ಟ್ವಿಟ್ಟರ್​ನಲ್ಲಿ ಫೋಟೋ ಹಂಚಿಕೊಂಡು ಈ ಪಾಟಿ ಟ್ರೋಲ್ ಆದ ರವಿಶಾಸ್ತ್ರಿ

ರವಿಶಾಸ್ತ್ರಿ ಆಂಟಿಕೊದ ಕೊಕೊ ಬೇ ಬೀಚ್​ಗೆ ತೆರಳಿದ್ದು ಬೀಚ್​ನ ಪಕ್ಕ ನಿಂತು ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. 'ಬಿಸಿ, ಬಿಸಿ, ಬಿಸಿ. ಈಗ ಜ್ಯೂಸ್ ಕುಡಿಯಬೇಕಾದ ಸಮಯ. ಕೊಕೊ ಬೇ ಬೀಚ್ ಸುಂದರವಾಗಿದೆ' ಎಂದು ಅಡಿ ಬರಹ ನೀಡಿದ್ದಾರೆ.

ಟ್ರೋಲ್​ ಆದ ಕೋಚ್ ರವಿಶಾಸ್ತ್ರಿ

ಟ್ರೋಲ್​ ಆದ ಕೋಚ್ ರವಿಶಾಸ್ತ್ರಿ

  • Share this:
ಬೆಂಗಳೂರು (ಆ. 28): ವೆಸ್ಟ್​ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಈಗಾಗಲೇ ಟಿ-20, ಏಕದಿನ ಸರಣಿ ವಶ ಪಡಿಸಿಕೊಂಡಿದೆ. ಇದರ ಜೊತೆಗೆ ಎರಡು ಪಂದ್ಯಗಳ ಟೆಸ್ಟ್​ ಸರಣಿ ಪೈಕಿ ಮೊದಲ ಪಂದ್ಯ ಗೆದ್ದು ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಭರ್ಜರಿ ಶುಭಾರಂಭ ಮಾಡಿದೆ.

ಇದೇ ಖುಷಿಯಲ್ಲಿ ಟೀಂ ಇಂಡಿಯಾ ಆಟಗಾರರು ಹಾಗೂ ಸಿಬ್ಬಂದಿಗಳು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಕೆರಿಬಿಯನ್‌ ದ್ವೀಪದ ಸಮುದ್ರ ತೀರಗಳಲ್ಲಿ ಹಾಗೂ ಐಷಾರಾಮಿ ರೆಸಾರ್ಟ್‌ಗಳಲ್ಲಿ ಕಾಲ ಕಳೆಯುತ್ತಿದ್ದಾರೆ.

ಈ ಮಧ್ಯೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಫೋಟೋ ಒಂದನ್ನು ಹಂಚಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟ್ರೋಲ್‌ಗೊಳಗಾಗಿದ್ದಾರೆ.

ರವಿಶಾಸ್ತ್ರಿ ಆಂಟಿಗುವ ಕೊಕೊ ಬೇ ಬೀಚ್​ಗೆ ತೆರಳಿದ್ದು ಬೀಚ್​ನ ಪಕ್ಕ ನಿಂತು ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ. 'ಬಿಸಿ, ಬಿಸಿ, ಬಿಸಿ. ಈಗ ಜ್ಯೂಸ್ ಕುಡಿಯಬೇಕಾದ ಸಮಯ. ಕೊಕೊ ಬೇ ಬೀಚ್ ಸುಂದರವಾಗಿದೆ' ಎಂದು ಅಡಿ ಬರಹ ನೀಡಿದ್ದಾರೆ.

 ಫೋಟೋ ಹಂಚಿಕೊಂಡ ಬೆನ್ನಲ್ಲೆ ಟೀಕಾಸ್ತ್ರಗಳಿಗೆ ಶಾಸ್ತ್ರಿ ಗುರಿಯಾಗಿದ್ದಾರೆ. ಕೆಲವರು 'ನಿಮ್ಮ ಫಿಟ್ನೆಸ್‌ ಕಡೆಗೆ ಗಮನ ಕೊಡಿ' ಎಂದರೆ ಇನ್ನೂ ಕೆಲವರು 'ನೀವು ರೈಲ್ವೇ ಕೋಚ್ ಅಲ್ಲ, ಭಾರತ ತಂಡದ ಕೋಚ್' ಎಂದು ಲೇವಡಿ ಮಾಡಿದ್ದಾರೆ. ಅಲ್ಲದೆ  'ನಿಮಗೆ ಬಿಯರ್ ಕುಡಿಯಬೇಕು ಎಂದು ಅನಿಸುತ್ತದೆ ತಾನೆ' ಎಂದು ಟ್ರೋಲ್ ಮಾಡಿದ್ದಾರೆ.

 

 
View this post on Instagram
 

Indian Coach in full celebration mode after their win yesterday !! #ravishastri #bcci #viratkohli


A post shared by low budget memes (@parodywaala) on


First published: