Ranji Trophy: ಸೋಲಿನ ಸುಳಿಯಿಂದ ಪಾರಾದ ಶ್ರೇಯಸ್ ಪಡೆ; ಕರ್ನಾಟಕ-ಸೌರಾಷ್ಟ್ರ ಪಂದ್ಯ ಡ್ರಾ

ಎಲ್ಲೂ ವಿಕೆಟ್​ ಕಳೆದುಕೊಳ್ಳದಂತೆ ತಾಳ್ಮೆಯ ಆಟವಾಡಿದ ಕರ್ನಾಟಕ ಬ್ಯಾಟ್ಸ್​ಮನ್​ಗಳು ಅಂತಿಮವಾಗಿ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾದರು.

Vinay Bhat | news18-kannada
Updated:January 14, 2020, 6:15 PM IST
Ranji Trophy: ಸೋಲಿನ ಸುಳಿಯಿಂದ ಪಾರಾದ ಶ್ರೇಯಸ್ ಪಡೆ; ಕರ್ನಾಟಕ-ಸೌರಾಷ್ಟ್ರ ಪಂದ್ಯ ಡ್ರಾ
ದೇವದತ್ ಪಡಿಕ್ಕಲ್
  • Share this:
ಬೆಂಗಳೂರು (ಜ. 14): ಈ ಬಾರಿಯ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ ತನ್ನ ಐದನೇ ಪಂದ್ಯದಲ್ಲಿ ಸೋಲಿನ ದವಡೆಯಿಂದ ಪಾರಾಗಿದೆ. ಸೌರಾಷ್ಟ್ರ ವಿರುದ್ಧದ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾಗಿರುವ ಶ್ರೇಯಸ್ ಗೋಪಾಲ್ ಪಡೆ 1 ಅಂಕ ತನ್ನದಾಗಿಸಿದೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌರಾಷ್ಟ್ರ ಚೇತೇಶ್ವರ್ ಪೂಜಾರ ಅವರ ಅಮೋಘ 248 ರನ್, ಶೆಲ್ಡನ್ ಜಾಕ್ಸನ್ ಅವರ 161 ಹಾಗೂ ಪ್ರೇರಕ್ ಮಂಖಡ್ ಅವರ ಅಜೇಯ 86 ರನ್​ಗಳ ನೆರವಿನಿಂದ ಬರೋಬ್ಬರಿ 581 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು.

ಈ ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್​ನಲ್ಲಿ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ರಾಜ್ಯ ತಂಡದ ಪರ ರವಿಕುಮಾರ್ ಸಮರ್ಥ್​ 63 ಹಾಗೂ ಪ್ರವೀನ್ ದುಬೆ ಅಜೇಯ 46 ರನ್ ಗಳಿಸಿದರಷ್ಟೆ. ಕರ್ನಾಟಕ ಜಯದೇವ್ ಉನಾದ್ಕಟ್ (5 ವಿಕೆಟ್) ಬೌಲಿಂಗ್ ದಾಳಿಗೆ ತತ್ತರಿಸಿ 171 ರನ್​ಗೆ ಆಲೌಟ್ ಆಯಿತು.



India vs Australia Live: ಧವನ್-ರಾಹುಲ್ ಶತಕದ ಜೊತೆಯಾಟ; ಭಾರತ 255ಕ್ಕೆ ಆಲೌಟ್

ಈ ಮೂಲಕ ಕರ್ನಾಟಕ 410 ರನ್​ಗಳ ಭಾರೀ ಮೊದಲ ಇನ್ನಿಂಗ್ಸ್ ಹಿನ್ನಡೆ ಕಂಡಿತು. ಸೌರಾಷ್ಟ್ರ ಫಾಲೋ ಆನ್ ಹೇರಿದ್ದರಿಂದ ಬೃಹತ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ನಿನ್ನೆ ಮೂರನೇ ದಿನದಾಟದ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೇ 30 ರನ್ ಗಳಿಸಿತ್ತು. ಹೀಗಾಗಿ ಕೊನೆಯ ದಿನದಾಟ ಸಾಕಷ್ಟು ರೋಚಕತೆ ಸೃಷ್ಟಿಸಿತ್ತು.

ಪಂದ್ಯವನ್ನು ಕನಿಷ್ಠ ಡ್ರಾ ಮಾಡುವತ್ತ ರಾಜ್ಯ ತಂಡ ನೆನೆಸಿದ್ದರೆ, ಸೌರಾಷ್ಟ್ರ ಗೆಲ್ಲುವ ವಿಶ್ವಾಸದಲ್ಲಿತ್ತು. ಅದರಂತೆ ಇಂದು ಅಂತಿಮ ದಿನದಾಟದ ಆರಂಭಿಸಿದ ಕರ್ನಾಟಕ ಓಪನರ್​ಗಳಾದ ರೋಹನ್ ಕದಮ್ ಹಾಗೂ ರವಿಕುಮಾರ್ ಸಮರ್ಥ್​​ ವಿಕೆಟ್ ಕಳೆದುಕೊಳ್ಳದಂತೆ ಕೆಲ ಸಮಯ ಆಡಿದರು. 96 ರನ್​ಗಳ ಜೊತೆಯಾಟ ಇವರಿಂದ ಮೂಡಿಬಂತು.

ಕದಮ್ 132 ಎಸೆತಗಳಲ್ಲಿ 42 ರನ್ ಗಳಿಸಿದರೆ, ಸಮರ್ಥ್​ 159 ಎಸೆತಗಳಲ್ಲಿ 74 ರನ್ ಕಲೆಹಾಕಿದರು. ಎಲ್ಲೂ ವಿಕೆಟ್​ ಕಳೆದುಕೊಳ್ಳದಂತೆ ತಾಳ್ಮೆಯ ಆಟವಾಡಿದ ಕರ್ನಾಟಕ ಬ್ಯಾಟ್ಸ್​ಮನ್​ಗಳು ಅಂತಿಮವಾಗಿ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾದರು. ದೇವದತ್ ಪಡಿಕ್ಕಲ್ 133 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿದರು. ಕರ್ನಾಟಕ 89 ಓವರ್​ನಲ್ಲಿ 4 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತು.

ಟೀಂ ಇಂಡಿಯಾಕ್ಕೆ ಸ್ಯಾಮ್ಸನ್​ಗಿಂತ ರಿಷಭ್ ಪಂತ್ ಅಗತ್ಯವೇ ಹೆಚ್ಚು; ಯಾಕೆ?, ಈ ಸ್ಟೋರಿ ಓದಿ!

ಚೇತೇಶ್ವರ್ ಪೂಜಾರ ಪಂದ್ಯಶ್ರೇಷ್ಠ ತಮ್ಮದಾಗಿಸಿದರು. ಸೌರಾಷ್ಟ್ರ 3 ಅಂಕ ಬಾಜಿಕೊಂಡರೆ, ಕರ್ನಾಟಕ 1 ಅಂಕ ಸಂಪಾದಿಸಿತು. ಸದ್ಯ ಕರ್ನಾಟಕ ತಂಡ ಎಲೈಟ್ ಗ್ರೂಪ್ ಎ ಮತ್ತು ಬಿ ವಿಭಾಗದ ಅಂಕಪಟ್ಟಿಯಲ್ಲಿ 17 ಅಂಕದೊಂದಿಗೆ 4ನೇ ಸ್ಥಾನದಲ್ಲಿದೆ. ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಜನವರಿ 27 ರಂದು ರೈಲ್ವೇಸ್ ವಿರುದ್ಧ ಆಡಲಿದೆ.

Published by: Vinay Bhat
First published: January 14, 2020, 6:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading