HOME » NEWS » Sports » CRICKET RANJI TROPHY SEMIFINALS BENGAL VS KARNATAKA DAY 3 THE TARGET FOR KARNATAKA IS 352 VB

Ranji Trophy: ಕರ್ನಾಟಕಕ್ಕೆ 352 ರನ್​ಗಳ ಟಾರ್ಗೆಟ್; ರೋಚಕ ಘಟ್ಟದತ್ತ ರಣಜಿ ಸೆಮಿ ಫೈನಲ್ ಪಂದ್ಯ!

Bengal vs Karnataka 2nd Semi-Final: ಟಾರ್ಗೆಟ್ ಬೆನ್ನಟ್ಟಿರುವ ಕರ್ನಾಟಕ ತಂಡ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿದೆ. ನಂಬಿಕೆಯ ಓಪನರ್ ಕೆ ಎಲ್ ರಾಹುಲ್ ಸೊನ್ನೆಗೆ ನಿರ್ಗಮಿಸಿರುವುದು ತಂಡಕ್ಕೆ ಆಘಾತ ಉಂಟುಮಾಡಿದೆ.

Vinay Bhat | news18-kannada
Updated:March 2, 2020, 1:35 PM IST
  • Share this:
ಕೋಲ್ಕತ್ತಾ (ಮಾ. 02): 2019-20ನೇ ಸಾಲಿನ ರಣಜಿ ಟ್ರೋಫಿ ಟೂರ್ನಿ ಅಂತಿಮ ಹಂತಕ್ಕೆ ಬಂದು ತಲುಪಿದ್ದು, ಸೆಮಿ ಫೈನಲ್ ಪಂದ್ಯ ನಡೆಯುತ್ತಿದೆ. 2ನೇ ಸೆಮೀಸ್ ಕದನದಲ್ಲಿ ಬೆಂಗಾಲ್ ತಂಡವನ್ನು ಕರ್ನಾಟಕ ತಂಡ 161 ರನ್​ಗೆ ಆಲೌಟ್ ಮಾಡಿದ್ದು, ಗೆಲ್ಲಲು 352 ರನ್​ಗಳ ಸವಾಲು ಸ್ವೀಕರಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಬೆಂಗಾಲ್ ತಂಡ ಅನುಸ್ತಪ್ ಮಜುಂದಾರ್ ಅವರ ಅಜೇಯ 149 ರನ್​ಗಳ ನೆರವಿನಿಂದ 312 ರನ್ ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಕರ್ನಾಟಕ ಇಶಾನ್ ಪೋರೆಲ್(5 ವಿಕೆಟ್) ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 122 ರನ್​ಗೆ ಸರ್ವಪತನ ಕಂಡಿತು.

 
ರಾಜ್ಯ ತಂಡದ ಪರ ಮೊದಲ ಇನ್ನಿಂಗ್ಸ್​ನಲ್ಲಿ ಕೃಷ್ಣಪ್ಪ ಗೌತಮ್ 31 ರನ್ ಬಾರಿಸಿದ್ದು ಆಟಗಾರನೊಬ್ಬ ಗಳಿಸಿದ ಗರಿಷ್ಠ ಸ್ಕೋರ್ ಆಗಿತ್ತು. ಕೆ ಎಲ್ ರಾಹುಲ್ ಹಾಗೂ ಮನೀಶ್ ಪಾಂಡೆ ಯಂತಹ ಘಟಾನುಘಟಿ ಆಟಗಾರರಿದ್ದರೂ ಕರ್ನಾಟಕ ಸಂಕಷ್ಟಕ್ಕೆ ಸಿಲುಕಿತು.

Virat Kohli Video: ಸುದ್ದಿಗೋಷ್ಠಿಯಲ್ಲಿ ವಿರಾಟ್​ ಕೊಹ್ಲಿ ಮತ್ತು ನ್ಯೂಜಿಲೆಂಡ್ ಪತ್ರಕರ್ತರ ನಡುವೆ ಗಲಾಟೆ

190 ರನ್​ಗಳ ಭರ್ಜರಿ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ಬೆಂಗಾಲ್ ಬ್ಯಾಟ್ಸ್​ಮನ್​ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಸುದಿಪ್ ಛಟರ್ಚಿ 45 ರನ್ ಗಳಿಸಿದರೆ, ಅನುಸ್ತಪ್ ಮಜುಂದಾರ್ 41 ರನ್ ಗಳಿಸಿದರು.

ಬೆಂಗಾಲ್ 54.4 ಓವರ್​ನಲ್ಲಿ 161 ರನ್​ಗೆ ಆಲೌಟ್ ಆಗುವ ಮೂಲಕ ಕರ್ನಾಟಕಕ್ಕೆ352 ರನ್​ಗಳ ಟಾರ್ಗೆಟ್ ನೀಡಿತು. ಅಭಿಮನ್ಯು ಮಿಥುನ್ 4 ಹಾಗೂ ಕೃಷ್ಣಪ್ಪ ಗೌತಮ್ 3 ವಿಕೆಟ್ ಕಿತ್ತರು.

ಸೋಲಿಲ್ಲದ ಸರದಾರನಿಗೆ ಶಾಕ್ ಕೊಟ್ಟ ಕಿವೀಸ್; ಭಾರತಕ್ಕೆ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಮೊದಲ ಕಹಿ!

ಸದ್ಯ ಟಾರ್ಗೆಟ್ ಬೆನ್ನಟ್ಟಿರುವ ಕರ್ನಾಟಕ ತಂಡ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡಿದೆ. ನಂಬಿಕೆಯ ಓಪನರ್ ಕೆ ಎಲ್ ರಾಹುಲ್ ಸೊನ್ನೆಗೆ ನಿರ್ಗಮಿಸಿರುವುದು ತಂಡಕ್ಕೆ ಆಘಾತ ಉಂಟುಮಾಡಿದೆ. ಇನ್ನೂ ಒಂದೂವರೆ ದಿನಗಳ ಆಟ ಬಾಕಿ ಉಳಿದಿದ್ದು, ಯಾರಿಗೆ ಜಯ ಎಂಬುವುದನ್ನು ಕಾದುನೋಡಬೇಕಿದೆ.

Youtube Video
First published: March 2, 2020, 1:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories