ಆಸ್ಟ್ರೇಲಿಯಾದಲ್ಲಿ ಸಾಗುತ್ತಿರುವ ಬಿಗ್ಬ್ಯಾಷ್ ಟಿ-20 ಲೀಗ್ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಇತ್ತೀಚೆಗಷ್ಟೆ ಗ್ಲೆನ್ ಮ್ಯಾಕ್ಸ್ವೆಲ್, ಡೇಲ್ ಸ್ಟೈನ್ ಅಬ್ಬರಿಸಿ ಭಾರೀ ಸದ್ದು ಮಾಡಿದ್ದರು.
ಸದ್ಯ
ಅಡಿಲೇಡ್ ಸ್ಟ್ರೈಕರ್ಸ್ ಹಾಗೂ ಮೆಲ್ಬೋರ್ನ್ ರೆನೆಗೆಡ್ಸ್ ನಡುವಣ ಪಂದ್ಯದಲ್ಲಿ ನಡೆದ ಘಟನೆಯ ವಿಡಿಯೋ ಒಂದು ಎಲ್ಲಡೆ ವೈರಲ್ ಆಗುತ್ತಿದೆ.
ನಿನ್ನೆ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಡಿಲೇಡ್ ತಂಡ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ಪಿಲಿಪ್ ಸಲ್ಟ್ 26 ಎಸೆತಗಳಲ್ಲಿ 54 ರನ್ ಸಿಡಿಸಿದರೆ, ನಾಯಕ ಅಲೆಕ್ಸ್ ಕ್ಯಾರಿ 37 ಎಸೆತಗಳಲ್ಲಿ 41 ರನ್ ಗಳಿಸಿದರು. ಮೆಲ್ಬೋರ್ನ್ ಪರ ಕೇನ್ ರಿಚರ್ಡಸನ್ 4 ವಿಕೆಟ್ ಕಿತ್ತರು.
AUS vs NZ Boxing Day Test: ಬಾಕ್ಸಿಂಗ್ ಟೆಸ್ಟ್ ಗೆದ್ದು ಬೀಗಿದ ಆಸ್ಟ್ರೇಲಿಯಾ; ಸರಣಿ ಕಾಂಗರೂಗಳ ಪಾಲು
156 ರನ್ಗಳ ಸಾಧಾರಣ ಗುರಿ ಬೆನ್ನಟ್ಟಿದ ಮೆಲ್ಬೋರ್ನ್ ತಂಡ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.ನಾಯಕ ಆ್ಯರೋನ್ ಫಿಂಚ್ ಅರ್ಧಶತಕ ಬಾರಿಸಿದ್ದು ಬಿಟ್ಟರೆ, ಬ್ಯೂ ವೆಬ್ಸ್ಟೆರ್ ಅಜೇಯ 37 ರನ್ ಗಳಿಸಿದರಷ್ಟೆ. 20 ಓವರ್ನಲ್ಲಿ 8 ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೆ ಶಕ್ತವಾಗಿ ಸೋಲೊಪ್ಪಿಗೊಂಡಿತು.
ಈ ನಡುವೆ ಮೆಲ್ಬೋರ್ನ್ ತಂಡ ಟಾರ್ಗೆಟ್ ಬೆನ್ನಟ್ಟುತ್ತಿದ್ದ 17ನೇ ಓವರ್ನಲ್ಲಿ ಘಟನೆಯೊಂದು ನಡೆಯಿತು. ರಶೀದ್ ಖಾನ್ ಎಸೆದ ಗೂಗ್ಲಿಯನ್ನು ಸರಿಯಾಗಿ ಕನೆಕ್ಟ್ ಮಾಡುವಲ್ಲಿ ಬ್ಯೂ ವೆಬ್ಸ್ಟೆರ್ ಎಡವಿದರು. ಚೆಂಡು ಬ್ಯಾಟ್ಸ್ಮನ್ ಪಾಡ್ಗೆ ತಾಗಿದ ಪರಿಣಾಮ ರಶೀದ್ ಖಾನೆ ಸೇರಿ ತಂಡದ ಇತರೆ ಆಟಗಾರರು ಎಲ್ಬಿ ಔಟ್ಗಾಗಿ ಅಂಪೈರ್ಗೆ ಮನವಿ ಮಾಡಿದರು.
ಒಂದು ಪಂದ್ಯದಲ್ಲಿ ಆಕರ್ಷಕ ಶತಕ, ಜೊತೆಗೆ 4 ವಿಕೆಟ್; ಭಾರತದ ಮಾಜಿ ಆಟಗಾರರ ಸಾಧನೆ ಇಲ್ಲಿದೆ ನೋಡಿ!
ಈ ಸಂದರ್ಭ ಅಂಪೈರ್ ಡೇವಿಡ್ಸನ್ ಔಟ್ ಎಂದು ಅರ್ಧ ಕೈ ಮೇಲೆತ್ತಿದರು. ಆದರೆ, ಅರ್ಧ ಕೈ ಮೇಲೆತ್ತಿದ ಹೊತ್ತಿಗೆ ಔಟ್ ಅಲ್ಲ ಎಂದು ಅಂಪೈರ್ಗೆ ಅನಿಸಿದೆ. ಬಳಿಕ ಕೈ ಯನ್ನು ಮೂಗಿನ ಮೇಲೆ ಉಜ್ಜುವ ಮೂಲಕ ಇದು ನಾಟೌಟ್ ಎಂದಿದ್ದಾರೆ.
ಅಂಪೈರ್ ಕೈ ಎತ್ತಲು ಶುರು ಮಾಡಿದ್ದನ್ನು ಗಮನಿಸಿದ ರಶೀದ್ ಖಾನ್ ಅದಾಗಲೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಇತ್ತ
ಬ್ಯಾಟ್ಸ್ಮನ್ ಕೂಡ ತಾನು ಔಟ್ ಎಂದು ನಿರಾಸೆಯಾಗಿದ್ದರು. ಬಳಿಕ ಫೀಲ್ಡಿಂಗ್ ತಂಡದ ಬಳಿಕ ತಾನು ಔಟ್ ಕೊಟ್ಟಿಲ್ಲ, ಇದು ನಾಟೌಟ್ ಎಂದು ಅಂಪೈರ್ ಹೇಳಿದರು.
ಕ್ರಿಕೆಟ್ ದಿಗ್ಗಜರಿಂದ ಟೀಕೆಗೆ ಗುರಿಯಾದ ಶ್ರೇಯಸ್ ಐಯರ್- ಶಿವಂ ದುಬೆ; ಅಷ್ಟಕ್ಕು ಆಗಿದ್ದೇನು?
ಸದ್ಯ ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಟ್ವಿಟ್ಟರ್ನಲ್ಲಂತು ಸಾಕಷ್ಟು ಕಮೆಂಟ್ಗಳು ಬರುತ್ತಿವೆ. ಅಂತಿಮವಾಗಿ ಈ ಪಂದ್ಯದಲ್ಲಿ ಅಡಿಲೇಡ್ ಸ್ಟ್ರೈಕರ್ಸ್ ತಂಡ 18 ರನ್ಗಳ ಭರ್ಜರಿ ಜಯ ಸಾಧಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ