Ranji Trophy: ಪೃಥ್ವಿ ಶಾ ದ್ವಿಶತಕ; ಮುಂಬೈ ಭರ್ಜರಿ ಮೊತ್ತ; ಸಂಕಷ್ಟದಲ್ಲಿ ಕರ್ನಾಟಕ!

29 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿರುವ ರಾಜ್ಯ ತಂಡ ಸಂಕಷ್ಟಕ್ಕೆ ಸಿಲುಕಿದೆ. 3ನೇ ದಿನಾಟದ ಅಂತ್ಯಕ್ಕೆ ಕರ್ನಾಟಕ 89 ರನ್​ಗೆ ತನ್ನ 5 ವಿಕೆಟ್ ಕಳೆದುಕೊಂಡಿದೆ.

Vinay Bhat | news18-kannada
Updated:December 11, 2019, 7:34 PM IST
Ranji Trophy: ಪೃಥ್ವಿ ಶಾ ದ್ವಿಶತಕ; ಮುಂಬೈ ಭರ್ಜರಿ ಮೊತ್ತ; ಸಂಕಷ್ಟದಲ್ಲಿ ಕರ್ನಾಟಕ!
ಪೃಥ್ವಿ ಶಾ
  • Share this:
ವಡೋದರಾ/ದಿಂಡಿಗಲ್ (ಡಿ. 11): ತಮಿಳುನಾಡು ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಕರ್ನಾಟಕ ಮುನ್ನಡೆ ಸಾಧಿಸಿದೆಯಾದರೂ ಸಂಕಷ್ಟಕ್ಕೆ ಸಿಲುಕಿದೆ. ಇನ್ನೊಂದು ಪಂದ್ಯದಲ್ಲಿ ಮುಂಬೈ ತಂಡ ಬರೋಡ ವಿರುದ್ಧ ಬೃಹತ್ ಮೊತ್ತ ಕಲೆಹಾಕಿದ್ದು, ಪೃಥ್ವಿ ಶಾ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

ತಮಿಳುನಾಡು ವಿರುದ್ಧ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ದೇವದತ್ ಪಡಿಕ್ಕಲ್ ಅವರ 78, ಪವನ್ ದೇಶಪಾಂಡೆ 65 ಹಾಗೂ ಕೃಷ್ಟಪ್ಪ ಗೌತಮ್ 51 ರನ್​ಗಳ ನೆರವಿನಿಂದ 110.4 ಓವರ್​ನಲ್ಲಿ 336 ರನ್​ಗೆ ಆಲೌಟ್ ಆಯಿತು.

ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ತಮಿಳುನಾಡು ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಕ್ರೀಸ್​ ಕಚ್ಚಿ ಆಡುವಲ್ಲಿ ವಿಫಲವಾದ ಬ್ಯಾಟ್ಸ್​ಮನ್​ಗಳು ಕೃಷ್ಣಪ್ಪ ಗೌತಮ್ ಬೌಲಿಂಗ್ ದಾಳಿಗೆ ನಲುಗಿ ಹೋದರು. ತಮಿಳುನಾಡು ಪರ ದಿನೇಶ್ ಕಾರ್ತಿಕ್ 235 ಎಸೆತಗಳಲ್ಲಿ 16 ಬೌಂಡರಿ ಬಾರಿಸಿ 113 ರನ್ ಕಲೆಹಾಕಿದರು. ತಮಿಳುನಾಡು 307 ರನ್​ಗೆ ಸರ್ವಪತನ ಕಂಡಿತು.

ಕೊಹ್ಲಿ-ಅನುಷ್ಕಾ ಎರಡನೇ ವಿವಾಹ ವಾರ್ಷಿಕೋತ್ಸವ: ವಿರುಷ್ಕಾ ಲವ್​​ ಸ್ಟೋರಿ ಬಗ್ಗೆ ನಿಮಗೆಷ್ಟು ಗೊತ್ತು?

ಕರ್ನಾಟಕ ಪರ ಕೃಷ್ಣಪ್ಪ ಗೌತಮ್ 6 ವಿಕೆಟ್ ಕಿತ್ತರೆ, ರೋನಿತ್ ಮೋರೆ 2, ವಿ ಕೌಶಿಕ್ ಹಾಗೂ ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು.

29 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿರುವ ರಾಜ್ಯ ತಂಡ ಸಂಕಷ್ಟಕ್ಕೆ ಸಿಲುಕಿದೆ. 3ನೇ ದಿನಾಟದ ಅಂತ್ಯಕ್ಕೆ ಕರ್ನಾಟಕ 89 ರನ್​ಗೆ ತನ್ನ 5 ವಿಕೆಟ್ ಕಳೆದುಕೊಂಡಿದೆ. 118 ರನ್​ಗಳ ಮುನ್ನಡೆ ಸಾಧಿಸಿದೆಷ್ಟೆ. ದೇವದತ್ ಪಡಿಕ್ಕಲ್ 29 ಹಾಗೂ ಶರತ್ ಬಿಆರ್ 25 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇನ್ನು ಮತ್ತೊಂದು ಪಂದ್ಯದಲ್ಲಿ ಬರೋಡ ವಿರುದ್ಧ ಮುಂಬೈ ತಂಡ ಬೃಹತ್ ಮೊತ್ತ ಪೇರಿಸಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಮುಂಬೈ ಪೃಥ್ವಿ ಶಾ, ಅಜಿಂಕ್ಯ ರಹಾನೆ, ಶಮ್ಸ್ ಮುಲಾನಿ ಹಾಗೂ ಶಾರ್ದೂಲ್ ಠಾಕೂರ್ ಅವರ ಅರ್ಧಶತಕದ ನೆರವಿನಿಂದ 431 ರನ್ ಕಲೆಹಾಕಿತ್ತು. ಬಳಿಕ ಬರೋಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಕೇದರ್ ದೇವ್ದರ್ ಅವರ ಶತಕದ ಫಲದಿಂದ  307 ರನ್ ಬಾರಿಸಿತು.124 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ಮುಂಬೈ ಅಮೋಘ ಆಟ ಪ್ರದರ್ಶಿಸಿತು. ಅದರಲ್ಲೂ ಪೃಥ್ವಿ ಶಾ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 179 ಎಸೆತಗಳಲ್ಲಿ 19 ಬೌಂಡರಿ, 7 ಸಿಕ್ಸರ್ ಸಿಡಿಸಿ 202 ರನ್ ಕಲೆಹಾಕಿದರು. ಇದು ದೇಶೀಯ ಕ್ರಿಕೆಟ್​ನಲ್ಲಿ ಶಾ ಸಿಡಿಸಿದ ವೇಗದ ದ್ವಿಶತಕವಾಗಿದೆ.

ವಿಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಧವನ್ ಔಟ್; ಮಯಾಂಕ್​ಗೆ ಸ್ಥಾನ!

ಇವರ ಜೊತೆಗೆ ಸೂರ್ಯಕುಮಾರ್ ಯಾದವ್ ಅಜೇಯ 102 ರನ್ ಗಳಿಸಿದರು. ಮುಂಬೈ 4 ವಿಕೆಟ್ ಕಳೆದುಕೊಂಡು 409 ರನ್​ಗೆ ಡಿಕ್ಲೇರ್ ಘೋಷಿಸಿತು. ಸದ್ಯ ತನ್ನ 2ನೇ ಇನ್ನಿಂಗ್ಸ್​ ಆರಂಭಿಸಿರುವ ಬರೋಡ 3ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 74 ರನ್ ಕಲೆಹಾಕಿದೆ. 460 ರನ್​ಗಳ ಹಿನ್ನಡೆಯಲ್ಲಿದೆ.

First published:December 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading