Catch or Six? ಹಿಡಿದದ್ದು ಕ್ಲೀನ್ ಕ್ಯಾಚ್, ಅಂಪೈರ್ ಕೊಟ್ಟಿದ್ದು ಸಿಕ್ಸ್; ಅಪರೂಪದ ಕ್ರಿಕೆಟ್ ಪ್ರಕರಣ

T20 Blast Final- ಇಂಗ್ಲೆಂಡ್​ನ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೌಂಡರಿ ಗೆರೆಯೊಳಗೆಯೇ ಫೀಲ್ಡರ್ ಕ್ಯಾಚ್ ಹಿಡಿದರೂ ಅಂಪೈರ್ ಸಿಕ್ಸ್ ತೀರ್ಪು ಕೊಟ್ಟರು. ಫೀಲ್ಡರ್ ಕಾಲು ಬೌಂಡರಿ ಗೆರೆಗೆ ತಾಗಿರಲಿಲ್ಲ. ಹಾಗಾದರೆ ಯಡವಟ್ಟಾಗಿದ್ದು ಎಲ್ಲಿ?

ಜಾರ್ಡನ್ ಕಾಕ್ಸ್ ಅವರು ಚೆಂಡು ಹಿಡಿದಿರುವುದು

ಜಾರ್ಡನ್ ಕಾಕ್ಸ್ ಅವರು ಚೆಂಡು ಹಿಡಿದಿರುವುದು

  • Cricketnext
  • Last Updated :
  • Share this:
    ಲಂಡನ್: ಇದು ಅಪರೂಪದಲ್ಲೇ ಅಪರೂಪಕ್ಕೆ ನಡೆಯುವ ಘಟನೆ. ಫೀಲ್ಡರ್ ಅದ್ಭುತ ಕ್ಯಾಚ್ ಹಿಡಿದರೂ ಅಂಪೈರ್ ಸಿಕ್ಸ್ ಕೊಟ್ಟ ಘಟನೆಗೆ ವೈಟಾಲಿಟಿ ಟಿ20 ಬ್ಲಾಸ್ಟ್ ಟೂರ್ನಿಯ (Vitality T20 Blast Cricket Tourney) ಫೈನಲ್ ಪಂದ್ಯ ಸಾಕ್ಷಿಯಾಯಿತು. ಬರ್ಮಿಂಗ್​​ಹ್ಯಾಂ (Birmingham) ನಗರದ ಎಡ್ಗ್​ಬಾಸ್ಟಾನ್ ಮೈದಾನದಲ್ಲಿ ನಡೆದ ಸಾಮರ್​ಸೆಟ್ (Somerset) ಮತ್ತು ಕೆಂಟ್ (Kent Club) ನಡುವಿನ ಫೈನಲ್ ಪಂದ್ಯದ ವೇಳೆ ಜಾರ್ಡಾನ್ ಕಾಕ್ಸ್ (Jorden Cox) ಅವರು ಬೌಂಡರಿ ಗೆರೆ ಬಳಿ ಕ್ಲೀನ್ ಕ್ಯಾಚ್ ಹಿಡಿದಿದ್ದರು. ಆದರೆ, ಅಂಪೈರ್ ಆ ಶಾಟ್ ಭಾರಿಸಿದ ಬ್ಯಾಟರ್​ಗೆ ಸಿಕ್ಸ್ ದಯಪಾಲಿಸಿದರು. ಕ್ಯಾಚ್ ಹಿಡಿದು ಸಂಭ್ರಮದಲ್ಲಿದ್ದ ಕಾಕ್ಸ್​ಗೆ ಅಂಪೈರ್ ನಿರ್ಧಾರ ಕಂಡು ಶಾಕ್ ಆಗಿತ್ತು.

    ಹೇಗೆ ಸಿಕ್ಸ್?: ಸಾಮರ್​ಸೆಟ್ ತಂಡ ಬ್ಯಾಟಿಂಗ್ ಮಾಡುವ ವೇಳೆ 11ನೇ ಓವರ್​ನಲ್ಲಿ ಜೋ ಡೆನ್ಲಿ (Joe Denly) ಬೌಲಿಂಗ್ ಮಾಡಿದರು. ಆ ಓವರ್​ನ ಎರಡನೇ ಎಸೆತವನ್ನ ಬ್ಯಾಟರ್ ವಿಲ್ ಸ್ಮೀದ್ ಬೌಂಡರಿ ಗೆರೆ ದಾಟಿಸುವಂತೆ ಶಾಟ್ ಹೊಡೆದರು. ಆಗ ಬೌಂಡರಿ ಗೆರೆಯಲ್ಲಿದ್ದ ಜಾರ್ಡನ್ ಕಾಕ್ಸ್ ಮತ್ತು ಬೆಲ್ ಡ್ರುಮ್ಮಂಡ್ ಇಬ್ಬರೂ ಫೀಲ್ಡರ್​ಗಳು ಕ್ಯಾಚ್ ಹಿಡಿಯಲು ಧಾವಿಸಿದರು. ಕಾಕ್ಸ್ ಅವರು ಬೌಂಡರಿ ಗೆರೆ ಒಳಗೆಯೇ ಚೆಂಡನ್ನ ಹಿಡಿದರು. ಆದರೆ, ಮತ್ತೊಬ್ಬ ಫೀಲ್ಡರ್ ಡ್ರಮಂಡ್ ಅವರು ಕೆಳಗೆ ಜಾರುವಾಗ ಕಾಕ್ಸ್ ದೇಹವನ್ನು ತಾಗಿಸಿದರು. ಕಾಕ್ಸ್ ಕ್ಯಾಚ್ ಹಿಡಿದ ಹೊತ್ತಲ್ಲೇ ಡ್ರಮಂಡ್ ಅವರು ಕಾಕ್ಸ್ ದೇಹ ಮತ್ತು ಬೌಂಡರಿ ಗೆರೆಯನ್ನ ಒಟ್ಟಿಗೆ ತಾಗಿಸಿದರು. ಹೀಗಾಗಿ, ಅಂಪೈರ್ ಅವರು ಔಟ್ ಬದಲು ಸಿಕ್ಸ್ ತೀರ್ಪು ನೀಡಿದರು. ವೈಟಾಲಿಟಿ ಟಿ20 ಬ್ಲಾಸ್ಟ್ ಕ್ರಿಕೆಟ್ ಟೂರ್ನಿಯ ಅಧಿಕೃತ ಸೋಷಿಯ್ ಮೀಡಿಯಾದಲ್ಲಿ ಈ ಘಟನೆಯ ತುಣಕನ್ನ ಪೋಸ್ಟ್ ಮಾಡಲಾಗಿದೆ.


    ಮಿಶ್ರ ಪ್ರತಿಕ್ರಿಯೆ?

    ಆದರೆ, ಕ್ರಿಕೆಟ್ ಪ್ರೇಮಿಗಳು ಈ ತೀರ್ಪಿನ ಬಗ್ಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಈ ತೀರ್ಪು ನ್ಯಾಯಯುತವಾಗಿದೆ ಎಂದು ವಾದಿಸಿದರೆ, ಮತ್ತಿನ್ನು ಕೆಲವರು ಇದು ಔಟ್ ಎಂದು ತೀರ್ಪು ಕೊಡಬೇಕಿತ್ತು ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ.

    ಇದನ್ನೂ ಓದಿ: Watch Video| ಬೌಂಡರಿ ಲೈನಲ್ಲಿ ಹಕ್ಕಿಯಂತೆ ಹಾರಿ ಕ್ಯಾಚ್ ಹಿಡಿದು ಬೆರಗುಗೊಳಿಸಿದ ಫ್ಯಾಬಿಯನ್ ಅಲೆನ್; ಇಲ್ಲಿದೆ ನೋಡಿ ವಿಡಿಯೋ!

    ಕ್ರಿಕೆಟ್ ನಿಯಮ ಹೇಳುವುದೇನು?

    ಇದೇನೇ ಇದ್ದರೂ ಕ್ರಿಕೆಟ್ ನಿಯಮಗಳ ಅಧಿಕೃತ ಸಂಸ್ಥೆ ಎಂಸಿಸಿಯ ಆಟದ ನಿಯಮ ಪ್ರಕಾರ, “ಬೌಂಡರಿ ಗೆರೆ ಈಚೆ ಒಬ್ಬ ಫೀಲ್ಡರ್, ಬೌಂಡರಿ ಗೆರೆಯಾಚೆ ಇರುವ ಮತ್ತೊಬ್ಬ ಫೀಲ್ಡರ್ ಜೊತೆ ಸಂಪರ್ಕಕ್ಕೆ ಬಂದರೆ; ಹಾಗೂ ಇಬ್ಬರೂ ಫೀಲ್ಡರ್​ಗಳ ಉದ್ದೇಶವು ಚೆಂಡು ಹಿಡಿಯುದು ಆಗಿದ್ದರೆ ಸಿಕ್ಸ್ ಎಂದು ತೀರ್ಪು ನೀಡಬಹುದು” ಎಂದು ನಿಯಮ 19.5.1 ಹೇಳುತ್ತದೆ.

    ಇಲ್ಲಿ ಬೆಲ್-ಡ್ರಮಂಡ್ ಅವರ ಉದ್ದೇಶವು ಕ್ಯಾಚ್ ಹಿಡಿಯುವುದಾಗಿತ್ತಾದ್ದರಿಂದ ಟಿವಿ ಅಂಪೈರ್ ಇದನ್ನ ನಿಯಮದನುಸಾರ ಸಿಕ್ಸ್ ಎಂದು ಡಿಕ್ಲೇರ್ ಮಾಡಿದರು.

    ಇದನ್ನು ಓದಿ: ಬ್ಯಾಟ್ಸ್​ಮನ್ನೋ, ಬ್ಯಾಟ್ಸ್​ವುಮನ್ನೋ? ಹುಡುಗ ಹುಡುಗಿ ಬ್ಯಾಟುಗಾರರಿಗೆ ಈಗ ಸಮಾನ ಹೆಸರು

    ಕೆಂಟ್ ಚಾಂಪಿಯನ್ಸ್:

    ಅದೃಷ್ಟವಶಾತ್ ಕ್ಯಾಚ್ ಔಟ್​ನಿಂದ ತಪ್ಪಿಸಿಕೊಂಡಿದ್ದ ಸಾಮರ್​ಸೆಟ್ ಬ್ಯಾಟರ್ ಸ್ಮೀದ್ ಅವರ ಅದೃಷ್ಟ ಹೆಚ್ಚು ಹೊತ್ತು ಉಳಿಯಲಿಲ್ಲ. ಮೂರು ಎಸೆಗಳ ಬಳಿಕ ಡೆನ್ಲಿ ಓವರ್​ನ್ಲಲಿ ಕಾಕ್ಸ್ ಅವರೇ ಅದ್ಭುತವಾಗಿ ಕ್ಯಾಚ್ ಹಿಡಿದರು. ಅಂತಿಮವಾಗಿ ಕೆಂಟ್ ತಂಡ 25 ರನ್​ಗಳಿಂದ ಸಾಮರ್ ಸೆಟ್ ತಂಡವನ್ನು ಪರಾಭವಗೊಳಿಸಿ ವೈಟಾಲಿಟಿ ಟಿ20 ಬ್ಲಾಸ್ಟ್ ಟ್ರೋಫಿ ಎತ್ತಿಹಿಡಿಯಿತು.
    Published by:Vijayasarthy SN
    First published: