2023ರ ವಿಶ್ವಕಪ್​ಗೆ ಓಕೆ, ಆನಂತರ ಇರೋದೇ ಚಾಲೆಂಜ್ ಅಂತಾರೆ ರವಿಶಾಸ್ತ್ರಿ; ಏನದು ಸವಾಲು

Ravi Shastri on Future Challenge: ಭಾರತದ ಬೌಲಿಂಗ್ ವಿಭಾಗಕ್ಕೆ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸವಾಲು ಹಾಗು ಅದನ್ನ ಎದುರಿಸುವುದು ಹೇಗೆ ಎಂಬುದನ್ನು ಮಾಜಿ ಕೋಚ್ ರವಿಶಾಸ್ತ್ರಿ ತಿಳಿಸಿದ್ದಾರೆ.

ರವಿಶಾಸ್ತ್ರಿ

ರವಿಶಾಸ್ತ್ರಿ

 • Share this:
  ಭಾರತೀಯ ಕ್ರಿಕೆಟ್ ಇತ್ತೀಚಿನ ವರ್ಷಗಳಿಂದ ನಿರಂತರ ಬದಲಾವಣೆ, ಪರಿವರ್ತನೆಗಳನ್ನ ಕಾಣುತ್ತಲೇ ಇದೆ. ರವಿಶಾಸ್ತ್ರಿ ಕೋಚ್ ಸ್ಥಾನದಿಂದ ಹೊರಹೋಗಿದ್ದಾರೆ. ಸೀಮಿತ ಓವರ್ ಕ್ರಿಕೆಟ್​ನ ತಂಡಗಳ ನಾಯಕತ್ವವನ್ನ ರೋಹಿತ್ ಶರ್ಮಾಗೆ ವಹಿಸಲಾಗಿದೆ. ರಾಹುಲ್ ದ್ರಾವಿಡ್ ಕೋಚ್ ಆಗಿದ್ಧಾರೆ. ರವಿಶಾಸ್ತ್ರಿ ಕೋಚ್ ಆಗಿದ್ದ ಅವಧಿಯಲ್ಲಿ ಬಹಳಷ್ಟು ಗಮನಾರ್ಹ ಬದಲಾವಣೆಗಳು, ಅಭ್ಯಾಸಗಳು, ಸಾಧನೆಗಳು ತಂಡದಲ್ಲಿ ಆಗಿದ್ದವು. ಈಗ ಟೀಮ್ ಇಂಡಿಯಾ ಮುಂದಿನ ದಾರಿ ಹೇಗೆ ಎನ್ನುವುದು ಕುತೂಹಲ. ರಾಹುಲ್ ದ್ರಾವಿಡ್ ಕೋಚ್ ಆಗಿ ತಂಡಕ್ಕೆ ಮುಂದಿನ ದಾರಿ ತೋರಿಸುವುದು ಹೌದು. ಆದರೆ ಹಿಂದಿ ಕೋಚ್ ರವಿಶಾಸ್ತ್ರಿ ಅವರ ಮನಸಿನಲ್ಲಿ ಏನು ಯೋಚನೆ ಇದೆ? ಅವರ ಚಿಂತನೆ ಏನಿತ್ತು ಎಂಬುದು ಕುತೂಹಲ ಮೂಡಿಸುತ್ತದೆ. ನಿನ್ನೆ ಅವರು ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಸಂದರ್ಶನದಲ್ಲಿ ಮಾತನಾಡುತ್ತಾ ಅವರು ಕೆಲ ಮಹತ್ವದ ವಿಚಾರಗಳನ್ನ ಚರ್ಚಿಸಿದ್ದಾರೆ.

  ಭವಿಷ್ಯದ ದೃಷ್ಟಿಯನ್ನಿಟ್ಟುಕೊಂಡು ಯುವ ಆಟಗಾರರನ್ನ ಬೆಳೆಸಲು ಈಗಿನಿಂದಲೇ ಆರಂಭಿಸಬೇಕು ಎಂಬುದು ರವಿಶಾಸ್ತ್ರಿ ಅವರ ಪ್ರಮುಖ ಸಲಹೆ. ಅದರಲ್ಲೂ ವೇಗದ ಬೌಲರ್​ಗಳನ್ನ ಬೆಳೆಸುವುದು ತೀರಾ ಮುಖ್ಯ ಎಂದು ಅವರು ಹೇಳುತ್ತಾರೆ.

  ಭಾರತ ಸದ್ಯ ವಿಶ್ವದ ವಿವಿಧೆಡೆ ದಿಗ್ವಿಜಯ ಸಾಧಿಸುತ್ತಿರುವುದಕ್ಕೆ ತಂಡದಲ್ಲಿರುವ ವರ್ಲ್ಡ್ ಕ್ಲಾಸ್ ಬೌಲಿಂಗ್ ಲೈನಪ್ ಕಾರಣ. ಆದರೆ, ಈ ಬೌಲರ್​ಗಳ ವಯಸ್ಸು ಕಡಿಮೆ ಆಗುತ್ತಾ ಹೋಗುವುದಿಲ್ಲ. ಅವರಿಗೆ ರೀಪ್ಲೇಸ್ಮೆಂಟ್ಸ್ ಆಗಾಗ ಆಗುತ್ತಲೇ ಇರಬೇಕು ಎಂದು ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ರವಿಶಾಸತ್ರಿ ಅಭಿಪ್ರಾಯಪಟ್ಟಿದ್ಧಾರೆ.

  ಇದನ್ನೂ ಓದಿ: Junior Asia Cup: ಕಿರಿಯರ ಏಷ್ಯಾಕಪ್ ಫೈನಲ್​ಗೆ ಭಾರತ ಮತ್ತು ಶ್ರೀಲಂಕಾ ಪ್ರವೇಶ

  “ತಂಡದಲ್ಲಿ ಅನುಭವಿಗಳು ಮತ್ತು ಯುವ ಪ್ರತಿಭೆಗಳ ಸರಿಯಾದ ಮಿಶ್ರಣ ಇರಬೇಕೆಂದರೆ ಎರಡು ವರ್ಷದ ಮುಂದಿನ ದೃಷ್ಟಿ ಇಟ್ಟುಕೊಂಡು ಕೆಲ ಆಟಗಾರರನ್ನ ಬೆಳೆಸಬೇಕು” ಎಂದು ಮಾಜಿ ಕ್ರಿಕೆಟಿಗರೂ ಆದ ರವಿಶಾಸ್ತ್ರಿ ಹೇಳಿದ್ದಾರೆ.

  “ಎರಡು ವರ್ಷದಷ್ಟು ಮುಂದಾಲೋಚನೆ ಮಾಡಿ. ಹೊಸ ಪ್ರತಿಭೆಗಳು ನಿಮ್ಮ ಕಣ್ಣಿಗೆ ಬೀಳಬಹುದು. ನೀವು ವೇಗ ಬೌಲಿಂಗ್ ಕ್ಷೇತ್ರದತ್ತ ವಿಶೇಷ ಗಮನ ಹರಿಸಬೇಕು. ಯಾಕೆಂದರೆ ಬೌಲರ್​ಗಳಿಗೆ ವಯಸ್ಸು ಸಣ್ಣ ಆಗುವುದಿಲ್ಲ. ಈಗ ಅವರು ಬೌಲಿಂಗ್ ಮಾಡುತ್ತಿರುವ ರೀತಿಯಂತೆಯೇ ಎರಡು ವರ್ಷ ಬಳಿಕವೂ ಅದೇ ತೀಕ್ಷ್ಣತೆಯಲ್ಲಿ ಮಾಡುತ್ತಾರೆ ಎನ್ನಲಾಗುವುದಿಲ್ಲ” ಎಂದು ರವಿಶಾಸ್ತ್ರಿ ತಿಳಿಸಿದ್ದಾರೆ.

  ರವಿಶಾಸ್ತ್ರಿ ಕೋಚ್ ಆಗಿದ್ದ ಅವಧಿಯಲ್ಲಿ ಭಾರತದಲ್ಲಿ ಒಳ್ಳೆಯ ವೇಗದ ಬೌಲಿಂಗ್ ಪಡೆ ತಯಾರಾಗಿತ್ತು. ವಿಶ್ವದ ಯಾವುದೇ ಪಿಚ್​​ಗಳಲ್ಲೂ ಪರಿಣಾಮಕಾರಿ ಎನಿಸಬಹುದಾದ ಬೌಲಿಂಗ್ ಲೈನಪ್ ಟೀಮ್ ಇಂಡಿಯಾಗೆ ಸಿಗಲು ರವಿಶಾಸ್ತ್ರಿ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಅವರ ಕಾರ್ಯತಂತ್ರವೇ ಕಾರಣ ಎಂದು ಹೇಳಲಾಗುತ್ತದೆ.

  ಇದನ್ನೂ ಓದಿ: IND vs SA: ಸೆಂಚೂರಿಯನ್ ಟೆಸ್ಟ್: ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ 113 ರನ್ ಜಯಭೇರಿ

  2023ರ ನಂತರ ಬೌಲಿಂಗ್ ಸವಾಲು ಎದುರಾಗಬಹುದು:

  ಮುಂದಿನ ಓಡಿಐ ವಿಶ್ವಕಪ್ 2023ರಲ್ಲಿ ನಡೆಯುತ್ತದೆ. ಅದು ನಡೆಯುವುದು ಭಾರತದಲ್ಲಾದ್ದರಿಂದ ಭಾರತಕ್ಕೆ ವೇಗದ ಬೌಲಿಂಗ್​ನಲ್ಲಿ ಸಮಸ್ಯೆ ಆಗದೇ ಹೋಗಬಹುದು. ಸ್ಪಿನ್ನರ್​ಗಳು ಭಾರತದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ, 2023ರ ನಂತರ ಭಾರತ ವಿದೇಶಗಳಲ್ಲಿ ಕ್ರಿಕೆಟ್ ಪ್ರವಾಸಗಳನ್ನ ಹೋಗತೊಡಗುತ್ತದೆ. ಆಗ ತಂಡಕ್ಕೆ ವೇಗದ ಬೌಲರ್​ಗಳು ಅತ್ಯಗತ್ಯವಾಗಿ ಬೇಕಾಗುತ್ತಾರೆ ಅದು ದೊಡ್ಡ ಸವಾಲು ಎಂದು ರವಿಶಾಸ್ತ್ರಿ ವಾದಿಸುತ್ತಾರೆ.

  “2023ರಲ್ಲಿ ಭಾರತದಲ್ಲಿ ವಿಶ್ವಕಪ್ ನಡೆಯುವುದರಿಂದ ಐದು ಒಳ್ಳೆಯ ಬೌಲರ್​ಗಳನ್ನ ಗುರುತಿಸುವುದು ಸುಲಭ. ಆದರೆ ವಿದೇಶಗಳಿಗೆ ಹೋದಾಗ ಕಷ್ಟ ಆಗುತ್ತದೆ. ಒಂದು ಅಥವಾ ಒಂದೂವರೆಗೆ ವರ್ಷದವರೆಗೂ ಸಮಸ್ಯೆ ಆಗುವುದಿಲ್ಲ. ಆ ಬಳಿಕ ಯುವ ಪ್ರತಿಭೆಗಳನ್ನ ಗುರುತಿಸಿ ಬೆಳೆಸಲಬೇಕಾಗುತ್ತದೆ” ಎಂಬುದು ಮಾಜಿ ಕೋಚ್ ರವಿಶಾಸ್ತ್ರಿ ಅವರ ಅನಿಸಿಕೆ.
  Published by:Vijayasarthy SN
  First published: