Ranji Trophy: ಅಸ್ಸಾಂನಲ್ಲಿ ಬಿಗುವಿನ ಪರಿಸ್ಥಿತಿ; ರಣಜಿ ಟ್ರೋಫಿ ಪಂದ್ಯಗಳು ರದ್ದು

ಅಸ್ಸಾಂ ಹಾಗೂ ತ್ರಿಪುರಾದಲ್ಲಿ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಯಾಗಿರುವುದರಿಂದ ರಣಜಿ ಟ್ರೋಫಿಯ ನಾಲ್ಕನೇ ದಿನದಾಟದ ಪಂದ್ಯಗಳನ್ನು ಸ್ಥಗಿತಗೊಳಿಸಲಾಗಿದೆ.

news18-kannada
Updated:December 12, 2019, 12:27 PM IST
Ranji Trophy: ಅಸ್ಸಾಂನಲ್ಲಿ ಬಿಗುವಿನ ಪರಿಸ್ಥಿತಿ; ರಣಜಿ ಟ್ರೋಫಿ ಪಂದ್ಯಗಳು ರದ್ದು
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಡಿ.12): ಪೌರತ್ವ ತಿದ್ದುಪಡಿ ಮಸೂದೆಗೆ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಅನುಮೋದನೆ ದೊರೆತಿದ್ದು, ಅಸ್ಸಾಂನಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಹೀಗಾಗಿ ಎಲ್ಲೆಡೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ಗುವಾಹಟಿ, ದಿಬ್ರುಗರ್​ನಲ್ಲಿ ಅನಿರ್ಧಿಷ್ಟಾವಧಿ ಕರ್ಫ್ಯೂ ಜಾರಿ ಮಾಡಲಾಗಿದೆ. ಅಸ್ಸಾಂನ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆ ನಿಯೋಜನೆ ಮಾಡಲಾಗಿದೆ. ಲಖಿನಗರ್​ ಭಾಗದಲ್ಲಿ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಮನೆ ಮೇಲೆ ಕಲ್ಲು ತೂರಾಟ ನಡೆದಿದೆ. ಬಿಜೆಪಿ ಶಾಸಕ ಪ್ರಶಾಂತ್​ ಫುಕನ್​ ಹಾಗೂ ಬಿಜೆಪಿ ನಾಯಕ ಶುಭಾಶ್​ ದತ್ತ ಅವರ ಮನೆಯನ್ನು ಧ್ವಂಸ ಮಾಡಲಾಗಿದೆ.

Happy Birthday Yuvraj Singh: 38ನೇ ವಸಂತಕ್ಕೆ ಕಾಲಿಟ್ಟ ಯುವರಾಜ; ಸಿಕ್ಸರ್ ಕಿಂಗ್​ನ ಅಪರೂಪದ ಚಿತ್ರಪಟಗಳು ಇಲ್ಲಿದೆ!

ಮುಂಜಾಗೃತ ಕ್ರಮವಾಗಿ ಅಸ್ಸಾಂನ 10 ಜಿಲ್ಲೆಗಳಲ್ಲಿ ಇಂಟರ್​ನೆಟ್​ ಸೇವೆಯನ್ನು ರದ್ದುಗೊಳಿಸಲಾಗಿದೆ. ಪರಿಸ್ಥಿತಿ ಶಾಂತಗೊಂಡ ನಂತರ ಇಂಟರ್​ನೆಟ್​ ಸೇವೆಯನ್ನು ಪುನರಾರಂಭ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ಅಸ್ಸಾಂ ಹಾಗೂ ತ್ರಿಪುರಾದಲ್ಲಿ ತೀವ್ರ ಪ್ರತಿಭಟನೆ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಯಾಗಿರುವುದರಿಂದ ರಣಜಿ ಟ್ರೋಫಿಯ ನಾಲ್ಕನೇ ದಿನದಾಟದ ಪಂದ್ಯಗಳನ್ನು ಸ್ಥಗಿತಗೊಳಿಸಲಾಗಿದೆ.

ಅಸ್ಸಾಂ ಹಾಗೂ ಸರ್ವಿಸಸ್ ಸ್ಫೋರ್ಟ್ಸ್ಕಂಟ್ರೋಲ್ ಬೋರ್ಡ್ ಮತ್ತು ತ್ರಿಪುರಾ- ಜಾರ್ಖಂಡ್ ನಡುವೆ ಪಂದ್ಯ ನಡೆಯಬೇಕಿತ್ತು. ಆದರೆ, ಪಂದ್ಯಕ್ಕೆ ಹೋಗದಂತೆ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅದೇಶಿಸಿದೆ. ಸುರಕ್ಷತೆ ಹಿನ್ನಲೆಯಲ್ಲಿ ಆಟಗಾರರನ್ನು ಹೋಟೆಲ್​ನಲ್ಲಿಯೇ ಇರುವಂತೆ ತಿಳಿಸಲಾಗಿದೆ.

IND vs WI: ಭಾರತ vs ವೆಸ್ಟ್​ ಇಂಡೀಸ್ ಮೂರನೇ ಟಿ-20 ಪಂದ್ಯದ ಕೆಲ ರೋಚಕ ಕ್ಷಣಗಳು!ಭಾರೀ ವಿವಾದ ಸೃಷ್ಟಿಸಿರುವ ಪೌರತ್ವ ತಿದ್ದುಪಡಿ ಮಸೂದೆ ಬುಧವಾರ ರಾಜ್ಯಸಭೆಯಲ್ಲಿ ಎಂಟು ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ಅನುಮೋದನೆ ಪಡೆದುಕೊಂಡಿತ್ತು. ವಿರೋಧ ಪಕ್ಷಗಳ ವಿರೋಧದ ನಡುವೆಯೂ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕರಿಸಿದ ರಾಜ್ಯಸಭೆ, ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಿಕೊಟ್ಟಿತ್ತು. ಮಸೂದೆಯ ಪರವಾಗಿ 125 ಸದಸ್ಯರು ಮತ ಹಾಕಿದರೆ, ಮಸೂದೆ ವಿರುದ್ಧವಾಗಿ 105 ಮತಗಳು ಚಲಾವಣೆಯಾಗಿದ್ದವು.

First published:December 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ