ಹಿಂದಾದ ತಪ್ಪು ಮರುಕಳಿಸಿದರೆ ಈ ಆಟಗಾರನನ್ನು ತಂಡದಿಂದ ಕಿತ್ತೆಸೆಯುತ್ತಾರಂತೆ ರವಿಶಾಸ್ತ್ರಿ

ಪಂತ್​​ಗೆ ಇನ್ನೊಂದಿಷ್ಟು ಅವಕಾಶವಿದೆ. ಇವುಗಳಲ್ಲಿ ಅವರು ಹಿಂದೆ ಮಾಡಿದ ತಪ್ಪನ್ನೆ ಮತ್ತೆ ಮಾಡಿದರೆ ಅದಕ್ಕೆ ಬೆಲೆ ತೆತ್ತ ಬೇಕಾಗುತ್ತಿದೆ. ಅವರು ಎಷ್ಟೇ ಪ್ರತಿಭೆಯನ್ನು ಹೊಂದಿದ್ದರು ಶಿಕ್ಷೆಯನ್ನು ಅನುಭವಿಬೇಕು- ರವಿಶಾಸ್ತ್ರಿ

Vinay Bhat | news18-kannada
Updated:September 16, 2019, 9:23 AM IST
ಹಿಂದಾದ ತಪ್ಪು ಮರುಕಳಿಸಿದರೆ ಈ ಆಟಗಾರನನ್ನು ತಂಡದಿಂದ ಕಿತ್ತೆಸೆಯುತ್ತಾರಂತೆ ರವಿಶಾಸ್ತ್ರಿ
ರವಿಶಾಸ್ತ್ರಿ ಹಾಗೂ ವಿರಾಟ್ ಕೊಹ್ಲಿ
  • Share this:
ಬೆಂಗಳೂರು (ಸೆ. 16): ಟೀಂ ಇಂಡಿಯಾಕ್ಕೆ ಎರಡನೇ ಬಾರಿ ಕೋಚ್ ಆಗಿ ಆಯ್ಕೆಯಾದ ಬಳಿಕ ಕೋಚ್ ರವಿಶಾಸ್ತ್ರಿ ತಂಡದಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದ್ದಾರೆ. ಈಗಾಗಲೇ ಫಿಟ್​​ ನೆಟ್ ಟೆಸ್ಟ್​ ಆದ ಯೋ ಯೋ ಪರೀಕ್ಷೆಯಲ್ಲಿ ಕಟ್ಟುನಿಟ್ಟಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಇದರ ಜೊತೆ ಆಟಗಾರ ವಿಚಾರದಲ್ಲು ಯಾವುದೆ ಮುಲಾಜಿಲ್ಲದೆ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಉದಯೋನ್ಮುಖ ಆಟಗಾರ ರಿಷಭ್ ಪಂತ್​ಗೆ ಅನೇಕ ಅವಕಾಶ ನೀಡಿದರು ವೈಫಲ್ಯ ಅನುಭುಸುತ್ತಿದ್ದಾರೆ. ಕಳೆದ ವೆಸ್ಟ್​ ಸರಣಿಯಲ್ಲಂತು ಪ್ರಮುಖ ಹಂತದಲ್ಲಿ ಮೊದಲ ಎಸೆತದಲ್ಲೇ ಔಟ್ ಆಗಿ ಅನೇಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಅಲ್ಲದೆ ಪಂತ್ ಆಯ್ಕೆ ಮಾಡಿಕೊಳ್ಳುವ ಹೊಡೆತ ಬಗ್ಗೆಯೂ ಕೆಲ ಕ್ರಿಕೆಟ್ ದಿಗ್ಗಜರು ಬೇಸರ ವ್ಯಕ್ತ ಪಡಿಸಿದ್ದರು.

Ravi Shastri on Rishabh Pant: ‘If he repeats mistakes, there will be a rap on the knuckles’
ರಿಷಭ್ ಪಂತ್


Ashes 2019: ಡ್ರಾನಲ್ಲಿ ಅಂತ್ಯಕಂಡ ಆ್ಯಶಸ್ ಟೆಸ್ಟ್​ ಸರಣಿ; ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್​ಗೆ ಗೆಲುವು

ಇದನ್ನೆಲ್ಲ ಮನಗಂಡು ರವಿಶಾಸ್ತ್ರಿ ಪಂತ್​ಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. 'ಪಂತ್​​ಗೆ ಇನ್ನೊಂದಿಷ್ಟು ಅವಕಾಶವಿದೆ. ಇವುಗಳಲ್ಲಿ ಅವರು ಹಿಂದೆ ಮಾಡಿದ ತಪ್ಪನ್ನೆ ಮತ್ತೆ ಮಾಡಿದರೆ ಅದಕ್ಕೆ ಬೆಲೆ ತೆತ್ತ ಬೇಕಾಗುತ್ತಿದೆ. ಅವರು ಎಷ್ಟೇ ಪ್ರತಿಭೆಯನ್ನು ಹೊಂದಿದ್ದರು ಶಿಕ್ಷೆಯನ್ನು ಅನುಭವಿಬೇಕು' ಎಂದು ಶಾಸ್ತ್ರಿ ಹೇಳಿದ್ದಾರೆ.

'ಪಂತ್​ ಸಾಕಷ್ಟು ಐಪಿಎಲ್​ ಕ್ರಿಕೆಟ್ ಆಡಿದ್ದಾರೆ, ಕಲಿತಿದ್ದಾರೆ. ಈಗ ಕಲಿತಿರುವುದನ್ನು ತೋರ್ಪಡಿಸುವ ಸಮಯ. ಪಂದ್ಯದಲ್ಲಿನ ಸ್ಥಿತಿಗತಿ ನೋಡಿ ಆಟವಾಡ ಬೇಕು ಎಂದು ಕೊಹ್ಲಿ ಪ್ರತಿ ಬಾರಿ ಪಂತ್​ಗೆ ಹೇಳುತ್ತಾರೆ. ಪಂತ್ ಎಲ್ಲಾದರು ಕ್ರೀಸ್​ಗೆ ಕಚ್ಚಿ ಆಡಿದರೆಂದರೆ ಅವರನ್ನು ತಡೆಯಲು ಅಸಾಧ್ಯ' ಎಂದು ಶಾಸ್ತ್ರಿ ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಕೂಡ ಪಂತ್​ಗೆ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಹಿಂದೆ ಸಂಜು ಸ್ಯಾಮನ್ಸ್ ಇದ್ದಾರೆ ಹುಷಾರ್ ಆಗಿರಿ ಎಂದು ಹೇಳಿದ್ದಾರೆ.'ವೈಫಲ್ಯ ಅನುಭವಿಸಿದರು ಸತತ ಅವಕಾಶಗಳು ಒದಗಿ ಬರುತ್ತಿದೆ ಎಂದು ಮೈ ಮರೆಯಬೇಡಿ. ಆದಷ್ಟು ಬೇಗ ಫಾರ್ಮ್​ ಕಂಡುಕೊಳ್ಳುವುದ ಉತ್ತಮ. ನಿಮ್ಮ ಸಾಮರ್ಥ್ಯದ ಬಗ್ಗೆ ನನಗೆ ಸಂದೇಹವಿಲ್ಲ. ಆದರೆ ತಂಡದಲ್ಲಿ ಸ್ಥಾನ ಪಡೆಯಲು ಮತ್ತೊಬ್ಬ ಯುವ ಆಟಗಾರ ಸಂಜು ಸ್ಯಾಮ್ಸನ್ ಸವಾಲು ನೀಡುತ್ತಿದ್ದಾರೆ' ಎಂದು ಗಂಭೀರ್ ಹೇಳಿದ್ದಾರೆ.

First published: September 16, 2019, 9:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading