ಹೊಸ ತಂಡ ಸೇರಿಕೊಂಡ ಆರ್​ಸಿಬಿ ಸ್ಟಾರ್ ವೇಗಿ ಡೇಲ್ ಸ್ಟೇನ್!

ಸ್ಟೇನ್ ಸೀಮಿತ ಓವರ್​ ಕ್ರಿಕೆಟ್​ನಲ್ಲಿ ಆಡುವುದಾಗಿ ಹೇಳಿದ್ದರು. ಸದ್ಯ ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಯ್ಕೆ ಸಮಿತಿ ಇವರನ್ನು ಯಾವುದೇ ಪಂದ್ಯಕ್ಕೆ ಸೇರಿಸಿಕೊಳ್ಳುತ್ತಿಲ್ಲ.

Vinay Bhat | news18-kannada
Updated:October 9, 2019, 11:16 AM IST
ಹೊಸ ತಂಡ ಸೇರಿಕೊಂಡ ಆರ್​ಸಿಬಿ ಸ್ಟಾರ್ ವೇಗಿ ಡೇಲ್ ಸ್ಟೇನ್!
ಬೌಲರ್ಗಳ ಪೈಕಿ ಡೇಲ್ ಸ್ಟೈನ್ ಅಥವಾ ಕೇನ್ ರಿಚರ್ಡಸನ್ ಆಯ್ಕೆ ಒಂದುಕಡೆಯಾದರೆ, ನವ್ದೀಪ್ ಸೈನಿ ಹಾಗೂ ಉಮೇಶ್ ಯಾದವ್ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದು ಖಚಿತ.
  • Share this:
ಬೆಂಗಳೂರು (ಅ. 09): ಐಪಿಎಲ್​ನ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ಪ್ರಮುಖ ಸ್ಟಾರ್ ಬೌಲರ್ ಡೇಲ್ ಸ್ಟೇನ್ ಬಿಗ್ ಬ್ಯಾಶ್ ಲೀಗ್ ಟೂರ್ನಿಯ ಮೆಲ್ಬೋರ್ನ್ ಸ್ಟಾರ್ಸ್​​ ತಂಡ ಸೇರಿಕೊಂಡಿದ್ದಾರೆ.

ಕಳೆದ 12ನೇ ಆವೃತ್ತಿಯ ಐಪಿಎಲ್​ನ ಅಂತಿಮ ಹಂತದಲ್ಲಿ ಆರ್​ಸಿಬಿ ತಂಡ ಸೇರಿಕೊಂಡ ಸ್ಟೇನ್ ತಾನಾಡಿದ ಎರಡೂ ಪಂದ್ಯಗಳಲ್ಲಿ ಭರ್ಜರಿ ಬೇಟೆಯಾಡಿದ್ದರು. ಎದುರಾಳಿಯ ಪ್ರಮುಖ ವಿಕೆಟ್ ಕಿತ್ತು ತಂಡಕ್ಕೆ ಜಯ ತಂದುಕೊಟ್ಟಿದ್ದರು. ಎರಡು ಪಂದ್ಯ ಆಡಿದ ಬಳಿಕ ಇಂಜುರಿಗೆ ತುತ್ತಾದ ಸ್ಟೇನ್ ಐಪಿಎಲ್​ನಿಂದ ಹೊರ ನಡೆದಿದ್ದರು.

 

IND vs SA: ಭಾರತಕ್ಕೆ ಕಠಿಣವಾಗಲಿದೆಯ ಎರಡನೇ ಟೆಸ್ಟ್​; ಈ ಒಬ್ಬ ಆಟಗಾರನ ಮೇಲೆ ಎಲ್ಲರ ಕಣ್ಣು!

ಬಳಿಕ ಮತ್ತೆ ಇಂಜುರಿಗೆ ತುತ್ತಾದ ಪರಿಣಾಮ ಸ್ಟೇನ್ ವಿಶ್ವಕಪ್​ನಿಂದಲೂ ಹಿಂದೆ ಸರಿಯಬೇಕಾಯಿತು. ಗಾಯದ ಸಮಸ್ಯೆಯಿಂದಾಗಿ ಕಳೆದ ಆಗಸ್ಟ್​ನಲ್ಲಿ ಸ್ಟೇನ್ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು.

ಆದರೆ, ಸೀಮಿತ ಓವರ್​ ಕ್ರಿಕೆಟ್​ನಲ್ಲಿ ಆಡುವುದಾಗಿ ಹೇಳಿದ್ದರು. ಸದ್ಯ ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಯ್ಕೆ ಸಮಿತಿ ಇವರನ್ನು ಯಾವುದೇ ಪಂದ್ಯಕ್ಕೆ ಸೇರಿಸಿಕೊಳ್ಳುತ್ತಿಲ್ಲ.

ಹೀಗಾಗಿ ಸ್ಟೇನ್ ಬಿಗ್​ಬ್ಯಾಶ್​​ನಲ್ಲಿ ಆಡಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಆಫ್ರಿಕಾದ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್ ಹಾಗೂ ಕ್ರಿಸ್ ಮೋರಿಸ್ ಬಿಗ್​ಬ್ಯಾಶ್​ನಲ್ಲಿ ಆಡುವುದಾಗಿ ಸಹಿ ಮಾಡಿದ್ದಾರೆ.​ ಎಬಿಡಿ ಇತ್ತೀಚೆಗಷ್ಟೆ ಬ್ರಿಸ್ಬೇನ್ ಹೀಟ್ ತಂಡ ಸೇರಿಕೊಂಡಿದ್ದಾರೆ.

First published: October 9, 2019, 11:16 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading