(VIDEO): ಅಂಪೈರ್ ಔಟ್ ಕೊಟ್ಟರೂ ನಾನು ಔಟ್ ಅಲ್ಲ ಎಂದು ಕ್ರೀಸ್ ಬಿಟ್ಟು ಕದಲದ ಯೂಸುಫ್ ಪಠಾಣ್

ಈ ಸಂದರ್ಭ ಮುಂಬೈ ತಂಡದ ನಾಯಕ ಅಜಿಂಕ್ಯಾ ರಹಾನೆ, ಯೂಸುಫ್ ಬಳಿ ಬಂದು ಪರಿಸ್ಥಿತಿ ಬಗ್ಗೆ ವಿವರಿಸಿದರು. ನಂತರವೂ ಅಂಪೈರ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಪಠಾಣ್ ಪೆವಿಲಿಯನ್ ನತ್ತ ಹೆಜ್ಜೆಹಾಕಿದರು.

Vinay Bhat | news18-kannada
Updated:December 13, 2019, 12:51 PM IST
(VIDEO): ಅಂಪೈರ್ ಔಟ್ ಕೊಟ್ಟರೂ ನಾನು ಔಟ್ ಅಲ್ಲ ಎಂದು ಕ್ರೀಸ್ ಬಿಟ್ಟು ಕದಲದ ಯೂಸುಫ್ ಪಠಾಣ್
ಯೂಸುಫ್ ಪಠಾಣ್
  • Share this:
ವಡೋದರಾ (ಡಿ. 13): 2019-20 ನೇ ಸಾಲಿನ ರಣಜಿ ಟ್ರೋಫಿ ಪಂದ್ಯದಲ್ಲಿ ಬರೋಡ ವಿರುದ್ಧ ಮುಂಬೈ ತಂಡ ಭರ್ಜರಿ ಜಯ ಸಾಧಿಸಿದೆ. ಪೃಥ್ವಿ ಶಾ ಅಮೋಘ ಆಟದ ನೆರವಿನಿಂದ ಮುಂಬೈ 309 ರನ್​ಗಳ ದೊಡ್ಡ ಮೊತ್ತದ ಗೆಲುವು ತನ್ನದಾಗಿಸಿತು. ಈ ನಡುವೆ ಅಂತಿಮ ದಿನದಾಟದಲ್ಲಿ ಬರೋಡ ತಂಡದ ಆಟಗಾರ ಯೂಸುಫ್ ಪಠಾಣ್ ನಡವಳಿಕೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.

ಒಂದು ಕಾಲದಲ್ಲಿ ಟೀಂ ಇಂಡಿಯಾದ ಪ್ರಮುಖ ಆಲ್ರೌಂಡರ್ ಆಗಿದ್ದ ಯೂಸುಫ್ ಕಳಪೆ ಫಾರ್ಮ್​ನಿಂದಾಗಿ ದೇಶೀಯ ಕ್ರಿಕೆಟ್​ನಲ್ಲಿ ಬ್ಯಾಟ್ ಬೀಸುತ್ತಿದ್ದಾರೆ. ಆದರೆ, ಹಿರಿಯ ಆಟಗಾರ ಯೂಸುಫ್ ಇದೇ ಮುಂಬೈ ವಿರುದ್ಧದ ಪಂದ್ಯದಲ್ಲಿ ಅಂಪೈರ್ ನೀಡಿದ ತೀರ್ಪನ್ನು ಕಡೆಗಣಿಸಿ ಸಿಟ್ಟಾದ ಪ್ರಸಂಗ ನಡೆದಿದೆ.

ಟೀಂ ಇಂಡಿಯಾದಲ್ಲಿ ಒಂದು ಸ್ಥಾನಕ್ಕಾಗಿ ಕನ್ನಡಿಗರ ಮಧ್ಯೆ ಶುರುವಾಗಿದೆ ಬಿಗ್ ಫೈಟ್!

ಬರೋಡ ತಂಡ ತನ್ನ ಎರಡನೇ ಇನ್ನಿಂಗ್ಸ್ ಆಡುತ್ತಿರುವಾಗ 48ನೇ ಓವರ್​ನಲ್ಲಿ ಯೂಸುಫ್ ಬ್ಯಾಟಿಂಗ್ ಮಾಡುತ್ತಿದ್ದರು. ಈ ವೇಳೆ ಶಶಾಂಕ್​ ಅಟ್ಟಾರ್ಡೆ ಬೌಲಿಂಗ್​​ನಲ್ಲಿ ಎಲ್​​​ಬಿ ಹಾಗೂ ಕ್ಯಾಚ್​​ಗಾಗಿ ಮುಂಬೈ ಆಟಗಾರರು ಮನವಿ ಮಾಡಿದರು. ಇದನ್ನ ಪುರಸ್ಕರಿಸಿದ ಅಂಪೈರ್​​ ಔಟ್ ನೀಡಿದರು. ಆದರೆ, ಪಠಾಣ್ ಸಿಟ್ಟಾಗಿ ತಾನು ಔಟ್ ಅಲ್ಲ ಎಂದು ಕ್ರೀಸ್ ನಿಂದ ಕದಲಲಿಲ್ಲ. ಅಲ್ಲದೆ ಲೆಗ್​​​ ಅಂಪೈರ್​ಗೆ ಔಟ್​​​ ಇಲ್ಲ ಎಂಬಂತೆ ವಾದಕ್ಕಿಳಿದರು.

 



Rishabh Pant: ಸ್ಯಾಂಡಲ್​ವುಡ್​​ ನಟಿಯೊಂದಿಗೆ ಡೇಟಿಂಗ್​ನಲ್ಲಿದ್ದಾರೆ ರಿಷಭ್ ಪಂತ್?

ಈ ಸಂದರ್ಭ ಮುಂಬೈ ತಂಡದ ನಾಯಕ ಅಜಿಂಕ್ಯಾ ರಹಾನೆ, ಯೂಸುಫ್ ಬಳಿ ಬಂದು ಪರಿಸ್ಥಿತಿ ಬಗ್ಗೆ ವಿವರಿಸಿದರು. ನಂತರವೂ ಅಂಪೈರ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾ ಪಠಾಣ್ ಪೆವಿಲಿಯನ್ ನತ್ತ ಹೆಜ್ಜೆಹಾಕಿದರು.

ಯೂಸೂಫ್​ರ ಈ ವರ್ತನೆಗೆ ಅನೇಕ ಕ್ರಿಕೆಟ್ ಅಭಿಮಾನಿಗಳು ಅಸಮಾಧಾನ ಹೊರಹಾಕಿದ್ದಾರೆ. ಹಿರಿಯ ಆಟಗಾರನೊಬ್ಬ ಅಂಪೈರ್ ತೀರ್ಮಾನವನ್ನು ಒಪ್ಪಿಕೊಳ್ಳಬೇಕು. ಅದುಬಿಟ್ಟು ಈ ರೀತಿ ಮಾಡುವುದು ಕ್ರೀಡಾ ಸ್ಫೂರ್ತಿಯಲ್ಲ ಅಲ್ಲ ಎಂದು ಹೇಳಿದ್ದಾರೆ.

First published:December 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading