VIDEO: ಯಾಕಾದ್ರೂ ಕೆದಕಿದೆ ರಶೀದ್ ಖಾನ್, ವಾಟ್ಸನ್ ಫಾರ್ಮ್​ಗೆ ಮರಳಿ ಬಿಟ್ರು..!

ವಾಟ್ಸನ್-ರಶೀದ್ ಖಾನ್

ವಾಟ್ಸನ್-ರಶೀದ್ ಖಾನ್

ಈ ಮೂಲಕ ಸೂಪರ್​ ಕಿಂಗ್ಸ್​ ಗೆಲುವಿನಲ್ಲಿ 37 ರ ಹಿರಿಯ ಆಟಗಾರ ನಿರ್ಣಾಯಕ ಪಾತ್ರವಹಿಸಿದ್ದರು.

  • News18
  • 3-MIN READ
  • Last Updated :
  • Share this:

ಶೇನ್​ ವಾಟ್ಸನ್​ರ ಅಬ್ಬರದ 96 ರನ್​ಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಮಂಗಳವಾರ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಕಳೆದ 10 ಪಂದ್ಯಗಳಿಂದ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದ ವಾಟ್ಸನ್ ಈ ಪಂದ್ಯದಲ್ಲಿ ಲಯಕ್ಕೆ ಮರಳಲು ಎಸ್​ಆರ್​ಎಚ್​ ಬೌಲರ್ ರಶೀದ್​ ಖಾನ್ ಮುಖ್ಯ ಕಾರಣ ಎನ್ನಲಾಗುತ್ತಿದೆ. ರಶೀದ್​ ಖಾನ್ ಎಸೆದ ಮೊದಲ ಓವರ್​ನ ಎರಡನೇ ಬಾಲನ್ನು ವಾಟ್ಸನ್​ ಬೌಂಡರಿಗಟ್ಟಿದ್ದರು. ಇದರಿಂದ ಕುಪಿತಗೊಂಡಿದ್ದ ರಶೀದ್ ಖಾನ್ ಚೆನ್ನೈ ದಾಂಡಿಗನನ್ನು ಕೆದಕುವ ಪ್ರಯತ್ನ ಮಾಡಿದ್ದರು.

ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದಲ್ಲದೆ, ಕಣ್ಣಲ್ಲೇ ಏಟಿಗೆ ಎದಿರೇಟುಗಳು ವರ್ಗಾವಣೆಯಾದವು. ಒಂದು ಹಂತದಲ್ಲಿ ಇಬ್ಬರ ನಡುವಿನ ಸ್ಲೆಡ್ಜಿಂಗ್ ದೈಹಿಕ ಸ್ಪರ್ಶದವರೆಗೂ ಹೋಯಿತು. ಈ ವೇಳೆ ಮಧ್ಯ ಪ್ರವೇಶಿಸಿದ ಅಂಪೈರ್ ವಾಟ್ಸನ್​ ರನ್ನು ಸಮಾಧಾನ ಪಡಿಸಿದ್ದರು.ಆರಂಭದಿಂದಲೂ ತನನ್ನು ಗುರಿಯಾಗಿಸಿಕೊಂಡಿದ್ದ ರಶೀದ್​ ಖಾನ್​ರಿಗೆ ವಾಟ್ಸನ್​ ಬ್ಯಾಟ್​ಗಳ ಮೂಲಕವೇ ಉತ್ತರ ನೀಡುತ್ತಾ ಹೋದರು. ಪರಿಣಾಮ ವಾಟ್ಸನ್​ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಲಯಕ್ಕೆ ಮರಳಿದರು. ಇದರ ಬಳಿಕ ಸಹ ರಶೀದ್​ರ ಗೂಗ್ಲಿಯನ್ನು ಬೌಂಡರಿ ಸಿಕ್ಸರ್​ಗೆ ಅಟ್ಟಿದ ವಾಟ್ಸನ್ ಒಟ್ಟು 6 ಸಿಕ್ಸರ್ ಹಾಗೂ 9 ಬೌಂಡರಿಗಳನ್ನು ಬಾರಿಸಿದ್ದರು. ಅಷ್ಟೇ ಅಲ್ಲದೆ ​ 2018ರ ಐಪಿಎಲ್​ನ ಫೈನಲ್​ ಅನ್ನು ನೆನಪಿಸುವಂತೆ ವಾಟ್ಸನ್ ಬ್ಯಾಟ್​ ಬೀಸಿದ್ದರು.


ಈ ಮೂಲಕ ಸೂಪರ್​ ಕಿಂಗ್ಸ್​ ಗೆಲುವಿನಲ್ಲಿ 37 ರ ಹಿರಿಯ ಆಟಗಾರ ನಿರ್ಣಾಯಕ ಪಾತ್ರವಹಿಸಿದ್ದರು. ಇತ್ತ ವಾಟ್ಸನ್ ಬ್ಯಾಟಿಂಗ್ ಲಯಕ್ಕೆ ಮರಳಿದ್ದರೆ, ಅತ್ತ ರಶೀದ್ ಖಾನ್ ತಮ್ಮ ಬೌಲಿಂಗ್ ಲಯವನ್ನು ಕಳೆದುಕೊಂಡಿದ್ದರು. ಪರಿಣಾಮ ಸನ್​ರೈಸರ್ಸ್​ನ ಕೀ ಬೌಲರ್ ನೀಡಿದ್ದು 4 ಓವರ್​ನಲ್ಲಿ ಬರೋಬ್ಬರಿ 44 ರನ್​ಗಳು.


ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಸ್ಲೆಡ್ಜಿಂಗ್​ನಿಂದ ಇದೀಗ ರಶೀದ್ ಖಾನ್​ ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಸುಖಾಸುಮ್ಮನೆ ಕೆದಕಲು ಹೋದ ರಶೀದ್ ಖಾನ್ ಎಲ್ಲಾ ಮುಗಿಯುತ್ತಿದ್ದಂತೆ ಹೊರ ನಡೆದರು. ಫಾರ್ಮ್​​ಗೆ ಮರಳಲು ರಶೀದ್ ಖಾನ್​ ರನ್ನು ಭೇಟಿಯಾಗಿ. ಯಾಕಾದ್ರೂ ಕೆದಕಿದೆ ರಶೀದ್, ವಾಟ್ಸನ್​ ಫಾರ್ಮ್​ಗೆ ಮರಳಿ ಬಿಟ್ರು.. ಎಂಬ ಮೀಮ್ಸ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.


ಇದನ್ನೂ ಓದಿ: SRH vs CSK: ಶೇನ್ ವಾಟ್ಸನ್ ಅಬ್ಬರ: ಸೂಪರ್​ ಕಿಂಗ್ಸ್​ ಮುಂದೆ ಮಂಕಾದ ಸನ್​ರೈಸರ್ಸ್

First published: