ರಾಜ್ಕೋಟ್ (ಮಾ. 10): 2019-20ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬೆಂಗಾಲ್ ತಂಡದ ವಿರುದ್ಧ ಸೌರಾಷ್ಟ್ರ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ. ಅರ್ಪಿತ್ ವಾಸವಾಡ ಶತಕ ಸಿಡಿಸಿ ಹಾಗೂ ಚೇತೇಶ್ವರ್ ಪೂಜಾರ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ.
ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಿನ್ನೆ ಆರಂಭವಾಗಿರುವ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರ ತಂಡ ಬ್ಯಾಟಿಂಗ್ಗೆ ಇಳಿಯಿತು. ಓಪನರ್ಗಳಾದ ಹರ್ವಿಕ್ ದೇಸಾಯ್ ಹಾಗೂ ಅವಿ ಬರೂತ್ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್ಗೆ ಈ ಜೋಡಿ 82 ರನ್ಗಳ ಕಾಣಿಕೆ ನೀಡಿತು.
IND vs SA: ಮೊದಲ ಪಂದ್ಯಕ್ಕೆ ಟೀಂ ಇಂಡಿಯಾ ಆಡುವ ಬಳಗ ಹೇಗಿರಲಿದೆ?; ಇಲ್ಲಿದೆ ಸಂಭಾವ್ಯ ಪಟ್ಟಿ!
ಹರ್ವಿಕ್ 111 ಎಸೆತಗಳಲ್ಲಿ 38 ರನ್ ಗಳಿಸಿ ಔಟ್ ಆದರೆ, ಬರೂತ್ 142 ಎಸೆತಗಳಲ್ಲಿ 54 ರನ್ಗೆ ನಿರ್ಗಮಿಸಿದರು. ವಿಶ್ವರಾಜ್ ಜಡೇಜಾ ಬಿರುಸಿನ ಬ್ಯಾಟಿಂಗ್ ನಡೆಸಿ ಇವರೂ 54 ರನ್ಗೆ ಔಟ್ ಆದರು. ಶೆಲ್ಡನ್ ಜಾಕ್ಸನ್ ಬಂದ ಬೆನ್ನಲ್ಲೆ 14 ರನ್ಗೆ ಬ್ಯಾಟ್ ಕೆಳಗಿಟ್ಟರೆ, ಚೇತನ್ ಸಕರಿಯಾ ಕೂಡ 4 ರನ್ಗೆ ಸುಸ್ತಾದರು.
5⃣0⃣: Cheteshwar Pujara overcomes illness as he brings up his fifty in the @paytm #RanjiTrophy #Final against Bengal. 👏👏
Follow the #SAUvBEN game live 👉 https://t.co/LPb46JOjje@cheteshwar1 pic.twitter.com/F2Uo21IUbi
— BCCI Domestic (@BCCIdomestic) March 10, 2020
IND vs SA: ಭಾರತಕ್ಕೆ ಬಂದಿಳಿದ ಹರಿಣಗಳು; ಮೊದಲ ಏಕದಿನ ಪಂದ್ಯ ಎಲ್ಲಿ?, ಯಾವಾಗ?, ಎಷ್ಟು ಗಂಟೆಗೆ?
ಈಗಾಗಲೇ ಈ ಜೋಡಿ ಶತಕದ ಜೊತೆಯಾಟ ಆಡಿ ಮುನ್ನುಗ್ಗುತ್ತಿದೆ. ಅದರಲ್ಲು ಅರ್ಪಿತ್ ಶತಕ ಸಿಡಿಸಿ ಹಾಗೂ ಪೂಜಾರ ಅರ್ಧಶತಕ ಬಾರಿಸಿ ತಂಡದ ರನ್ ಗತಿಯನ್ನು ಏರಿಸುತ್ತಿದ್ದಾರೆ. ಸೌರಾಷ್ಟ್ರ ತಂಡದ ಮೊತ್ತ ಈಗಾಗಲೇ 350ರ ಗಡಿ ದಾಟಿದೆ.
💯 in the semifinal ✅
💯 in the final ✅
Aarpit Vasavada completes a fine hundred as Saurashtra near 340 against Bengal in the @paytm #RanjiTrophy #Final. 👏👏
Follow the #SAUvBEN game live 👉 https://t.co/LPb46JOjje @saucricket pic.twitter.com/DLhZeQbNAR
— BCCI Domestic (@BCCIdomestic) March 10, 2020
ಕೆಲ್ಸ, ಹುಡುಗಿ ಸಿಗ್ಲಿ ಅಂತ ಕೇಳಿಲ್ಲ; RCB ಕಪ್ ಮಾತ್ರ ಗೆಲ್ಲಲೇ ಬೇಕು ಎಂದು ತಾಯಿ ಚಾಮುಂಡೇಶ್ವರಿಗೆ ಪೂಜೆ!
ಸೌರಾಷ್ಟ್ರ ತಂಡ ಸತತ 2ನೇ ಬಾರಿ ಫೈನಲ್ ಪಂದ್ಯ ಆಡುತ್ತಿದೆ. ಇನ್ನೊಂದೆಡೆ ಬೆಂಗಾಲ್ 13 ವರ್ಷಗಳ ಬಳಿಕ ಪ್ರಶಸ್ತಿ ಸುತ್ತಿಗೆ ನೆಗೆದಿದ್ದು, ಇತಿಹಾಸ ನಿರ್ಮಿಸುವ ತವಕದಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ