Ranji Trophy: ಪೂಜಾರ ದ್ವಿಶತಕ; ಜಾಕ್ಸನ್ ಶತಕ; ಸೌರಾಷ್ಟ್ರ 581 ರನ್​ಗೆ ಡಿಕ್ಲೇರ್; ಕರ್ನಾಟಕಕ್ಕೆ ಆರಂಭದಲ್ಲೇ ಆಘಾತ!

ಮೊದಲ ದಿನದಾಟದ ಅಂತ್ಯಕ್ಕೆ ಸೌರಾಷ್ಟ್ರ 2 ವಿಕೆಟ್ ನಷ್ಟಕ್ಕೆ 296 ರನ್​ಗಳಿಸಿತ್ತು. ಪೂಜಾರ 162 ರನ್ ಗಳಿಸಿ ಹಾಗೂ ಶೆಲ್ಡನ್ ಜ್ಯಾಕ್ಸನ್ 99 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.

news18-kannada
Updated:January 13, 2020, 8:32 AM IST
Ranji Trophy: ಪೂಜಾರ ದ್ವಿಶತಕ; ಜಾಕ್ಸನ್ ಶತಕ; ಸೌರಾಷ್ಟ್ರ 581 ರನ್​ಗೆ ಡಿಕ್ಲೇರ್; ಕರ್ನಾಟಕಕ್ಕೆ ಆರಂಭದಲ್ಲೇ ಆಘಾತ!
ಚೇತೇಶ್ವರ್ ಪೂಜಾರ
  • Share this:
ಬೆಂಗಳೂರು (ಜ. 13): ರಾಜ್ಕೋಟ್​ನಲ್ಲಿ ಸಾಗುತ್ತಿರುವ ರಣಜಿ ಟ್ರೋಫಿ ಟೂರ್ನಿಯ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ ಸಂಕಷ್ಟದಲ್ಲಿ ಸಿಲುಕಿದೆ. ಚೇತೇಶ್ವರ್ ಭರ್ಜರಿ ದ್ವಿಶತಕ ಹಾಗೂ ಶೆಲ್ಡನ್ ಜಾಕ್ಸನ್ ಶತಕದ ನೆರವಿನಿಂದ ಸೌರಷ್ಟ್ರ ದೊಡ್ಡ ಮೊತ್ತ ಕಲೆಹಾಕಿದ್ದು, ಇತ್ತ ರಾಜ್ಯ ತಂಡ ಬ್ಯಾಟಿಂಗ್​ನಲ್ಲೂ ವಿಫಲವಾಗಿದೆ.

ಸೌರಾಷ್ಟ್ರ ತಂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಒಟ್ಟು 166 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ ಬರೋಬ್ಬರಿ 581 ರನ್ ಕಲೆಹಾಕಿ ಡಿಕ್ಲೇರ್ ಘೋಷಿಸಿತು. ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಕರ್ನಾಟಕಕ್ಕೆ ಆರಂಭದಲ್ಲೇ ದೇವದತ್ ಪಡಿಕ್ಕಲ್ ಶೂನ್ಯಕ್ಕೆ ಔಟ್ ಆಗಿ ಆಘಾತ ನೀಡಿದರು.

ಕಿವೀಸ್ ಸರಣಿಗೆ ಟೀಂ ಇಂಡಿಯಾ ಪ್ರಕಟ; ಬಿಸಿಸಿಐ ವಿರುದ್ಧ ಸಿಡಿದೆದ್ದ ಅಭಿಮಾನಿಗಳು; ಯಾಕೆ ಗೊತ್ತಾ?

ಎರಡನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ 12 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ರಾಜ್ಯ ತಂಡ ಇನ್ನೂ 568 ರನ್​ಗಳ ಹಿನ್ನಡೆಯಲ್ಲಿದೆ. ರವಿಕುಮಾರ್ ಸಮರ್ಥ್​ 6 ಹಾಗೂ ರೋಹನ್ ಕದಮ್ 7 ರನ್ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮೊದಲ ದಿನದಾಟದ ಅಂತ್ಯಕ್ಕೆ ಸೌರಾಷ್ಟ್ರ 2 ವಿಕೆಟ್ ನಷ್ಟಕ್ಕೆ 296 ರನ್​ಗಳಿಸಿತ್ತು. ಪೂಜಾರ 162 ರನ್ ಗಳಿಸಿ ಹಾಗೂ ಶೆಲ್ಡನ್ ಜ್ಯಾಕ್ಸನ್ 99 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.

ಅದರಂತೆ ಎರಡನೇ ದಿನವಾದ ನಿನ್ನೆ ಬ್ಯಾಟಿಂಗ್ ಮುಂದುವರಿಸಿದ ಇವರಿಬ್ಬರು ಭರ್ಜರಿ ಆಟ ಪ್ರದರ್ಶಿಸಿದರು. ಪೂಜಾರ- ಜಾಕ್ಸನ್ ತ್ರಿಶತಕದ ಜೊತೆಯಾಟ ಆಡಿದರು. ಅಲ್ಲದೆ ಪೂಜಾರ ಅಮೋಘ ದ್ವಿಶತಕ ಸಿಡಿಸಿ ಮಿಂಚಿದರು. 390 ಎಸೆತಗಳಲ್ಲಿ 24 ಬೌಂಡರಿ, 1 ಸಿಕ್ಸರ್​ನೊಂದಿಗೆ ಪೂಜಾರ 248 ರನ್ ಗಳಿಸಿದರು.

BBL: 120 ಎಸೆತಗಳಲ್ಲಿ 219 ರನ್; ಬಿಗ್​ಬ್ಯಾಷ್​​ನಲ್ಲಿ ಅಬ್ಬರಿಸಿ ಬೊಬ್ಬಿರಿದ ಆರ್​ಸಿಬಿ ಆಟಗಾರಇತ್ತ ಜಾಕ್ಸನ್ 299 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್ ಸಿಡಿಸಿ 161 ರನ್ ಬಾರಿಸಿದರು. ಪ್ರೇರಕ್ ಮಂಕಡ್ 86 ಎಸೆತಗಳಲ್ಲಿ ಅಜೇಯ 86 ರನ್ ಗಳಿಸಿದರು.ಅಂತಿಮವಾಗಿ ಸೌರಾಷ್ಟ್ರ 7 ವಿಕೆಟ್ ನಷ್ಟಕ್ಕೆ 581 ರನ್ ಗಳಿಸಿರುವಾಗ ಡಿಕ್ಲೇರ್ ಘೋಷಿಸಿತು. ರಾಜ್ಯ ತಂಡದ ಪರ ಪ್ರವೀಣ್ ದುಬೆ, ಪವನ್ ದೇಶಪಾಂಡೆ, ಜಗದೀಶ್ ಸುಚಿತ್ 2 ವಿಕೆಟ್ ಕಿತ್ತರೆ, ರೋನಿತ್ ಮೋರೆ 1 ವಿಕೆಟ್ ಪಡೆದರು.

First published: January 13, 2020, 8:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading