Ravi Shastri- ಗೆಲ್ಲಲು ಯತ್ನಿಸದೆಯೇ ಸೋತೆವು, ಆಟಗಾರರಲ್ಲಿ ಆ ಅಂಶವೇ ಇರಲಿಲ್ಲ: ರವಿಶಾಸ್ತ್ರಿ

T20 World Cup: ಒಂದು ಪಂದ್ಯದಲ್ಲಿ ಯಾವುದೇ ತಂಡ ಗೆಲ್ಲುವ ಪ್ರಯತ್ನ ಮಾಡಿ ಸೋಲುವುದುಂಟು. ಆದರೆ ನಾನು ಗೆಲ್ಲುವ ಪ್ರಯತ್ನ ಮಾಡದೆಯೇ ಸೋತೆವು. ತಂಡದ ಆಟಗಾರರಲ್ಲಿ ಆ ಅಂಶವೇ ಇರಲಿಲ್ಲ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ರವಿಶಾಸ್ತ್ರಿ.

ರವಿಶಾಸ್ತ್ರಿ.

  • Share this:
ಐಸಿಸಿ ಪುರುಷರ ಟಿ20 ವಿಶ್ವಕಪ್ 2021 ನಿಂದ ಟೀಮ್ ಇಂಡಿಯಾದ ಪ್ರದರ್ಶನದ ಬಗ್ಗೆ ತಂಡದ ನಿರ್ಗಮಿತ ಮುಖ್ಯ ತರಬೇತುದಾರ ರವಿಶಾಸ್ತ್ರಿ (Team India former Head Coach Ravi Shastri) ಪ್ರತಿಕ್ರಿಯಿಸಿದ್ದು, ಭಾರತ ತಂಡದಿಂದ ನಿರೀಕ್ಷಿತ ಮಟ್ಟದ ಆಟ ಯಾಕೆ ಬರಲಿಲ್ಲ ಎಂಬುದಕ್ಕೆ ಕಾರಣ ನೀಡಿದ್ದಾರೆ. ಸುದ್ದಿಗಾರರರೊಂದಿಗೆ ಮಾತನಾಡಿದ ರವಿಶಾಸ್ತ್ರಿ, ತಂಡದ ನಾಯಕ ವಿರಾಟ್ ಕೊಹ್ಲಿ (Virat Kohli) ಮತ್ತು ಇತರ ಭಾರತೀಯ ಆಟಗಾರರು ಸುಮಾರು 6 ತಿಂಗಳ ಕಾಲ ಬಯೋಬಬಲ್ ವ್ಯವಸ್ಥೆಯಲ್ಲಿ (Bio Bubble System) ಇದ್ದರಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ವಿರುದ್ಧ ಸೋಲನ್ನು ಅನುಭವಿಸಿದ ನಂತರ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಟಿ20 ವಿಶ್ವಕಪ್ 2021ರ ನಾಕೌಟ್ ಹಂತ ತಲುಪಲು ವಿಫಲವಾಗಿತ್ತು ಮತ್ತು ಟಿ20 ವಿಶ್ವಕಪ್‌ನಿಂದ ಬೇಗನೆ ಹೊರ ಬಿದ್ದಿತು.

"ಈ ಪ್ರತ್ಯೇಕ ಸ್ಥಳದ ವ್ಯವಸ್ಥೆಯಿಂದ (Biosecure-bubble) ಭಾರತೀಯ ಆಟಗಾರರು ಮಾನಸಿಕವಾಗಿ ಮತ್ತು ದೈಹಿಕವಾಗಿ ಆಯಾಸಗೊಂಡಿದ್ದರು. ಜೊತೆಗೆ, ಐಪಿಎಲ್ ಮತ್ತು ಟಿ20 ವಿಶ್ವಕಪ್ ನಡುವೆ ಆಟಗಾರರಿಗೆ ಬಿಡುವುದು ಸಿಕ್ಕಿದ್ದು ತೀರಾ ಕಡಿಮೆ" ಎಂದು ಶಾಸ್ತ್ರಿ ಹೇಳಿದ್ದಾರೆ.

ನನಗೆ ವಯಸ್ಸಾಗಿ ಹೌದು, ಆದರೆ…

“ನಾನು ಮಾನಸಿಕವಾಗಿ ಬಳಲಿದ್ದೇನೆ. ನನ್ನ ವಯಸ್ಸಿನಲ್ಲಿ ಅದು ಸಹಜವೇ ಆಗಿದೆ. ಆದರೆ ಯುವ ಆಟಗಾರರು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲಿದ್ದಾರೆ. ಸಾಮಾನ್ಯವಾಗಿ ನಾವು ಐಪಿಎಲ್ ಮತ್ತು ವಿಶ್ವಕಪ್ ನಡುವೆ ಅಂತರ ಹೆಚ್ಚು ಇರಬೇಕಿತ್ತು" ಎಂದು ಮಾಜಿ ಟೀಮ್ ಇಂಡಿಯಾ ಆಲ್​ರೌಂಡರ್ ಆಗಿದ್ದ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: IND vs PAK- ಸದ್ಯದಲ್ಲೇ ನಾಲ್ಕು ಬಾರಿ ಮುಖಾಮುಖಿಯಾಗಲಿವೆ ಭಾರತ, ಪಾಕಿಸ್ತಾನ

ಆ ಅಂಶವೇ ಕಣ್ಮರೆಯಾಗಿತ್ತು…

“ಈ ರೀತಿಯ ದೊಡ್ಡ ಸರಣಿಗಳು ಬಂದಾಗ ಹಾಗೂ ಒತ್ತಡವು ಅವರಿಸಿಕೊಂಡಾಗ ಅದಕ್ಕೆ ನೀವು ತಯಾರಾಗದಿರುವುದಿಲ್ಲ. ಇಲ್ಲಿ ಯಾವುದೇ ನೆಪ ಹೇಳುತ್ತಿಲ್ಲ. ನಾವು ಸೋಲಿಗೆ ಹೆದರವುದಿಲ್ಲ. ಹೀಗಾಗಿ ಸೋಲನ್ನು ಒಪ್ಪುತ್ತೇವೆ. ಗೆಲ್ಲುವ ಪ್ರಯತ್ನದಲ್ಲಿ ನೀವು ಪಂದ್ಯ ಸೋಲಬಹುದು. ಇಲ್ಲಿ ನಾವು ಗೆಲ್ಲಲು ಪ್ರಯತ್ನಿಸಲಿಲ್ಲ. ಏಕೆಂದರೆ ಆ ಪ್ರಮುಖವಾದ ಅಂಶವೇ (X Factor) ನಮ್ಮಲ್ಲಿ ಇರಲಿಲ್ಲ" ಎಂಬುದು ರವಿಶಾಸ್ತ್ರಿ ಅವರ ವಿಶ್ಲೇಷಣೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕರಾದ ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ದ್ರಾವಿಡ್ ಮುಖ್ಯ ತರಬೇತುದಾರರಾಗಿ ನೇಮಕಗೊಂಡ ಮೇಲೆ ಮೊದಲ ಸರಣಿಯು ನವೆಂಬರ್ 17ರಿಂದ ಆರಂಭವಾಗುತ್ತದೆ. ನ್ಯೂಜಿಲ್ಯಾಂಡ್ ವಿರುದ್ಧ ಭಾರತದಲ್ಲಿಯೇ ಟಿ20 ಮತ್ತು ಟೆಸ್ಟ್ ಸರಣಿಗಳು ನಡೆಯಲಿವೆ.

ಇದನ್ನೂ ಓದಿ: Virat Kohli: ವಿರಾಟ್​ ಕೊಹ್ಲಿ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ ಆರೋಪಿ ಬಂಧನ

ದ್ರಾವಿಡ್​ಗೆ ಸಿಕ್ಕಿದೆ ಉತ್ತಮ ತಂಡ:

ರಾಹುಲ್ ದ್ರಾವಿಡ್ ಅವರಿಗೆ ಒಳ್ಳೆಯ ತಂಡ ಸಿಕ್ಕಿದೆ. ಕೋಚ್ ಆಗಿ ಅವರು ಭಾರತೀಯ ಕ್ರಿಕೆಟ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲರು ಎಂದಿದ್ದಾರೆ ರವಿಶಾಸ್ತ್ರಿ.

"ರಾಹುಲ್ ದ್ರಾವಿಡ್ ಅವರಿಗೆ ಅದ್ಭುತ ತಂಡ ಸಿಕ್ಕಿದ್ದು, ಅವರ ಅನುಭವದಿಂದ ಟೀಮ್ ಇಂಡಿಯಾ ಇನ್ನಷ್ಟು ಯಶಸ್ಸು ಕಾಣುತ್ತದೆ ಎಂದು ಭಾವಿಸಿದ್ದೇನೆ. ಇಲ್ಲಿ ಇನ್ನೂ 3-4 ವರ್ಷಗಳ ಕಾಲ ಆಟ ಆಡುವಂತಹ ಆಟಗಾರರು ತಂಡದಲ್ಲಿರುವುದು ಅನುಕೂಲವಾಗಿದೆ. ಹೊಸ ತಂಡವನ್ನು ಕಟ್ಟುವ ಅಗತ್ಯ ಬೀಳುವುದಿಲ್ಲ" ಎಂದು ನಿರ್ಗಮಿತ ಕೋಚ್ ಆದ ರವಿ ಶಾಸ್ತ್ರಿ ಹೇಳಿದ್ದಾರೆ.
Published by:Vijayasarthy SN
First published: