ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಟಿಕ್ಟಾಕ್ನಲ್ಲಿ ಹೆಚ್ಚು ಜನಪ್ರಿಯತೆಗಳಿಸಿದ್ದಾರೆ. ದಿನಕ್ಕೊಂದು ವಿಡಿಯೋಗಳನ್ನು ಟಿಕ್ಟಾಕ್ನಲ್ಲಿ ಹರಿಯ ಬಿಡುತ್ತಿದ್ದಾರೆ. ತಮಿಳು, ತೆಲುಗು ಭಾಷೆಗಳಲ್ಲಿ ಟಿಕ್ಟಾಕ್ ಮಾಡುತ್ತಾ ಭಾರತೀಯರಿಗೆ ಮತ್ತಷ್ಟು ಹತ್ತಿರವಾಗಿದ್ದರು. ಆದರೀಗ ಟಿಕ್ಟಾಕ್ ಬ್ಯಾನ್ ಆಗಿದೆ. ಕೇಂದ್ರ ಸರ್ಕಾರ ಬೈಟೆಡ್ಯಾನ್ಸ್ ಒಡೆತನದ ಟಿಕ್ಟಾಕ್ ಆ್ಯಪ್ ಅನ್ನು ಬ್ಯಾನ್ ಮಾಡಿದೆ. ಪ್ಲೇ ಸ್ಟೋರ್ ಕೂಡ ಈ ಆ್ಯಪ್ ಅನ್ನು ಕಿತ್ತೆಸೆದಿದೆ. ಇದೀಗ ಈ ವಿಚಾರವಾಗಿ ಟೀಂ ಇಂಡಿಯಾದ ಸ್ಪಿನ್ನರ್ ಆರ್ ಅಶ್ವಿನ್ ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾವೊಂದರ ಫೇಮಸ್ ಡೈಲಾಗ್ ಅನ್ನು ಟ್ವಿಟ್ಟರ್ನಲ್ಲಿ ಬರೆಯುವ ಮೂಲಕ ಡೇವಿಡ್ ವಾರ್ನರ್ ಮುಂದೇನು ಮಾಡುತ್ತಾರೆ? ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.
ಐಪಿಎಲ್ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಕೊರೋನಾ ಸಮಯದಲ್ಲಿ ಆಸ್ಟ್ರೇಲಿಯಾದ ಮನೆಯಲ್ಲಿ ಫ್ಯಾಮಿಲಿ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಬಿಡುವಿದ್ದಾಗ ಟಿಕ್ಟಾಕ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ತಾವು ಮಾತ್ರವಲ್ಲದೆ, ಹೆಂಡತಿ ಮಕ್ಕಳನ್ನು ಜೊತೆಗೂಡಿಸಿ ತಮಿಳು, ತೆಲುಗು, ಹಿಂದಿ ಭಾಷೆಯ ಸಿನಿಮಾ ಡೈಲಾಗ್, ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕುತ್ತ ಟಿಕ್ಟಾಕ್ ಮಾಡುತ್ತಿದ್ದರು.
— Ashwin (During Covid 19)🇮🇳 (@ashwinravi99) June 29, 2020
ಸರ್ಕಾರ ಟಿಕ್ಟಾಕ್ ಆ್ಯಪ್ ನಿಷೇಧ ಮಾಡಿರುವ ಕುರಿತಾಗಿ ಪತ್ರಕರ್ತೆಯೊಬ್ಬರು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಆಶ್ವಿನ್ ಅವರು ‘ಅಪ್ಪೋ ಅನ್ವರ್?‘ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಡೇವಿಡ್ ವಾರ್ನರ್ರನ್ನು ಟ್ಯಾಗ್ ಮಾಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವರ ‘ಬಾಷಾ’ ಸಿನಿಮಾದ ಜನಪ್ರಿಯ ಡೈಲಾಗ್ ಅನ್ನು ಅಶ್ವಿನ್ ಟ್ವಿಟ್ಟರ್ನಲ್ಲಿ ಬರೆದಿದ್ದಾರೆ.
ಇತ್ತೀಚೆಗೆ ವಾರ್ನರ್ ಬಾಹುಬಲಿ ಸಿನಿಮಾದ ಡೈಲಾಗ್, ಮಹೇಶ್ ಬಾಬು, ಅಜಿತ್, ಅಲ್ಲು ಅರ್ಜುನ್ ಸಿನಿಮಾದ ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಆ ವಿಡಿಯೋವನ್ನು ಟಿಕ್ಟಾಕ್ನಲ್ಲಿ ಹಂಚಿಕೊಂಡಿದ್ದರು. ವಾರ್ನರ್ ಅವರ ಟಿಕ್ಟಾಕ್ ವಿಡಿಯೋ ತುಣುಕುಗಳು ಭಾರೀ ವೈರಲ್ ಆಗಿತ್ತು. ಆದರೀಗ ಕೇಂದ್ರ ಸರ್ಕಾರ ಭಾರತದಲ್ಲಿ ಟಿಕ್ಟಾಕ್ ಆ್ಯಪ್ ಅನ್ನು ಬ್ಯಾನ್ ಮಾಡಿದೆ. ವಾರ್ನರ್ ತನ್ನ ಭಾರತದ ಅಭಿಮಾನಿಗಳಿಗೆ ಮನೋರಂಜನೆ ನೀಡಲು ಮುಂದೇನು ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ