Ranji Trophy: ಮಿಂಚಿದ ಗೌತಮ್; ಮೊದಲ ಇನ್ನಿಂಗ್ಸ್​ನಲ್ಲಿ ತಮಿಳುನಾಡು 307ಕ್ಕೆ ಆಲೌಟ್

ತಮಿಳುನಾಡು ಪರ ದಿನೇಶ್ ಕಾರ್ತಿಕ್ ಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸಿದ್ದು ಬಿಟ್ಟರೆ, ಅಭಿಮನವ್ ಮುಕುಂದ್ 47 ರನ್ ಗಳಿಸಿದ್ದೇ ಹೆಚ್ಚು. ತಮಿಳುನಾಡು 307 ರನ್​ಗೆ ಸರ್ವಪತನ ಕಂಡಿತು.

Vinay Bhat | news18-kannada
Updated:December 11, 2019, 3:04 PM IST
Ranji Trophy: ಮಿಂಚಿದ ಗೌತಮ್; ಮೊದಲ ಇನ್ನಿಂಗ್ಸ್​ನಲ್ಲಿ ತಮಿಳುನಾಡು 307ಕ್ಕೆ ಆಲೌಟ್
ಕೃಷ್ಣಪ್ಪ ಗೌತಮ್
  • Share this:
ದಿಂಡಿಗಲ್: ಇಲ್ಲಿನ ಎನ್​​ಪಿಆರ್​ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಕರ್ನಾಟಕ ಹಾಗೂ ತಮಿಳುನಾಡು ನಡುವಣ ರಣಜಿ ಪಂದ್ಯ ಕುತೂಹಲದತ್ತ ದಾಪುಗಾಲಿಡುತ್ತಿದೆ. ತಮಿಳುನಾಡು ತಂಡವನ್ನು 307 ರನ್​ಗೆ ಆಲೌಟ್ ಮಾಡಿ 29 ರನ್​ಗಳ ಮುನ್ನಡೆಯೊಂದಿಗೆ ಕರ್ನಾಟಕ 2ನೇ ಇನ್ನಿಂಗ್ಸ್​ ಆರಂಭಿಸಿದ್ದು, ಉತ್ತಮ ಬ್ಯಾಟಿಂಗ್ ಪ್ರದರ್ಶಿಸುತ್ತಿದೆ.

ಮೊದಲು ಬ್ಯಾಟ್ ಮಾಡಿದ ಕರ್ನಾಟಕ ದೇವದತ್ ಪಡಿಕ್ಕಲ್ ಅವರ 78, ಪವನ್ ದೇಶಪಾಂಡೆ 65 ಹಾಗೂ ಕೃಷ್ಟಪ್ಪ ಗೌತಮ್ 51 ರನ್​ಗಳ ನೆರವಿನಿಂದ 110.4 ಓವರ್​ನಲ್ಲಿ 336 ರನ್​ಗೆ ಆಲೌಟ್ ಆಯಿತು. ತಮಿಳುನಾಡು ಪರ ಆರ್. ಅಶ್ವಿನ್ 4 ವಿಕೆಟ್ ಕಿತ್ತರೆ, ವಿಗ್ನೇಶ್ ಹಾಗೂ ಸಿದ್ಧಾರ್ಥ್​ ತಲಾ 2 ವಿಕೆಟ್ ಪಡೆದರು.

ವಿಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ಧವನ್ ಔಟ್; ಮಯಾಂಕ್​ಗೆ ಸ್ಥಾನ!

ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ತಮಿಳುನಾಡು ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಕ್ರೀಸ್​ ಕಚ್ಚಿ ಆಡುವಲ್ಲಿ ವಿಫಲವಾದ ಬ್ಯಾಟ್ಸ್​ಮನ್​ಗಳು ಕೃಷ್ಣಪ್ಪ ಗೌತಮ್ ಬೌಲಿಂಗ್ ದಾಳಿಗೆ ನಲುಗಿ ಹೋದರು.

 



ತಮಿಳುನಾಡು ಪರ ದಿನೇಶ್ ಕಾರ್ತಿಕ್ ಶತಕ ಸಿಡಿಸಿ ಏಕಾಂಗಿ ಹೋರಾಟ ನಡೆಸಿದ್ದು ಬಿಟ್ಟರೆ, ಅಭಿಮನವ್ ಮುಕುಂದ್ 47 ರನ್ ಗಳಿಸಿದ್ದೇ ಹೆಚ್ಚು. ತಮಿಳುನಾಡು 307 ರನ್​ಗೆ ಸರ್ವಪತನ ಕಂಡಿತು. ಕಾರ್ತಿಕ್ 235 ಎಸೆತಗಳಲ್ಲಿ 16 ಬೌಂಡರಿ ಬಾರಿಸಿ 113 ರನ್ ಕಲೆಹಾಕಿದರು.

India vs West Indies: ಟಿ20 ಕದನ ಕುತೂಹಲ: ಇಂದು ಭಾರತ-ವಿಂಡೀಸ್ ನಡುವೆ ಫೈನಲ್ ಫೈಟ್

ಕರ್ನಾಟಕ ಪರ ಕೃಷ್ಣಪ್ಪ ಗೌತಮ್ 6 ವಿಕೆಟ್ ಕಿತ್ತರೆ, ರೋನಿತ್ ಮೋರೆ 2, ವಿ ಕೌಶಿಕ್ ಹಾಗೂ ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು. ಸದ್ಯ 29 ರನ್​ಗಳ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿರುವ ರಾಜ್ಯ ತಂಡ ದೊಡ್ಡ ಮೊತ್ತ ಕಲೆಹಾಕುವತ್ತ ಚಿತ್ತ ನೆಟ್ಟಿದೆ.

First published:December 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ