HOME » NEWS » Sports » CRICKET RAVICHANDRAN ASHWIN VOTED ICC PLAYER OF THE MONTH FOR FEBRUARY 2021 ZP

Ravichandran Ashwin: ಇಂಗ್ಲೆಂಡ್ ವಿರುದ್ಧ ಭರ್ಜರಿ ಪ್ರದರ್ಶನ: ಅಶ್ವಿನ್​ಗೆ ಐಸಿಸಿ ತಿಂಗಳ ಆಟಗಾರ ಗೌರವ..!

ಈ ಎಲ್ಲಾ ಕಾರಣಗಳಿಂದ ಫೆಬ್ರವರಿ ತಿಂಗಳ ಆಟಗಾರನಾಗಿ ರವಿಚಂದ್ರನ್ ಅಶ್ವಿನ್ ಅವರನ್ನು ಐಸಿಸಿ ಆಯ್ಕೆ ಮಾಡಿದೆ. ಈ ಮೂಲಕ ಈ ಗೌರವಕ್ಕೆ ಪಾತ್ರರಾದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾಲಾಗಿದೆ.

news18-kannada
Updated:March 9, 2021, 9:20 PM IST
Ravichandran Ashwin: ಇಂಗ್ಲೆಂಡ್ ವಿರುದ್ಧ ಭರ್ಜರಿ ಪ್ರದರ್ಶನ: ಅಶ್ವಿನ್​ಗೆ ಐಸಿಸಿ ತಿಂಗಳ ಆಟಗಾರ ಗೌರವ..!
Ravichandran Ashwin
  • Share this:
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC)ಮಾಸಿಕ ಕ್ರಿಕೆಟಿಗನ ಹೆಸರು ಘೋಷಿಸಿದ್ದು, ಈ ಬಾರಿಯ ಐಸಿಸಿ ಆಟಗಾರನಾಗಿ ಟೀಮ್ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಆಯ್ಕೆಯಾಗಿದ್ದಾರೆ. ಈ ಮೂಲಕ 2ನೇ ತಿಂಗಳಲ್ಲೂ ಭಾರತೀಯ ಆಟಗಾರರೇ ಐಸಿಸಿ ಮಾಸಿಕ ಆಟಗಾರರಾಗಿ ಆಯ್ಕೆಯಾಗಿದ್ದಾರೆ. ಇದಕ್ಕೂ ಮುನ್ನ ರಿಷಭ್ ಪಂತ್ ಈ ಗೌರವಕ್ಕೆ ಪಾತ್ರರಾಗಿದ್ದರು.

ಫೆಬ್ರವರಿ ತಿಂಗಳಲ್ಲಿ ನಡೆದ ಪಂದ್ಯಗಳನ್ನು ಗಣನೆಗೆ ತೆಗೆದುಕೊಂಡು ಈ ಗೌರವಕ್ಕೆ ಆಟಗಾರರನ್ನು ಆಯ್ಕೆ ಮಾಡಲಾಗಿತ್ತು. ಟೀಮ್ ಇಂಡಿಯಾದ ಆರ್‌. ಅಶ್ವಿನ್‌, ಇಂಗ್ಲೆಂಡ್‌ ನಾಯಕ ಜೋ ರೂಟ್‌ ಹಾಗೂ ವೆಸ್ಟ್ ಇಂಡೀಸ್‌ ತಂಡದ ಕೈಲ್‌ ಮೇಯರ್ಸ್ ಅವರನ್ನು ಐಸಿಸಿ ನಾಮ ನಿರ್ದೇಶನ ಮಾಡಿತ್ತು. ಆದರೆ ಅಂತಿಮವಾಗಿ ತಿಂಗಳ ಆಟಗಾರನಾಗಿ ಅಶ್ವಿನ್ ಹೊರಹೊಮ್ಮಿದ್ದಾರೆ.

ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ ನಡೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಅಶ್ವಿನ್ ಐದು ವಿಕೆಟ್​ಗಳ ಸಾಧನೆ ಮಾಡಿದ್ದರು. ಅಲ್ಲದೆ 2ನೇ ಟೆಸ್ಟ್​ನಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಅಲ್ಲದೆ ಫೆಬ್ರವರಿಯಲ್ಲಿ ನಡೆದ ಮೂರು ಟೆಸ್ಟ್ ಪಂದ್ಯಗಳಿಂದ ಒಟ್ಟು 24 ವಿಕೆಟ್ ಕಬಳಿಸಿ ಮಿಂಚಿದ್ದರು. ಇದರೊಂದಿಗೆ ಟೆಸ್ಟ್ ಕ್ರಿಕೆಟ್​ನಲ್ಲಿ 400 ವಿಕೆಟ್ ಸಾಧನೆ ಮಾಡಿದ್ದರು.
Youtube Video

ಈ ಎಲ್ಲಾ ಕಾರಣಗಳಿಂದ ಫೆಬ್ರವರಿ ತಿಂಗಳ ಆಟಗಾರನಾಗಿ ರವಿಚಂದ್ರನ್ ಅಶ್ವಿನ್ ಅವರನ್ನು ಐಸಿಸಿ ಆಯ್ಕೆ ಮಾಡಿದೆ. ಈ ಮೂಲಕ ಈ ಗೌರವಕ್ಕೆ ಪಾತ್ರರಾದ ಎರಡನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಅಶ್ವಿನ್ ಪಾಲಾಗಿದೆ. ಇದಕ್ಕೂ ಮುನ್ನ ಜನವರಿ ತಿಂಗಳ ಆಟಗಾರನ ಗೌರವ ರಿಷಭ್ ಪಂತ್​ಗೆ ನೀಡಲಾಗಿತ್ತು.
Published by: zahir
First published: March 9, 2021, 9:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories