• Home
 • »
 • News
 • »
 • sports
 • »
 • Ranji Trophy Final: ಬಂಗಾಳದ ಹಾದಿ ಜೀವಂತ; ಕುತೂಹಲದತ್ತ ರಣಣಿ ಫೈನಲ್ ಕದನ

Ranji Trophy Final: ಬಂಗಾಳದ ಹಾದಿ ಜೀವಂತ; ಕುತೂಹಲದತ್ತ ರಣಣಿ ಫೈನಲ್ ಕದನ

ಅನುಸ್ತುಪ್ ಮಜುಂದರ್.

ಅನುಸ್ತುಪ್ ಮಜುಂದರ್.

ಈಗಾಗಲೇ ನಾಲ್ಕು ದಿನಗಳು ಮುಕ್ತಾಯಗೊಂಡಿದ್ದು, ಪಂದ್ಯ ಬಹುತೇಕ ಡ್ರಾನಲ್ಲಿ ಅಂತ್ಯವಾಗುವುದು ಖಚಿತ. ಆದರೆ, ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ ತಂಡ ರಣಜಿ ಟ್ರೋಫಿ ಚಾಂಪಿಯನ್‌ ಆಗಲಿದೆ.

 • Share this:

  ರಾಜ್​ಕೋಟ್ (ಮಾ. 13): 2019-20ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಫೈನಲ್ ಪಂದ್ಯ ಕುತೂಹಲದತ್ತ ಸಾಗುತ್ತಿದೆ. ಫೈನಲ್ ಕದನದಲ್ಲೂ ಬೆಂಗಾಲ್ ತಂಡಕ್ಕೆ ಅನುಸ್ತುಪ್ ಮಜುಂದರ್ ಆಸರೆಯಾಗಿ ನಿಂತಿದ್ದು, ಮೊದಲ ಇನ್ನಿಂಗ್ಸ್​ ಮುನ್ನಡೆ ಗಳಿಸುವತ್ತ ಚಿತ್ತ ನೆಟ್ಟಿದೆ.


  ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌರಾಷ್ಟ್ರ ಅರ್ಪಿತ್ ವಾಸವಾಡ ಅವರ(106) ಅವರ ಶತಕ, ಚೇತೇಶ್ವರ್ ಪೂಜಾರ(66), ಅವಿ ಬರೂತ್(54) ಹಾಗೂ ವಿಶ್ವರಾಜ್ ಜಡೇಜಾ(54) ಅವರ ಅರ್ಧಶತಕದ ನೆರವಿನಿಂದ ಬರೋಬ್ಬರಿ 425 ರನ್ ಗಳಿಸಿತ್ತು.  ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಬೆಂಗಾಲ್ ತಂಡ ಆರಂಭದಲ್ಲೇ ಸುದಿಪ್ ಕುಮಾರ್(26) ಹಾಗೂ ನಾಯಕ ಅಭಿಮನ್ಯು ಈಶ್ವರನ್(9) ವಿಕೆಟ್ ಕಳೆದುಕೊಂಡಿತು. ಆದರೆ, ಸುದಿಪ್ ಚಟರ್ಜಿ ಹಾಗೂ ಮನೋಜ್ ತಿವಾರಿ ತಂಡಕ್ಕೆ ಆಸರೆಯಾಗಿ ನಿಂತರು.


  India vs South Africa: ಮುಂದಿನ ಎರಡೂ ಏಕದಿನ ಪಂದ್ಯ ನಿಗದಿಯಂತೆ ನಡೆಯಲಿದೆ; ಆದರೆ...


  ಸುದಿಪರ್ ಅವರು ತಿವಾರಿ(35) ಜೊತೆಗೂಡಿ 89 ರನ್​ಗಳ ಜೊತೆಯಾಟ ಆಡಿದರೆ ನಂತರ ಬಂದ ವೃದ್ದಿ ಮಾನ್ ಸಾಹ ಜೊತೆಗೂ ಶತಕದ ಕಾಣಿಕೆ ನೀಡಿದರು. ಸುದಿಪ್ 241 ಎಸೆತಗಳಲ್ಲಿ 81 ರನ್ ಗಳಿಸಿ ಔಟ್ ಆದರೆ, ಸಾಹ 184 ಎಸೆತಗಳಲ್ಲಿ 64 ರನ್ ಬಾರಿಸಿದರು. ಶಕಹ್ಬಾಜ್ ಅಹ್ಮದ್ ಬಂದ ಬೆನ್ನಲ್ಲೆ 16 ರನ್​ಗೆ ನಿರ್ಗಮಿಸಿದರು.


  ಬಳಿಕ ಅನುಸ್ತುಪ್ ಮಜುಂದರ್ ಹಾಗೂ ಅರ್ನಬ್ ನಂದಿ ಜೊತೆಗೂಡಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿ ತಂಡಕ್ಕೆ ಆಸರೆಯಾಗಿ ನಿಂತಿದ್ದಾರೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ಬೆಂಗಾಲ್ ತಂಡ 6 ವಿಕೆಟ್ ನಷ್ಟಕ್ಕೆ 354 ರನ್ ಗಳಿಸಿದೆ. 71 ರನ್​ಗಳ ಹಿನ್ನಡೆಯಲ್ಲಿದೆ. ಸೆಮಿಫೈನಲ್‌ನಲ್ಲಿ ಕರ್ನಾಟಕವನ್ನು ಕಾಡಿದ ಅನುಸ್ತೂಪ್‌ ಮಜುಂದರ್ 58 ಮತ್ತು ಅರ್ನಾಬ್‌ ನಂದಿ 28 ರನ್‌ ಮಾಡಿ ಇಂದು ಅಂತಿಮ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.


  IPL 2020: ಐಪಿಎಲ್ ನಡೆಸದಂತೆ ಬಿಸಿಸಿಐಗೆ ವಿದೇಶಾಂಗ ಇಲಾಖೆ ಸಲಹೆ; ಪ್ರೇಕ್ಷಕರಿಲ್ಲದೇ ನಡೆಯುತ್ತ ಪಂದ್ಯ?


  ಈಗಾಗಲೇ ನಾಲ್ಕು ದಿನಗಳು ಮುಕ್ತಾಯಗೊಂಡಿದ್ದು, ಪಂದ್ಯ ಬಹುತೇಕ ಡ್ರಾನಲ್ಲಿ ಅಂತ್ಯವಾಗುವುದು ಖಚಿತ. ಆದರೆ, ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ ತಂಡ ರಣಜಿ ಟ್ರೋಫಿ ಚಾಂಪಿಯನ್‌ ಆಗಲಿದೆ. ಈ ಹಿನ್ನೆಲೆಯಲ್ಲಿ ಅಂತಿಮ ದಿನವಾದ ಇಂದು ಉಭಯ ತಂಡಗಳು ಮುನ್ನಡೆಗಾಗಿ ಹೋರಾಟ ನಡೆಸಲಿವೆ.

  Published by:Vinay Bhat
  First published: