ರಣಜಿ ಟ್ರೋಫಿಯಲ್ಲಿ ಕರ್ನಾಟಕ ಶುಭಾರಂಭ; ತಮಿಳುನಾಡು ವಿರುದ್ಧ ರೋಚಕ ಜಯ

ಕೊನೆ ಹಂತದಲ್ಲಿ ದಿನದಾಟದ ಅಂತ್ಯದ ವೇಳೆ ಕ್ರೀಸ್ ಕಚ್ಚಿ ನಿಂತ ಮುರುಗನ್ ಅಶ್ವಿನ್ ಪಂದ್ಯವನ್ನು ರೋಚಕ ಘಟ್ಟದತ್ತ ತಂದಿಟ್ಟರು. ಓವರ್ ಅಂತ್ಯವಾದರೂ ಕೊಂಚಹೊತ್ತು ಪಂದ್ಯವನ್ನು ಮುಂದುವರೆಸಲಾಯಿತು.

ಕೃಷ್ಣಪ್ಪ ಗೌತಮ್

ಕೃಷ್ಣಪ್ಪ ಗೌತಮ್

  • Share this:
ದಿಂಡಿಗಲ್ (ಡಿ. 12): ಇಲ್ಲಿನ ಎನ್​​ಪಿಆರ್​ ಕ್ರೀಡಾಂಗಣದಲ್ಲಿ ನಡೆದ ತಮಿಳುನಾಡು ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ ರೋಚಕ ಜಯ ಸಾಧಿಸಿದೆ. ಕೃಷ್ಣಪ್ಪ ಗೌತಮ್ ಸ್ಪಿನ್ ದಾಳಿಗೆ ನಲುಗಿದ ತಮಿಳುನಾಡು ತಂಡ ಕರ್ನಾಟಕ ನೀಡಿದ್ದ ಟಾರ್ಗೆಟ್ ಬೆನ್ನಟ್ಟುವಲ್ಲಿ ವಿಫಲವಾಯಿತು. ಪರಿಣಾಮ ರಾಜ್ಯ ತಂಡ 26 ರನ್​ಗಳ ಜಯ ಸಾಧಿಸಿತು.

ರಾಜ್ಯ ತಂಡ ನೀಡಿದ್ದ 181 ರನ್​ಗಳ ಟಾರ್ಗೆಟ್ ಬೆನ್ನಟ್ಟಿದ ತಮಿಳುನಾಡು ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಮೊದಲ ಇನ್ನಿಂಗ್ಸ್​ನಲ್ಲಿ ತಂಡಕ್ಕೆ ಆಸರೆಯಾಗಿದ್ದ ದಿನೇಶ್ ಕಾರ್ತಿಕ್ ಕೂಡ ವೈಫಲ್ಯ ಅನುಭವಿಸಿದರು.

 ಅಭಿನವ್ ಮುಕುಂದ್ 42 ರನ್ ಗಳಿಸಿದರೆ, ಮುರಳಿ ವಿಜಯ್ 15 ರನ್ ಗಳಿಸಿ ರನೌಟ್​ಗೆ ಬಲಿಯಾದರು. ಅಪರಜಿತ್ ಸೊನ್ನೆ ಸುತ್ತಿದರೆ, ಆರ್ ಅಶ್ವಿನ್ ಕೇವಲ 2 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಾಯಕ ವಿಜಯ್ ಶಂಕರ್(5) ಹಾಗೂ ದಿನೇಶ್ ಕಾರ್ತಿಕ್(17) ತಂಡಕ್ಕೆ ಆಸರೆಯಾಗಿ ನಿಲ್ಲಲಿಲ್ಲ.

ಕೊಹ್ಲಿ, ರೋಹಿತ್, ರಾಹುಲ್​ರನ್ನು ಹಿಂದಿಕ್ಕಿ ಪಾಕ್ ಆಟಗಾರ ನಂಬರ್ 1

ಆದರೆ, ಕೊನೆ ಹಂತದಲ್ಲಿ ದಿನದಾಟದ ಅಂತ್ಯದ ವೇಳೆ ಕ್ರೀಸ್ ಕಚ್ಚಿ ನಿಂತ ಮುರುಗನ್ ಅಶ್ವಿನ್ ಪಂದ್ಯವನ್ನು ರೋಚಕ ಘಟ್ಟದತ್ತ ತಂದಿಟ್ಟರು. ಓವರ್ ಅಂತ್ಯವಾದರೂ ಕೊಂಚಹೊತ್ತು ಪಂದ್ಯವನ್ನು ಮುಂದುವರೆಸಲಾಯಿತು. ಆದರೆ, ಗೌತಮ್ ಅವರು ಅಂತಿಮವಾಗಿ ವಿಗ್ನೀಶ್​​ರನ್ನು ಔಟ್ ಮಾಡುವ ಮೂಲಕ ತಮಿಳುನಾಡು ಸೋಲು ಕಂಡಿತು. ಮುರುಗನ್ 77 ಎಸೆತಗಳಲ್ಲಿ 23 ರನ್ ಗಳಿಸಿ ಅಜೇಯರಾಗಿ ಉಳಿದರು.

ತಮಿಳುನಾಡು 154 ರನ್​ಗೆ ಆಲೌಟ್ ಆಯಿತು. ಕರ್ನಾಟಕ ಪರ ಗೌತಮ್ 8 ವಿಕೆಟ್ ಕಿತ್ತು ಮಿಂಚಿದರೆ, ವಿ ಕೌಶಿಕ್ 1 ವಿಕೆಟ್ ಪಡೆದರು.

ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಡಿ. 17 ರಿಂದ ಉತ್ತರ ಪ್ರದೇಶ ವಿರುದ್ಧ ಆಡಲಿದೆ. ಈ ಪಂದ್ಯ ಹುಬ್ಬಳಿಯಲ್ಲಿ ನಡೆಯಲಿದೆ.

 IPL 2020 Auction: ಐಪಿಎಲ್ ಹರಾಜಿನಲ್ಲಿ ಒಟ್ಟು ಎಷ್ಟು ಆಟಗಾರರು?; ಇಲ್ಲಿದೆ ಸಂಪೂರ್ಣ ಮಾಹಿತಿ

ಇದಕ್ಕೂ ಮೊದಲು ಮೊದಲು ಬ್ಯಾಟ್ ಮಾಡಿದ ಕರ್ನಾಟಕ ದೇವದತ್ ಪಡಿಕ್ಕಲ್ ಅವರ 78, ಪವನ್ ದೇಶಪಾಂಡೆ 65 ಹಾಗೂ ಕೃಷ್ಟಪ್ಪ ಗೌತಮ್ 51 ರನ್​ಗಳ ನೆರವಿನಿಂದ 110.4 ಓವರ್​ನಲ್ಲಿ 336 ರನ್​ಗೆ ಆಲೌಟ್ ಆಯಿತು. ತಮಿಳುನಾಡು ಪರ ಆರ್. ಅಶ್ವಿನ್ 4 ವಿಕೆಟ್ ಕಿತ್ತರೆ, ವಿಗ್ನೇಶ್ ಹಾಗೂ ಸಿದ್ಧಾರ್ಥ್​ ತಲಾ 2 ವಿಕೆಟ್ ಪಡೆದರು.

ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ತಮಿಳುನಾಡು ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಕ್ರೀಸ್​ ಕಚ್ಚಿ ಆಡುವಲ್ಲಿ ವಿಫಲವಾದ ಬ್ಯಾಟ್ಸ್​ಮನ್​ಗಳು ಕೃಷ್ಣಪ್ಪ ಗೌತಮ್ ಬೌಲಿಂಗ್ ದಾಳಿಗೆ ನಲುಗಿ ಹೋದರು.

ತಮಿಳುನಾಡು ಪರ ದಿನೇಶ್ ಕಾರ್ತಿಕ್ ಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸಿದ್ದು ಬಿಟ್ಟರೆ, ಅಭಿಮನವ್ ಮುಕುಂದ್ 47 ರನ್ ಗಳಿಸಿದ್ದೇ ಹೆಚ್ಚು. ತಮಿಳುನಾಡು 307 ರನ್​ಗೆ ಸರ್ವಪತನ ಕಂಡಿತು. ಕಾರ್ತಿಕ್ 235 ಎಸೆತಗಳಲ್ಲಿ 16 ಬೌಂಡರಿ ಬಾರಿಸಿ 113 ರನ್ ಕಲೆಹಾಕಿದರು.

Ranji Trophy: ಅಸ್ಸಾಂನಲ್ಲಿ ಬಿಗುವಿನ ಪರಿಸ್ಥಿತಿ; ರಣಜಿ ಟ್ರೋಫಿ ಪಂದ್ಯಗಳು ರದ್ದು

29 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​​ ಆರಂಭಿಸಿದ ಕರ್ನಾಟಕ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.ಆರ್ ಅಶ್ವಿನ್ ಹಾಗೂ ವಿಗ್ನೇಶ್ ಬೌಲಿಂಗ್ ದಾಳಿಯಿಂದ ಕರ್ನಾಟಕ ಕೇವಲ 151 ರನ್​ಗೆ ಸರ್ವಪತನ ಕಂಡಿತು. ರಾಜ್ಯ ತಂಡದ ಪರ ಪಡಿಕ್ಕಲ್ 39 ರನ್ ಗಳಿಸಿದ್ದೇ ಹೆಚ್ಚಾಗಿತ್ತು. ಅಶ್ವಿನ್ 4 ಹಾಗೂ ವಿಗ್ನೇಶ್ 3 ವಿಕೆಟ್ ಕಿತ್ತರು.

Published by:Vinay Bhat
First published: