ಧೋನಿ ಇಲ್ಲದ ಕಾರಣ ಈ ಬೌಲರುಗಳು ಮಿಂಚುತ್ತಿಲ್ಲ: ಮಾಜಿ ಕ್ರಿಕೆಟಿಗನ ಹೇಳಿಕೆ

ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಚಹಲ್, ಜಡೇಜಾ ಮತ್ತು ಕುಲದೀಪ್ ಅವರ ಬೌಲಿಂಗ್​ನಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದರು. ಕುಲದೀಪ್ ಯಾದವ್ ಕೇವಲ ಒಂದು ವಿಕೆಟ್ ಕಬಳಿಸಲಷ್ಟೇ ಯಶಸ್ವಿಯಾಗಿದ್ದರು. ಅ

Dhoni

Dhoni

 • Share this:
  ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಟೀಮ್ ಇಂಡಿಯಾ ಸ್ಪಿನ್ನರ್‌ಗಳು ಹೆಣಗಾಡುತ್ತಿದ್ದಾರೆ. ಯಜುವೇಂದ್ರ ಚಹಲ್, ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ವಿಕೆಟ್ ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ತಂಡ ಸೋಲಲು ಮುಖ್ಯ ಕಾರಣ ಬೌಲರ್‌ಗಳ ನಿರಾಶಾದಾಯಕ ಪ್ರದರ್ಶನ. ಸ್ಟಂಪ್ ಹಿಂದೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇರದಿರುವುದರಿಂದ ಭಾರತ ಸ್ಪಿನ್ನರ್‌ಗಳು ಹೆಣಗಾಡುತ್ತಿದ್ದಾರೆ ಎಂದು ಭಾರತ ತಂಡದ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಕಿರಣ್ ಮೋರೆ ಅಭಿಪ್ರಾಯಪಟ್ಟಿದ್ದಾರೆ.

  ಧೋನಿ ಯಾವಾಗಲೂ ಸ್ಟಂಪ್‌ನ ಹಿಂದಿನಿಂದ ಸ್ಪಿನ್ನರ್‌ಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು. ಬೌಲಿಂಗ್ ಮಾಡಬೇಕಾದ ಚೆಂಡಿನ ಬಗ್ಗೆ ಬೌಲರ್‌ಗೆನಿರಂತರವಾಗಿ ಸಲಹೆ ನೀಡುತ್ತಿದ್ದರು. ಧೋನಿ ವಿಕೆಟ್‌ನ ಹಿಂದೆ ಇರುವುದು ಸ್ಪಿನ್ನರ್‌ಗಳಿಗೆ ಸಾಕಷ್ಟು ಸಹಾಯ ಮಾಡಿತು. ಚಾಹಲ್ ಮತ್ತು ಕುಲದೀಪ್ ಯಾದವ್ ಅವರು ಅನೇಕ ಸಂದರ್ಶನಗಳಲ್ಲಿ ಧೋನಿಯ ಬಹಿರಂಗಪಡಿಸಿದ್ದರು.

  ಧೋನಿಯ ಕಾಲದಲ್ಲಿ, ಅವರು ಯಾವ ಚೆಂಡನ್ನು ಎಲ್ಲಿ ಬೌಲ್ ಮಾಡಬೇಕು. ಹೇಗೆ ಬೌಲಿಂಗ್ ಮಾಡಬೇಕು ಎಂಬುದರ ಕುರಿತು ನಿರಂತರವಾಗಿ ಸಲಹೆ ನೀಡುತ್ತಿದ್ದರು. ಇದೀಗ ಧೋನಿ ಅಲ್ಲಿ ವಿಕೆಟ್‌ನ ಹಿಂದೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಭಾರತೀಯ ಸ್ಪಿನ್ನರ್‌ಗಳು ಕಷ್ಟಪಡುತ್ತಿದ್ದಾರೆ. ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ಇನ್ಮುಂದೆ ಯಶಸ್ವಿ ಬೌಲರುಗಳಾಗುವುದಿಲ್ಲ ಎಂದು ಮೋರೆ ತಿಳಿಸಿದರು.

  ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಚಹಲ್, ಜಡೇಜಾ ಮತ್ತು ಕುಲದೀಪ್ ಅವರ ಬೌಲಿಂಗ್​ನಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದರು. ಕುಲದೀಪ್ ಯಾದವ್ ಕೇವಲ ಒಂದು ವಿಕೆಟ್ ಕಬಳಿಸಲಷ್ಟೇ ಯಶಸ್ವಿಯಾಗಿದ್ದರು. ಅದೇ ಸಮಯದಲ್ಲಿ, ಜಡೇಜಾ ಮೂರು ಪಂದ್ಯಗಳಲ್ಲಿ 180 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದಿದ್ದರು. ಯುಜುವೇಂದ್ರ ಚಹಲ್ ಎರಡು ಏಕದಿನ ಪಂದ್ಯಗಳಲ್ಲಿ 160 ರನ್ 1 ವಿಕೆಟ್ ಮಾತ್ರ ಪಡೆಯಲು ಯಶಸ್ವಿಯಾಗಿದ್ದರು.

  ಇದನ್ನೂ ಓದಿ: 55 ಎಸೆತ, 5 ಬೌಂಡರಿ, 20 ಸಿಕ್ಸ್, ಸ್ಪೋಟಕ ಶತಕ: ಈ ಬ್ಯಾಟ್ಸ್​ಮನ್ ಮೇಲೆ ಕಣ್ಣಿಟ್ಟಿದೆ RCB..!
  Published by:zahir
  First published: