೋ ಬ್ಲಾಗ್ ಪೇಜ್ ಮಸಾಲಾ ಚಾಯ್ ಮೀಡಿಯಾ (Masala Chai Media) ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆಯಲ್ಲಿ ಆರ್​ಸಿಬಿ ತಂಡದ ಕ್ರೇಜ್ (RCB Craze) ಮೆರೆದಿದೆ.


  ಶಿರಸಿಯ ಶ್ರೀ ಮಾರಿಕಾಂಬಾ ಜಾತ್ರೆಯ ಮುಕ್ತಾಯದ ಹಂತದಲ್ಲಿ ದೇವಿಗೆ ಭಕ್ತರು ನೀಡಿದ ವಿವಿಧ ವಸ್ತುಗಳನ್ನು ಹರಾಜು ಕೂಗಲಾಗುತ್ತದೆ. ಈ ಹರಾಜಿನಲ್ಲಿ ಭಕ್ತರು ದೇವಿಗೆ ತಮ್ಮ ಕಾಣಿಕೆಯೆಂದು ನೀಡಿದ್ದ ಸೀರೆಗಳನ್ನು ಹರಾಜು ಕೂಗಲಾಗುತ್ತಿತ್ತು. ಭಕ್ತರು ಸಹ ಅತ್ಯಂತ ಉತ್ಸಾಹದಿಂದ ಕಾಣಿಕೆಯ ಸೀರೆಗಳನ್ನು ಹರಾಜಿನಲ್ಲಿ ಖರೀದಿಸಲು ಮುಂದಾಗುತ್ತಿದ್ದರು.


  ಆರ್​ಸಿಬಿ ಜೆರ್ಸಿಯ ಕಲರ್​ ಸೀರೆ ಬರುವುದನ್ನೇ ಕಾಯ್ತಿದ್ರು!
  ಇತ್ತ ಶಿರಸಿ ಮಾರಿಕಾಂಬಾ ಜಾತ್ರೆಯಲ್ಲಿ ಹರಾಜು ನಡೆಯುವ ವೇದಿಕೆಯ ಮುಂಭಾಗದಲ್ಲಿದ್ದ ಮಸಾಲಾ ಚಾಯ್ ತಂಡ ಹರಾಜಿನಲ್ಲಿ ಕೂಗಿದ ಮಾರಿಕಾಂಬಾ ದೇವಿಯ ಸೀರೆಗಳ ಬಣ್ಣಗಳ ಆಧಾರದ ಮೇಲೆ ಐಪಿಎಲ್​ ತಂಡಗಳನ್ನು ಹೆಸರಿಸುತ್ತಿತ್ತು. ಅಂದರೆ ಹರಾಜಿನಲ್ಲಿ ಕೂಗುವ ಸೀರೆ  ಐಪಿಎಲ್​ನ ಯಾವ ತಂಡಗಳ ಜೆರ್ಸಿ ಬಣ್ಣ ಎಂದು ಜೋರಾಗಿ ಕೂಗುತ್ತಿತ್ತು. ಅಲ್ಲದೇ ಆರ್​ಸಿಬಿ ಜೆರ್ಸಿಯ ಕಲರ್​ ಸೀರೆ ಬರುವುದನ್ನೇ ಕಾಯುತ್ತಿತ್ತು ಎಂದು ಅನಿಸುವಂತಿತ್ತು.
  ಚೆನ್ನೈ ಸೂಪರ್ ಕಿಂಗ್ಸ್ ತಂಡದ ಜೆರ್ಸಿಯ ಕಲರ್ ಸೀರೆ, ಮುಂಬೈ ಇಂಡಿಯನ್ಸ್ ಜೆರ್ಸಿಯ ಕಲರ್ ಸೀರೆ ಸೇರಿದಂತೆ ಹಲವು ಬಣ್ಣದ ಸೀರೆಗಳು ಹರಾಜಿಗೆ ಬರುತ್ತವೆ. ಹಲವು ಭಕ್ತರು ಈ ಸೀರೆಗಳನ್ನು ಖರೀದಿಸುತ್ತಾರೆ. ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಲರ್​ನ ಜೆರ್ಸಿ ಹರಾಜಿಗೆ ಬರುತ್ತದೆ. ಆಗ ನಡೆಯುವುದೇ ಮಜಾ!


  ಇದನ್ನೂ ಓದಿ: Virushka Net Worth: ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಜೋಡಿ ಎಷ್ಟು ಶ್ರೀಮಂತರು ಗೊತ್ತೇ?


  ಹರಾಜಲ್ಲಿ ಪಡೆಯಲು ಪೈಪೋಟಿ!
  ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಕಡು ಕೆಂಪು ಬಣ್ಣದ ಜೆರ್ಸಿಯನ್ನು ಅತ್ತ ಭಕ್ತರೂ ಹರಾಜಿನಲ್ಲಿ ತಮ್ಮ ಪಾಲಾಗಿಸಿಕೊಳ್ಳಲು ಬಿಡ್ಡಿಂಗ್ ಕೂಗುತ್ತಿರುತ್ತಾರೆ. ಇತ್ತ ಮಸಾಲಾ ಚಾಯ್ ಮೀಡಿಯಾ ತಂಡದ ಸದಸ್ಯರೂ ಆರ್​ಸಿಬಿ ಜೆರ್ಸಿ ಕಲರ್ ಸೀರೆಯನ್ನು ಪಡೆಯಲು ಹರಾಜು ಕೂಗುತ್ತಾರೆ.


  ಕೊನೆಗೂ ಯಾರ ಪಾಲಾಯ್ತು?
  ಮೊದಲು 150 ರೂ.ವಿನಿಂದ ಶುರುವಾಗುವ ಹರಾಜು ಪ್ರಕ್ರಿಯೆ ಒಂದೇ ಸಮನೇ ಮೇಲೇರುತ್ತಾ ಹೋಗುತ್ತದೆ. ಇತ್ತ ಭಕ್ತರು ಹರಾಜು ಬೆಲೆಯನ್ನು ಏರಿಸುತ್ತಾರೆ. ಅತ್ತ ಮಸಾಲಾ ಚಾಯ್​ ತಂಡದವರೂ ಬೆಲೆ ಏರಿಸುತ್ತಾ ಹೋಗುತ್ತಾರೆ. ಕೊನೆಗೂ ಮಸಾಲಾ ಚಾಯ್ ಮೀಡಿಯಾ 750 ರೂ.ಗೆ ಆರ್​ಸಿಬಿ ಕಲರ್​ನ ದೇವಿಯ ಸೀರೆಯನ್ನು ಹರಾಜಿನಲ್ಲಿ ಪಡೆದುಕೊಳ್ಳುತ್ತಾರೆ!


  ಮಲೆನಾಡಿನ ಮಡಿಲು ಉತ್ತರ ಕನ್ನಡದ ಶಿರಸಿಯಲ್ಲಿ ಮಾರ್ಚ್​ 15 ರಿಂದ 9 ದಿನಗಳ ಅದ್ದೂರಿ ಜಾತ್ರೆ ವಿಜೃಂಭಣೆಯಿಂದ ನೆರವೇರಿತ್ತು. ಕರ್ನಾಟಕದ ಅತೀ ದೊಡ್ಡ ಜಾತ್ರೆ ಎಂಬ ಹಿರಿಮೆಗೆ ಶಿರಸಿ ಶ್ರೀ ಮಾರಿಕಾಂಬೆಯ ಜಾತ್ರೆ ಪಾತ್ರವಾಗಿದೆ.


  ಇದನ್ನೂ ಓದಿ: IPL 2022: ಹೊಸ ಅಳಿಯನನ್ನು ಅದ್ಧೂರಿಯಾಗಿ ಸ್ವಾಗತಿಸಿದ RCB, ಮುಂದಿನ ಪಂದ್ಯಕ್ಕೆ ಕಣಕ್ಕಿಳಿಯಲಿದ್ದಾರೆ ಮ್ಯಾಕ್ಸ್​ವೆಲ್


  ಶಿರಸಿ ಜಾತ್ರೆ ಮಾರಿ ಜಾತ್ರೆ ಎಂದೇ ಪ್ರಸಿದ್ಧ. ಶಿರಸಿಯ ಸಿರಿ ಶ್ರೀ ಮಾರಿಕಾಂಬೆಯ7 ಅಡಿ ವಿಗ್ರಹ, ಹಾರ, ವಜ್ರ, ನವರತ್ನ ಖಚಿತ ಸ್ವರ್ಣರತ್ನ, ನೂಪುರ, 8 ಕೈಗಳು, ಬೆಳ್ಳಿ, ಕಡಗಗಳಿಂದ ಅಲಂಕೃತ ದೇವಿಯನ್ನು ವೀಕ್ಷಿಸಲು ಎರಡು ಕಣ್ಣುಗಳು ಸಾಲದು! ಎಂದೇ ಭಕ್ತರು ದೇವಿಯನ್ನು ಪೂಜಿಸಿದ್ದರು.

  Published by:ಗುರುಗಣೇಶ ಡಬ್ಗುಳಿ
  First published: