ಕೊಹ್ಲಿ-ರೋಹಿತ್ ಅಲ್ಲ; 21ನೇ ಶತಮಾನದ ಮೌಲ್ಯಯುತ ಭಾರತೀಯ ಕ್ರಿಕೆಟಿಗ ಇವರೇ ನೋಡಿ

Most Valuable Test Player: ಸಮೀಕ್ಷೆಯಲ್ಲಿ 97.3 ರೇಟಿಂಗ್ ಪಡೆದ ಜಡೇಜಾ, ವಿಶ್ವಮಟ್ಟದಲ್ಲಿ 2ನೇ ಅತಿ ಹೆಚ್ಚು ಮೌಲ್ಯ ಹೊಂದಿರುವ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಶ್ರೀಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳಿಧರನ್​ಗೆ ಮೊದಲ ಸ್ಥಾನ ಸಿಕ್ಕಿದೆ.

ಟೀಂ ಇಂಡಿಯಾ ಆಟಗಾರರು.

ಟೀಂ ಇಂಡಿಯಾ ಆಟಗಾರರು.

 • Share this:
  ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ಪ್ರತಿಷ್ಠಿತ ವಿಸ್ಡನ್ ಮ್ಯಾಗಝಿನ್‌ನಿಂದ 21ನೇ ಶತಮಾನದ ಭಾರತದ ಅತ್ಯಮೂಲ್ಯ ಟೆಸ್ಟ್ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ವಿಸ್ಡನ್ ಪತ್ರಿಕೆ ಜಡೇಜಾ ಅವರನ್ನು ಅತ್ಯಮೂಲ್ಯ ಟೆಸ್ಟ್ ಆಟಗಾರನೆಂದು ಹೇಳಿ, 97.3 ಎಂವಿಪಿ ರೇಟಿಂಗ್ ನೀಡಿದೆ. ಈ ಮೂಲಕ ವಿರಾಟ್ ಕೊಹ್ಲಿ, ಎಂ.ಎಸ್. ಧೋನಿ, ರೋಹಿತ್ ಶರ್ಮಾ ಅವರಂತಹ  ದಿಗ್ಗಜ ಕ್ರಿಕೆಟಿಗರನ್ನು ಹಿಂದಿಕ್ಕೆ ಭಾರತದ ವ್ಯಾಲ್ಯೂಯೇಬಲ್ ಕ್ರಿಕೆಟರ್ ಎನ್ನುವ ಗೌರವಕ್ಕೆ ಸೌರಾಷ್ಟ್ರ ಮೂಲದ ಕ್ರಿಕೆಟಿಗ ಭಾಜನರಾಗಿದ್ದಾರೆ.

  ಈ ಕುರಿತು ಟ್ವೀಟ್ ಮಾಡಿರುವ ಜಡ್ಡು, "ಟೀಂ ಇಂಡಿಯಾಗೆ ಆಡುವುದು ನನ್ನ ಕನಸಾಗಿತ್ತು. ಇದರ ಹೊರತಾಗಿ, ಅತ್ಯಮೂಲ್ಯ ಆಟಗಾರನೆಂಬ ಕೀರ್ತಿಗೆ ಭಾಜನರಾಗಿರುವುದರಿಂದ ಇನ್ನಷ್ಟು ಧನ್ಯನಾಗಿದ್ದೇನೆ, ನನ್ನ ಅಭಿಮಾನಿಗಳು ತಂಡದ ಸಹಕ್ರೀಡಾಪಟುಗಳು, ಕೋಚ್, ಸಿಬ್ಬಂದಿವರ್ಗದ ಸಹಕಾರ ಹಾಗೂ ಅವರ ತುಂಬು ಹೃದಯದ ಪ್ರೀತಿ ಹಾಗೂ ಬೆಂಬಲಗಳಿಗೆ ಧನ್ಯವಾದ ತಿಳಿಸುತ್ತೇನೆ" ಎಂದಿದ್ದಾರೆ ಜಡೇಜಾ.

  IPL 2020: ಐಪಿಎಲ್ ಆಯೋಜನೆ ಪಕ್ಕಾ ಎನ್ನುತ್ತಿವೆ ಮೂಲಗಳು: ಈ ನಗರದಲ್ಲಿ ಸಂಪೂರ್ಣ ಟೂರ್ನಿ

  2012ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಜಡೇಜಾ, ಇದುವರೆಗೆ 49 ಟೆಸ್ಟ್ ಪಂದ್ಯಗಳಲ್ಲಿ ಏಕೈಕ ಶತಕ, 14 ಅರ್ಧಶತಕಗಳ ಸಹಿತ 1,869 ರನ್ ಪೇರಿಸಿದ್ದಾರೆ. ಮತ್ತು 213 ವಿಕೆಟ್ ಕಬಳಿಸಿದ್ದಾರೆ. ಕ್ರಿಕ್ ವಿಜ್ ಮಾಹಿತಿಯ ವಿಶ್ಲೇಷಣೆಯಂತೆ, ವಿಶ್ವದ ಪ್ರತಿಯೊಬ್ಬ ಕ್ರಿಕೆಟಿಗರನ್ನು ‘ಎಂವಿಪಿ ರೇಟಿಂಗ್’ಗೆ ಒಳಪಡಿಸಿ, ಪಂದ್ಯದ ಮೇಲೆ ಅವರ ಪರಿಣಾಮದ ಬಗ್ಗೆ ಸಾಂಖ್ಯಿಕವಾಗಿ ಲೆಕ್ಕಾಚಾರ ಹಾಕಲಾಗುತ್ತದೆ.

  ಸಮೀಕ್ಷೆಯಲ್ಲಿ 97.3 ರೇಟಿಂಗ್ ಪಡೆದ ಜಡೇಜಾ, ವಿಶ್ವಮಟ್ಟದಲ್ಲಿ 2ನೇ ಅತಿ ಹೆಚ್ಚು ಮೌಲ್ಯ ಹೊಂದಿರುವ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಶ್ರೀಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳಿಧರನ್​ಗೆ ಮೊದಲ ಸ್ಥಾನ ಸಿಕ್ಕಿದೆ. ತಂಡದ ಯಶಸ್ಸಿಗೆ ಹಲವು ರೀತಿಗಳಲ್ಲಿ, ಕಠಿಣ ಪರಿಸ್ಥಿತಿಗಳಲ್ಲಿ ನೆರವಾಗಿರುವ ಅಂಕಿ-ಅಂಶಗಳನ್ನಿಟ್ಟುಕೊಂಡು ಸಮೀಕ್ಷೆ ನಡೆಲಾಗಿದೆ.

  Irfan Pathan: ಚಾಪೆಲ್‌ ಅಲ್ಲ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವಂತೆ ಸೂಚಿಸಿದ್ದು ಇವರು..!

  ’’ಭಾರತದ ನಂ.1 ಆಟಗಾರನಾಗಿ ಜಡೇಜಾ ಹೆಸರು ನೋಡಿ ನಮಗೂ ಆಶ್ಚರ್ಯವಾಯಿತು. ಅವರು ತಂಡಕ್ಕೆ ಖಾಯಂ ಆಯ್ಕೆಯ ಆಟಗಾರನಲ್ಲ. ಆದರೆ, ಅವರನ್ನು ತಂಡಕ್ಕೆ ಆಯ್ಕೆ ಮಾಡಿದಾಗಲೆಲ್ಲ ಮುಂಚೂಣಿ ಬೌಲರ್ ಆಗಿ ಮಿಂಚಿದ್ದಾರೆ. ಮತ್ತು 6ನೇ ಕ್ರಮಾಂಕದ ಬ್ಯಾಟಿಂಗ್‌ನಲ್ಲೂ ಉತ್ತಮ ನಿರ್ವಹಣೆ ತೋರಿದ್ದಾರೆ. ಆಡಿದ ಪಂದ್ಯಗಳಲ್ಲಿ ಅವರಿಂದ ಹೆಚ್ಚು ಕೊಡುಗೆ ಬಂದಿರುತ್ತದೆ’’ ಎಂದು ಕ್ರಿಕ್ ವಿಜ್‌ನ ಟ್ರೆಡ್ಡಿ ವಿಲ್ಡ್ ಅಭಿಪ್ರಾಯಪಟ್ಟಿದ್ದಾರೆ.
  First published: