Ranji Trophy: ಕರ್ನಾಟಕಕ್ಕೆ ಕಂಟಕವಾದ ಪೂಜಾರ ಭರ್ಜರಿ ದ್ವಿಶತಕ; 400ರ ಗಡಿ ದಾಟಿದ ಸೌರಾಷ್ಟ್ರ ಮೊತ್ತ

ಪೂಜಾರ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಊಟದ ವಿರಾಮ ವೇಳೆಗೆ ಪೂಜಾರ 349 ಎಸೆತಗಳಲ್ಲಿ 22 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿ ಪೂಜಾರ 223 ರನ್​ಗಳನ್ನು ಪೂರೈಸಿದ್ದಾರೆ.

Vinay Bhat | news18-kannada
Updated:January 12, 2020, 12:21 PM IST
Ranji Trophy: ಕರ್ನಾಟಕಕ್ಕೆ ಕಂಟಕವಾದ ಪೂಜಾರ ಭರ್ಜರಿ ದ್ವಿಶತಕ; 400ರ ಗಡಿ ದಾಟಿದ ಸೌರಾಷ್ಟ್ರ ಮೊತ್ತ
ಚೇತೇಶ್ವರ್ ಪೂಜಾರ
  • Share this:
ಬೆಂಗಳೂರು (ಜ. 12): ರಾಜ್ಕೋಟ್​ನಲ್ಲಿ ಸಾಗುತ್ತಿರುವ ರಣಜಿ ಟ್ರೋಫಿ ಟೂರ್ನಿಯ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ ಎದುರಾಳಿಯ ವಿಕೆಟ್​ಗಾಗಿ ಪರದಾಡುತ್ತಿದೆ. ಚೇತೇಶ್ವರ್ ಭರ್ಜರಿ ದ್ವಿಶತಕ ಸಿಡಿಸಿ ಕ್ರೀಸ್ ಕಚ್ಚಿ ಆಡುತ್ತಿದ್ದರೆ, ಶತಕ ಬಾರಿಸಿ ಶೆಲ್ಡನ್ ಜಾಕ್ಸನ್ ಸಾಥ್ ನೀಡುತ್ತಿದ್ದಾರೆ.

ನಿನ್ನೆ ಮೊದಲ ದಿನದಾಟದ ಅಂತ್ಯಕ್ಕೆ ಸೌರಾಷ್ಟ್ರ 2 ವಿಕೆಟ್ ನಷ್ಟಕ್ಕೆ 296 ರನ್​ಗಳಿಸಿತ್ತು. ಪೂಜಾರ 162 ರನ್ ಗಳಿಸಿ ಹಾಗೂ ಶೆಲ್ಡನ್ ಜ್ಯಾಕ್ಸನ್ 99 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.

ಅದರಂತೆ ಇಂದು ಬ್ಯಾಟಿಂಗ್ ಮುಂದುವರಿಸಿದ ಇವರಿಬ್ಬರು ಭರ್ಜರಿ ಆಟ ಪ್ರದರ್ಶಿಸುತ್ತಿದ್ದಾರೆ. ಪೂಜಾರ- ಜಾಕ್ಸನ್ ತ್ರಿಶತಕದ ಜೊತೆಯಾಟ ಆಡಿ ಮುನ್ನುಗ್ಗುತ್ತಿದ್ದಾರೆ.

ಕಿವೀಸ್ ಸರಣಿಗೆ ಇಂದು ಭಾರತ ತಂಡ; ಧೋನಿ ಅಲ್ಲ, ಕಮ್​ಬ್ಯಾಕ್ ಮಾಡಲಿದ್ದಾನೆ ಈ ಸ್ಟಾರ್ ಆಟಗಾರ?

 ಈ ನಡುವೆ ಪೂಜಾರ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಊಟದ ವಿರಾಮ ವೇಳೆಗೆ ಪೂಜಾರ 349 ಎಸೆತಗಳಲ್ಲಿ 22 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿ ಪೂಜಾರ 223 ರನ್​ಗಳನ್ನು ಪೂರೈಸಿದ್ದಾರೆ.

ಇತ್ತ ಜಾಕ್ಸನ್ ಶತಕ ಸಿಡಿಸಿ 290 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್​ನೊಂದಿಗೆ 150 ರನ್ ಪೂರೈಸಿ ಅಮೋಘ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಸೌರಾಷ್ಟ್ರ ಮೊತ್ತ ಈಗಾಗಲೇ 400ರ ಗಡಿ ದಾಟಿದ್ದು 500ರತ್ತ ದಾಪುಗಾಲಿಡುತ್ತಿದೆ. ಕರ್ನಾಟಕ ಪರ ಜಗದೀಶ್ ಸುಚಿತ್ 2 ವಿಕೆಟ್ ಪಡೆದಿದ್ದಾರೆ.

ಐಸಿಸಿ ರ‍್ಯಾಂಕಿಂಗ್​​ನಲ್ಲಿ ಕೊಹ್ಲಿಯನ್ನೇ ಹಿಂದಿಕ್ಕಿದ ಕನ್ನಡಿಗ; ರಾಹುಲ್ ಭಾರತದ ನಂ. 1 ಬ್ಯಾಟ್ಸ್​ಮನ್​

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌರಾಷ್ಟ್ರ ಆರಂಭಿಕ ಆಘಾತ ಅನುಭವಿಸಿತು. 33 ರನ್ನಾಗುಷ್ಟರಲ್ಲಿ 2 ವಿಕೆಟ್ ಕಳೆದಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಈ ಸಂದರ್ಭ ಒಂದಾದ ಪೂಜಾರ ಹಾಗೂ ಜಾಕ್ಸನ್ ಪಂದ್ಯದ ಗತಿಯನ್ನೇ ಬದಲಾಯಿಸಿ ಬ್ಯಾಟ್ ಬೀಸುತ್ತಿದ್ದಾರೆ.

ಪೂಜಾರ 50 ಶತಕಗಳ ಮೈಲಿಗಲ್ಲು:

ಭಾರತ ಕಂಡ ಉತ್ತಮ ಟೆಸ್ಟ್ ಬ್ಯಾಟುಗಾರರಲ್ಲೊಬ್ಬರೆನಿಸಿರುವ ಚೇತೇಶ್ವರ್ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 50 ಶತಕ ಗಳಿಸಿದ ಮೈಲಿಗಲ್ಲು ಮುಟ್ಟಿದ್ಧಾರೆ. ಈ ಸಾಧನೆ ಮಾಡಿದ 9ನೇ ಭಾರತೀಯರೆನಿಸಿದ್ಧಾರೆ. ಸುನೀಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್ ಅವರು 81 ಶತಕಗಳನ್ನು ಗಳಿಸಿರುವುದು ಈ ಪಟ್ಟಿಯಲ್ಲಿ ಆದಿಯಲ್ಲಿದೆ.

ರಾಹುಲ್ ದ್ರಾವಿಡ್, ವಿಜಯ್ ಹಜಾರೆ, ವಾಸಿಮ್ ಜಾಫರ್, ದಿಲೀಪ್ ವೆಂಗ್ಸರ್ಕರ್, ವಿವಿಎಸ್ ಲಕ್ಷ್ಮಣ್ ಮತ್ತು ಮೊಹಮ್ಮದ್ ಅಜರುದ್ದೀನ್ ಅವರ ನಂತರದ ಸ್ಥಾನದಲ್ಲಿ ಪೂಜಾರ ಇದ್ದಾರೆ. ಆದರೆ, ಹಾಲಿ ಕ್ರಿಕೆಟಿಗರ ಪೈಕಿ ವಾಸಿಂ ಜಾಫರ್ ಅವರೊಬ್ಬರು ಮಾತ್ರ ಪೂಜಾರಗಿಂತ ಮೇಲಿದ್ಧಾರೆ.

First published: January 12, 2020, 12:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading