Rranji Trophy Semi Final: ಏಕಾಂಗಿ ಹೋರಾಟ, ಅಜೇಯ ಶತಕ; ಕರ್ನಾಟಕಕ್ಕೆ ಕಂಟಕವಾದ ಮಜುಂದಾರ್

ಮಜುಂದಾರ್ (ಅಜೇಯ 120 ರನ್, 173 ಎಸೆತ) ಕ್ರೀಸ್ ಕಚ್ಚಿ ಆಡುತ್ತಿರುವ ಪರಿಣಾಮ ಬೆಂಗಾಲ್ ಮೊದಲ ದಿನದಾದ ಅಂತ್ಯಕ್ಕೆ 82 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 275 ರನ್ ಕಲೆಹಾಕಿತು.

news18-kannada
Updated:February 29, 2020, 5:17 PM IST
Rranji Trophy Semi Final: ಏಕಾಂಗಿ ಹೋರಾಟ, ಅಜೇಯ ಶತಕ; ಕರ್ನಾಟಕಕ್ಕೆ ಕಂಟಕವಾದ ಮಜುಂದಾರ್
ಅನುಸ್ತಪ್ ಮಜುಂದಾರ್
  • Share this:
ಕಳೆದ ಮೂರು ತಿಂಗಳುಗಳಿಂದ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿ ಅಂತಿಮ ಹಂತಕ್ಕೆ ಬಂದು ತಲುಪಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕರ್ನಾಟಕ ಹಾಗೂ ಬೆಂಗಾಲ್ ತಂಡದ ನಡುವೆ ಎರಡನೇ ಸೆಮಿ ಫೈನಲ್ ಪಂದ್ಯ ನಡೆಯುತ್ತಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಬೆಂಗಾಲ್ ಮೂರಂಕಿ ದಾಟುವುದು ಕಷ್ಟದಲ್ಲಿತ್ತಾದರೂ, ಅನುಸ್ತಪ್ ಮಜುಂದಾರ್ ಏಕಾಂಗಿಯಾಗಿ ನಿತ್ತು ಅಜೇಯ ಶತಕ ಸಿಡಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಬೆಂಗಾಲ್ 82 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 275 ರನ್ ಗಳಿಸಿದೆ.

 
IND vs SA: ಮಾರ್ಚ್​ನಲ್ಲಿ ಆಫ್ರಿಕಾ ವಿರುದ್ಧ ಏಕದಿನ ಸರಣಿ; ನಿಟ್ಟುಸಿರು ಬಿಟ್ಟ ಭಾರತ, ಕಾರಣವೇನು?

ಬೆಂಗಾಲ್ ತಂಡ ಆರಂಭದಲ್ಲೇ ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಭಿಷೇಕ್ ರಾಮನ್ ಸೊನ್ನೆ ಸುತ್ತಿದರೆ, ನಾಯಕ ಅಭಿಮನ್ಯು ಈಶ್ವರನ್ 15, ಸುದಿಪ್ ಛಟರ್ಜಿ 20, ಅರ್ನಬ್ ನಂದಿ 17, ಅನುಭವಿ ಆಟಗಾರ ಮನೋಜ್ ತಿವಾರಿ 8 ಹಾಗೂ ಶ್ರೀವತ್ಸ್ ಗೋಸ್ವಾಮಿ ಶೂನ್ಯಕ್ಕೆ ನಿರ್ಗಮಿಸಿದರು.

ಈ ಮೂಲಕ ಕರ್ನಾಟಕ ಬೌಲರ್​ಗಳ ಸಂಘಟಿತ ಹೋರಾಟ ಫಲದಿಂದ ಬೆಂಗಾಲ್ ತಂಡ ಕೇವಲ 67 ರನ್​ಗೆ ತನ್ನ 6 ವಿಕೆಟ್ ಕಳೆದುಕೊಂಡು ಆಲೌಟ್ ಭೀತಿಯಲ್ಲಿತ್ತು. ಆದರೆ, ಈ ಸಂದರ್ಭ ಅನುಸ್ತಪ್ ಮಜುಂದಾರ್ ಜೊತೆಯಾದ ಶಹ್ಬಾಜ್ ಅಹ್ಮದ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ಮಜುಂದಾರ್ ರನ್ ಕಲೆಹಾಕುತ್ತಿದ್ದರೆ, ಇತ್ತ ಅಹ್ಮದ್ 35 ರನ್ ಗಳಿಸಿ ಉತ್ತಮ ಸಾಥ್ ನೀಡಿದರು.

ಬಳಿಕ ಬಂದ ಆಕಾಶ್ ದೀಪ್(44) ಕೂಡ ಮಜುಂದಾರ್ ಜೊತೆಗೂಡಿ ಬಂಗಾಲ್ ತಂಡಕ್ಕೆ ಆಸರೆಯಾಗಿ ನಿಂತರು. ಶಹ್ಬಾಜ್ ಅಹ್ಮದ್ ಹಾಗೂ ಆಕಾಶ್ ದೀಪ್ ಜೊತೆ ಮಜುಂದಾರ್ ಶತಕದ ಜೊತೆಯಾಟ ಆಡಿ  ತಂಡದ ಮೊತ್ತವನ್ನು 250ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

2 ಸಿಕ್ಸರ್ ಬಾರಿಸಿದ ಬೆನ್ನಲ್ಲೇ ಮೈದಾನದಲ್ಲಿ ಮೃತಪಟ್ಟ ಕರ್ನಾಟಕದ ಕ್ರಿಕೆಟ್ ಆಟಗಾರ!

ಮೊದಲ ದಿನವೇ ಬೆಂಗಾಲ್ ತಂಡವನ್ನು ಆಲೌಟ್ ಮಾಡುವಲ್ಲಿ ರಾಜ್ಯ ತಂಡ ವಿಫಲವಾಯಿತು. ಮಜುಂದಾರ್ (ಅಜೇಯ 120 ರನ್, 173 ಎಸೆತ) ಕ್ರೀಸ್ ಕಚ್ಚಿ ಆಡುತ್ತಿರುವ ಪರಿಣಾಮ ಬೆಂಗಾಲ್ ಮೊದಲ ದಿನದಾದ ಅಂತ್ಯಕ್ಕೆ 82 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 275 ರನ್ ಕಲೆಹಾಕಿತು. ಇಶಾನ್ ಪೊರೆಲ್ ಅವರು ಮಜುಂದಾರ್ 10ನೇ ವಿಕೆಟ್​ಗೆ ಕ್ರೀಸ್​ನಲ್ಲಿದ್ದಾರೆ.

ಕರ್ನಾಟಕ ಪರ ಅಭಿಮನ್ಯು ಮಿಥುನ್ 3 ವಿಕೆಟ್ ಕಿತ್ತರೆ, ಪ್ರಸಿದ್ಧ್ ಕೃಷ್ಣ, ರೋನಿತ್ ಮೊರೆ ಹಾಗೂ ಕೃಷ್ಣಪ್ಪ ಗೌತಮ್ ತಲಾ 2 ವಿಕೆಟ್ ಪಡೆದರು. ಕರ್ನಾಟಕದ ಬ್ಯಾಟಿಂಗ್ ವಿಭಾಗ ಸಾಕಷ್ಟು ಬಲಿಷ್ಠವಾಗಿದ್ದು, ಕೆ ಎಲ್ ರಾಹುಲ್ ಹಾಗೂ ಮನೀಶ್ ಪಾಂಡೆ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

First published:February 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading