HOME » NEWS » Sports » CRICKET RCB BATSMAN DEVDUTT PADIKKAL IN AWE OF SUNSET IN LATEST INSTA PHOTO STG HG

ಸೂರ್ಯಾಸ್ತದ ಸಮಯದಲ್ಲಿ ಸೆಲ್ಫಿ ತೆಗೆದುಕೊಂಡ ಆರ್​ಸಿಬಿ ದಾಂಡಿಗ​ ದೇವದತ್‌ ಪಡಿಕ್ಕಲ್; ಫೋಟೋ ವೈರಲ್

Devdutt Padikkal: ವಿರಾಟ್ ಕೊಹ್ಲಿ ನೇತೃತ್ವದ ಅರ್‌ಸಿಬಿ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ 2021 ಅಮಾನತುಗೊಳ್ಳುವ ಮೊದಲು ಆಡಿದ ಆರು ಪಂದ್ಯಗಳಲ್ಲಿ ದೇವದತ್‌ ಪಡಿಕ್ಕಲ್‌ ಸಹ ಒಂದು ಭಾಗವಾಗಿದ್ದರು. ಈ ಆರು ಪಂದ್ಯಗಳ ಅವಧಿಯಲ್ಲಿ ಅವರು 195 ರನ್ ಗಳಿಸುವಲ್ಲಿ ಯಶಸ್ವಿಯಾದರು. ಇಲ್ಲಿಯವರೆಗೆ ಐಪಿಎಲ್‌ನಲ್ಲಿ ಅವರ ಒಟ್ಟು ರನ್ ಸ್ಕೋರ್ 668 ರನ್.

news18-kannada
Updated:May 22, 2021, 2:46 PM IST
ಸೂರ್ಯಾಸ್ತದ ಸಮಯದಲ್ಲಿ ಸೆಲ್ಫಿ ತೆಗೆದುಕೊಂಡ ಆರ್​ಸಿಬಿ ದಾಂಡಿಗ​ ದೇವದತ್‌ ಪಡಿಕ್ಕಲ್; ಫೋಟೋ ವೈರಲ್
Devdutt Padikka/ ದೇವದತ್‌ ಪಡಿಕ್ಕಲ್
  • Share this:
ಐಪಿಎಲ್‌ ಕ್ರಿಕೆಟ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಭಾಗವಾಗಿರುವ ದೇವದತ್‌ ಪಡಿಕ್ಕಲ್ ತಮ್ಮ ಅದ್ಭುತವಾದ ಸೆಲ್ಫಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ, ಅವರು ಮನಸ್ಸಿಗೆ ಮುದ ನೀಡುವ ಸೂರ್ಯಾಸ್ತದ ಸಮಯಲ್ಲಿ ನಿಂತುಕೊಂಡು ಪೋಸ್‌ ನೀಡಿದ್ದಾರೆ. ಈ ಸ್ನ್ಯಾಪ್‌ನಲ್ಲಿ ಅವರು ಸಮುದ್ರದ ನೋಟ ಮತ್ತು ಸ್ಪಷ್ಟ ಆಕಾಶವನ್ನು ಆನಂದಿಸುತ್ತಿದ್ದಂತೆ ಗಾಜಿನ ಕಿಟಕಿಯ ಮೇಲೆ ತಲೆ ಒರಗುತ್ತಿದ್ದಾರೆ. ಈ ಫೋಟೋಗಾಗಿ ಕ್ರಿಕೆಟಿಗ ಶರ್ಟ್‌ಲೆಸ್‌ ಆಗಿದ್ದು, ಟ್ಯುಪಾಕ್‌ ಶಕುರ್ ಅವರ ಒಳನೋಟವುಳ್ಳ ಉಲ್ಲೇಖದೊಂದಿಗೆ ತಮ್ಮ ಪೋಸ್ಟ್ ಅನ್ನು ಅಪ್ಲೋಡ್‌ ಮಾಡಿದ್ದಾರೆ. ಐಪಿಎಲ್‌ ಅರ್ಧಕ್ಕೇ ಅಮಾನತಾಗಿದ್ದು, ಸದ್ಯ ಯಾವುದೇ ಪಂದ್ಯಾವಳಿ ಇರದ ಕಾರಣ ತಮ್ಮ ಬಿಡುವಿನ ವೇಳೆಯಲ್ಲಿ ಅವರು ತಮ್ಮ ಸಾಮಾಜಿಕ ಜಾಲತಾಣ ಫಾಲೋವರ್‌ಗಳನ್ನು ಮನರಂಜಿಸುವ ಕೆಲಸ ಮಾಡುತ್ತಿದ್ದಾರೆ ಪಡಿಕ್ಕಲ್.

ಈ ಸ್ಟನ್ನಿಂಗ್ ಫೋಟೋವನ್ನು ಅವರ ಇನ್​​ಸ್ಟಾಗ್ರಾಮ್‌ ಕುಟುಂಬ ಇಷ್ಟಪಟ್ಟಿದ್ದು, ಮತ್ತು ಸುಮಾರು 5 ಲಕ್ಷ ಲೈಕ್ ಗಳಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಈ ಬ್ಯಾಟ್ಸ್‌ಮನ್‌ ಅನ್ನು ಫಾಲೋ ಮಾಡುತ್ತಿದ್ದಾರೆ. ತನ್ನ ಅಭಿಮಾನಿಗಳಿಗೆ ನಿಯಮಿತವಾಗಿ ದೇವದತ್‌ ಪಡಿಕ್ಕಲ್‌ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುವುದನ್ನು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದು. ಇತ್ತೀಚೆಗೆ, ಪಡಿಕ್ಕಲ್‌ ಇಂಡಿಯನ್ ಪ್ರೀಮಿಯರ್ ಲೀಗ್‌ನ ಗ್ರೂಪ್‌ ಫೋಟೋಗಳನ್ನು ಹಂಚಿಕೊಂಡಿದ್ದರು.








View this post on Instagram






A post shared by Dev (@devpadikkal19)






ವಿರಾಟ್ ಕೊಹ್ಲಿ ನೇತೃತ್ವದ ಅರ್‌ಸಿಬಿ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ 2021 ಅಮಾನತುಗೊಳ್ಳುವ ಮೊದಲು ಆಡಿದ ಆರು ಪಂದ್ಯಗಳಲ್ಲಿ ದೇವದತ್‌ ಪಡಿಕ್ಕಲ್‌ ಸಹ ಒಂದು ಭಾಗವಾಗಿದ್ದರು. ಈ ಆರು ಪಂದ್ಯಗಳ ಅವಧಿಯಲ್ಲಿ ಅವರು 195 ರನ್ ಗಳಿಸುವಲ್ಲಿ ಯಶಸ್ವಿಯಾದರು. ಇಲ್ಲಿಯವರೆಗೆ ಐಪಿಎಲ್‌ನಲ್ಲಿ ಅವರ ಒಟ್ಟು ರನ್ ಸ್ಕೋರ್ 668 ರನ್.

ಬ್ಯಾಟ್ಸ್‌ಮನ್ 2021 ರಲ್ಲಿ ನಡೆದ ಐಪಿಎಲ್ ಪಂದ್ಯವೊಂದರ ಫೋಟೋವೊಂದನ್ನು ಏಪ್ರಿಲ್ 23 ರಂದು ಹಂಚಿಕೊಂಡಿದ್ದು, ಆ ವೇಳೆ ಅವರು ಶತಕ ಬಾರಿಸಿದ್ದರು. ಫೋಟೋದಲ್ಲಿ, ಪಡಿಕ್ಕಲ್ ತನ್ನ ಹೆಲ್ಮೆಟ್‌ ಅನ್ನು ಒಂದು ಕೈಯಲ್ಲಿ ಮತ್ತು ಇನ್ನೊಂದು ಕೈಯಲ್ಲಿ ಬ್ಯಾಟ್ ಅನ್ನು ಹಿಡಿದಿರುವುದನ್ನು ಕಾಣಬಹುದು. ಈ ಪಂದ್ಯ ಏಪ್ರಿಲ್ 22 ರಂದು ನಡೆಯಿತು ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಜಸ್ಥಾನ್ ರಾಯಲ್ಸ್ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿತು. ನಿರೀಕ್ಷೆಯಂತೆ, ದೇವದತ್ ಪಡಿಕ್ಕಲ್‌ ಅವರಿಗೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಯಿತು. ಮಹಾರಾಷ್ಟ್ರದ ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆದಿತ್ತು.










View this post on Instagram






A post shared by Dev (@devpadikkal19)






ಕೇರಳದ ಎಡಪಾಲ್‌ನಲ್ಲಿ ಜನಿಸಿದ ದೇವದತ್‌ ಪಡಿಕ್ಕಲ್‌ ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕವನ್ನೂ ಪ್ರತಿನಿಧಿಸಿದ್ದಾರೆ. ಅವರು ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ತಮ್ಮ ಸಾಧನೆಯಿಂದ ಅವರ ವಿರುದ್ಧ ಟೀಕೆ ಮಾಡುವವರ ಬಾಯಿ ಮುಚ್ಚಿಸಿದ್ದರು. ದೇಶವನ್ನೂ ಪ್ರತಿನಿಧಿಸಿರುವ ಪಡಿಕ್ಕಲ್, 19 ವರ್ಷದೊಳಗಿನವರ ಭಾರತ ತಂಡದಲ್ಲಿ ಆಡಿದ್ದಾರೆ.
First published: May 22, 2021, 2:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories