Vinay BhatVinay Bhat
|
news18-kannada Updated:March 3, 2020, 10:05 AM IST
ದೇವದತ್ ಪಡಿಕ್ಕಲ್
ಕೋಲ್ಕತ್ತಾ (ಮಾ. 03): ಇಲ್ಲಿನ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಸೋಲಿನ ಸುಳಿಗೆ ಸಿಲುಕಿದೆ. ಬೆಂಗಾಲ್ ನೀಡಿದ್ದ 351 ರನ್ಗಳ ಟಾರ್ಗೆಟ್ ಬೆನ್ನಟ್ಟಿರುವ ರಾಜ್ಯ ತಂಡ 110 ರನ್ಗೂ ಮೊದಲೇ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.
ನಿನ್ನೆ ಎರಡನೇ ಇನ್ನಿಂಗ್ಸ್ನಲ್ಲಿ
ಬೆಂಗಾಲ್ ತಂಡವನ್ನು ನಾಯರ್ ಪಡೆ 161 ರನ್ಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಯಿತು. ಆದರೆ, ಉತ್ತಮ ಮುನ್ನಡೆ ಹೊಂದಿದ್ದ ಬೆಂಗಾಲ್ ತಂಡ ಕರ್ನಾಟಕಕ್ಕೆ ಗೆಲ್ಲಲು 351 ರನ್ಗಳ ಟಾರ್ಗೆಟ್ ನೀಡಿತು.
ಈ ಗುರಿ ಬೆನ್ನಟ್ಟಿದ ರಾಜ್ಯ ತಂಡಕ್ಕೆ ಕೆ. ಎಲ್ ರಾಹುಲ್ ಶೂನ್ಯಕ್ಕೆ ಔಟಾಗುವ ಮೂಲಕ ಶಾಕ್ ನೀಡಿದರು. ಆರಂಭಿಕ ಆಘಾತದಿಂದ ಎಚ್ಚರಿಕೆಯ ಆಟದತ್ತ ಮುಖ ಮಾಡಿದ ರವಿಕುಮಾರ್ ಸಮರ್ಥ್-ದೇವದತ್ ಪಟಿಕ್ಕಲ್ ಅರ್ಧಶತಕದ ಜೊತೆಯಾಟವಾಡಿದರು.
MS Dhoni Video: 7 ತಿಂಗಳ ಬಳಿಕ ಮೈದಾನಕ್ಕಿಳಿದ ಧೋನಿ; ಚೇಪಕ್ನಲ್ಲಿMSD ಅಭ್ಯಾಸ ಹೀಗಿದೆ ನೋಡಿ!
ತಂಡದ ಮೊತ್ತ 57 ಆಗಿದ್ದಾಗ ಸಮರ್ಥ್(27) ಅಕ್ಷದೀಪ್ ಎಸೆತದಲ್ಲಿ ಎಲ್ಬಿಡಬ್ಲ್ಯೂಗೆ ಬಲಿಯಾದರು. ಈ ಹಂತದಲ್ಲಿ ಕ್ರೀಸ್ಗಿಳಿದ ನಾಯಕ ಕರುಣ್ ನಾಯಕ್ ಕೇವಲ 6 ರನ್ಗಳಿಸಿ ಪೆವಿಲಿಯನ್ಗೆ ಮರಳಿರು.
ಹೀಗೆ ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿತ್ತು. ಅರ್ಧಶತಕ ಸಿಡಿಸಿ ದೇವದತ್ ಪಡಿಕ್ಕಲ್ ಹಾಗೂ 11 ರನ್ನೊಂದಿಗೆ ಮನೀಶ್ ಪಾಂಡೆ ಕ್ರೀಸ್ನಲ್ಲಿದ್ದರು. ಇಂದು 4ನೇ ದಿನದಾಟ ಆರಂಭಿಸಿದ ಕರ್ನಾಟಕ ಪರ ಮನೀಶ್ ಪಾಂಡೆ ಕೇವಲ 1 ರನ್ ಕಲೆಹಾಕಿ 12 ರನ್ಗೆ ನಿರ್ಗಮಿಸಿ ಶಾಕ್ ನೀಡಿದರು.
ಇದರ ಬೆನ್ನಲ್ಲೆ ಕೃಷ್ಣಮೂರ್ತಿ ಸಿದ್ಧಾರ್ಥ್ ಹಾಗೂ ಶ್ರೀನಿವಾಸ್ ಶರತ್ ಶೂನ್ಯಕ್ಕೆ ಔಟ್ ಆಗಿದ್ದು, ತಂಡ ಸೋಲಿನ ಸುಳಿಗೆ ಸಿಲುಕಿತು. ಬೆಂಗಾಲ್ ಪರ ಮುಖೇಶ್ ಕುಮಾರ್ 4 ವಿಕೆಟ್ ಕಿತ್ತು ಮಾರಕ ದಾಳಿ ಸಂಘಟಿಸುತ್ತಿದ್ದಾರೆ. ಕರ್ನಾಟಕ ತಂಡಕ್ಕೆ ಅರ್ಧಶತಕ ಬಾರಿಸಿ ಪಡಿಕ್ಕಲ್ ಆಸರೆಯಾಗಿದ್ದು, ಗೆಲುವಿಗೆ ಇನ್ನೂ 200 ರನ್ಗೂ ಅಧಿಕ ರನ್ ಕಲೆಹಾಕಬೇಕಿದೆ.
IPL 2020: ಹಾವಿನ ದ್ವೇಷ 12 ವರುಷ...ಆರ್ಸಿಬಿಯಲ್ಲಿ ಸರ್ವ ಕನ್ನಡಮಯ
ಸಂಕ್ಷಿಪ್ತ ಸ್ಕೋರ್:
ಬೆಂಗಾಲ್ ಮೊದಲ ಇನ್ನಿಂಗ್ಸ್: 312/10 (92 ಓವರ್)
(ಅನುಸ್ತಪ್ ಮಜುಂದಾರ್ 149*, ಆಕಾಶ ದೀಪ್ 44, ರೋನಿತ್ ಮೊರೆ 52/3)
ಕರ್ನಾಟಕ ಮೊದಲ ಇನ್ನಿಂಗ್ಸ್: 122/10 (36.2 ಓವರ್)
(ಕೃಷ್ಣಪ್ಪ ಗೌತಮ್ 31, ಕೆ. ಎಲ್ ರಾಹುಲ್ 26, ಇಶಾನ್ ಪೋರೆಲ್ 39/5)
ಬೆಂಗಾಲ್ ಎರಡನೇ ಇನ್ನಿಂಗ್ಸ್: 161/10 (54.4 ಓವರ್)
(ಸುದಿಪ್ ಛಟರ್ಜಿ 45, ಅನುಸ್ತಪ್ ಮಜುಂದಾರ್ 41, ಅಭಿಮನ್ಯು ಮಿಥುನ್ 15/3)
First published:
March 3, 2020, 10:05 AM IST