• Home
  • »
  • News
  • »
  • sports
  • »
  • Ranji Trophy Final: ರಣಜಿ ಟ್ರೋಫಿ ಇತಿಹಾಸದಲ್ಲಿ ಚೊಚ್ಚಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡ ಸೌರಾಷ್ಟ್ರ!

Ranji Trophy Final: ರಣಜಿ ಟ್ರೋಫಿ ಇತಿಹಾಸದಲ್ಲಿ ಚೊಚ್ಚಲ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡ ಸೌರಾಷ್ಟ್ರ!

ಸೌರಾಷ್ಟ್ರ ಕ್ರಿಕೆಟ್ ತಂಡ.

ಸೌರಾಷ್ಟ್ರ ಕ್ರಿಕೆಟ್ ತಂಡ.

Saurashtra vs Bengal Final: ಇಂದು ಅಂತಿಮ ಐದನೇ ದಿನದಾಟ ಆರಂಭಿಸಿದ ಬೆಂಗಾಲ್ ಬೇಗನೆ ವಿಕೆಟ್ ಕಳೆದುಕೊಂಡಿತು. ಅನುಸ್ತುಪ್ 151 ಎಸೆತಗಳಲ್ಲಿ 63 ರನ್ ಗಳಿಸಿ ನಿರ್ಗಮಿಸಿದರೆ, ಬಳಿಕ ಬಂದ ಆಟಗಾರರು ಬಂದ ಬೆನ್ನಲ್ಲೆ ಪೆವಿಲಿಯನ್ ಸೇರಿಕೊಂಡರು.

  • Share this:

ರಾಜ್​ಕೋಡ್ (ಮಾ. 13): 2019-20ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಸೌರಾಷ್ಟ್ರ ತಂಡ ಪ್ರಶಸ್ತಿ ಗೆದ್ದು ಬೀಗಿದೆ. ಬೆಂಗಾಲ್ ವಿರುದ್ಧ ನಡೆದ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿತಾದರೂ ಮೊದಲ ಇನ್ನಿಂಗ್ಸ್​ನಲ್ಲಿ 44 ರನ್​ಗಳ ಮುನ್ನಡೆ ಸಾಧಿಸಿದ ಕಾರಣ ಸೌರಾಷ್ಟ್ರ ಜಯ ಶಾಲಿಯಾಗಿದೆ. ಈ ಮೂಲಕ ರಣಜಿ ಟ್ರೋಫಿ ಇತಿಹಾಸದಲ್ಲೇ 73 ವರ್ಷಗಳ ಬಳಿಕ ಸೌರಾಷ್ಟ್ರ ತಂಡ ಚೊಚ್ಚಲ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದೆ.


ರಣಜಿ ನಿಯಮದ ಪ್ರಕಾರ ಫೈನಲ್ ಪಂದ್ಯದಲ್ಲಿ ಪ್ರಥಮ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ ತಂಡ ರಣಜಿ ಟ್ರೋಫಿ ಚಾಂಪಿಯನ್‌ ಆಗಲಿದೆ.BREAKING NEWS | IPL 2020: ಐಪಿಎಲ್ 13ನೇ ಆವೃತ್ತಿ ಏಪ್ರಿಲ್ 15ಕ್ಕೆ ಮುಂದೂಡಿಕೆ


ಅಂತಿಮ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌರಾಷ್ಟ್ರ ಅರ್ಪಿತ್ ವಾಸವಾಡ ಅವರ(106) ಅವರ ಶತಕ, ಚೇತೇಶ್ವರ್ ಪೂಜಾರ(66), ಅವಿ ಬರೂತ್(54) ಹಾಗೂ ವಿಶ್ವರಾಜ್ ಜಡೇಜಾ(54) ಅವರ ಅರ್ಧಶತಕದ ನೆರವಿನಿಂದ ಬರೋಬ್ಬರಿ 425 ರನ್ ಗಳಿತು.


ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಬೆಂಗಾಲ್ ತಂಡ ಆರಂಭದಲ್ಲೇ ಸುದಿಪ್ ಕುಮಾರ್(26) ಹಾಗೂ ನಾಯಕ ಅಭಿಮನ್ಯು ಈಶ್ವರನ್(9) ವಿಕೆಟ್ ಕಳೆದುಕೊಂಡಿತು. ಆದರೆ, ಸುದಿಪ್ ಚಟರ್ಜಿ ಹಾಗೂ ಮನೋಜ್ ತಿವಾರಿ ತಂಡಕ್ಕೆ ಆಸರೆಯಾಗಿ ನಿಂತರು.


ಸುದಿಪರ್ ಅವರು ತಿವಾರಿ(35) ಜೊತೆಗೂಡಿ 89 ರನ್​ಗಳ ಜೊತೆಯಾಟ ಆಡಿದರೆ ನಂತರ ಬಂದ ವೃದ್ದಿ ಮಾನ್ ಸಾಹ ಜೊತೆಗೂ ಶತಕದ ಕಾಣಿಕೆ ನೀಡಿದರು. ಸುದಿಪ್ 241 ಎಸೆತಗಳಲ್ಲಿ 81 ರನ್ ಗಳಿಸಿ ಔಟ್ ಆದರೆ, ಸಾಹ 184 ಎಸೆತಗಳಲ್ಲಿ 64 ರನ್ ಬಾರಿಸಿದರು. ಶಕಹ್ಬಾಜ್ ಅಹ್ಮದ್ ಬಂದ ಬೆನ್ನಲ್ಲೆ 16 ರನ್​ಗೆ ನಿರ್ಗಮಿಸಿದರು.ಕೊರೋನಾ ಎಫೆಕ್ಟ್: ಅರ್ಧಕ್ಕೆ ಅಂತ್ಯಕಂಡ ಕ್ರಿಕೆಟ್ ಲೆಂಜೆಂಡ್ಸ್​ ಟೂರ್ನಿ; ರೋಡ್ ಸೇಫ್ಟಿ ಸಿರೀಸ್ ರದ್ದು!


ಬಳಿಕ ಅನುಸ್ತುಪ್ ಮಜುಂದರ್ ಹಾಗೂ ಅರ್ನಬ್ ನಂದಿ ಜೊತೆಗೂಡಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಿದರು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಬೆಂಗಾಲ್ ತಂಡ 6 ವಿಕೆಟ್ ನಷ್ಟಕ್ಕೆ 354 ರನ್ ಗಳಿಸಿತ್ತು.


ಇಂದು ಅಂತಿಮ ಐದನೇ ದಿನದಾಟ ಆರಂಭಿಸಿದ ಬೆಂಗಾಲ್ ಬೇಗನೆ ವಿಕೆಟ್ ಕಳೆದುಕೊಂಡಿತು. ಅನುಸ್ತುಪ್ 151 ಎಸೆತಗಳಲ್ಲಿ 63 ರನ್ ಗಳಿಸಿ ನಿರ್ಗಮಿಸಿದರೆ, ಬಳಿಕ ಬಂದ ಆಟಗಾರರು ಬಂದ ಬೆನ್ನಲ್ಲೆ ಪೆವಿಲಿಯನ್ ಸೇರಿಕೊಂಡರು. ಅರ್ನಬ್ ನಂದಿ 40 ರನ್ ಬಾರಿಸಿ ಅಜೇಯರಾಗಿ ಉಳಿದರು. ಬೆಂಗಾಲ್  161 ಓವರ್​ನಲ್ಲಿ 381 ರನ್​ಗೆ ಆಲೌಟ್ ಆಯಿತು.


44 ರನ್​ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಸೌರಾಷ್ಟ್ರ ಅಂತಿಮವಾಗಿ 34 ಓವರ್​ನಲ್ಲಿ 4 ವಿಕೆಟ್ ಕಳೆದುಕೊಂಡು 105 ರನ್ ಗಳಿಸಿರುವಾಗ ಪಂದ್ಯನ್ನು ಡ್ರಾ ಎಂದು ಘೋಷಿಸಲಾಯಿತು. ಮೊದಲ ಇನ್ನಿಂಗ್ಸ್​ ಮುನ್ನಡೆ ಆಧಾರದ ಮೇಲೆ ಸೌರಾಷ್ಟ್ರ 2019-20ನೇ ಸಾಲಿನ ರಣಜಿ ಟ್ರೋಫಿ ಗೆದ್ದುಬೀಗಿತು.

Published by:Vinay Bhat
First published: