Ranji Trophy 2019-20: ಬೌಲಿಂಗ್​ನಲ್ಲೂ ಕರ್ನಾಟಕದ ಮಿಂಚು; ಸಂಕಷ್ಟದಲ್ಲಿ ಮಧ್ಯಪ್ರದೇಶ

Karnataka vs Madhya Pradesh: ಕರ್ನಾಟಕ ತಂಡ ಅಂತಿಮವಾಗಿ 132 ಓವರ್​​​ನಲ್ಲಿ 426 ರನ್​ಗೆ ಆಲೌಟ್ ಆಯಿತು. 6 ಪಂದ್ಯಗಳಿಂದ 8 ಪಾಯಿಂಟ್ ಪಡೆದು ಅಂಕಪಟ್ಟಿಯಲ್ಲಿ ತಳದಲ್ಲಿರುವ ಮಧ್ಯ ಪ್ರದೇಶಕ್ಕೆ ಇದು ಮಾಡು ಇಲ್ಲ ಮಡಿ ಎಂಬಂತಿನ ಪಂದ್ಯವಾಗಿದೆ.

Vinay Bhat | news18-kannada
Updated:February 6, 2020, 12:49 PM IST
Ranji Trophy 2019-20: ಬೌಲಿಂಗ್​ನಲ್ಲೂ ಕರ್ನಾಟಕದ ಮಿಂಚು; ಸಂಕಷ್ಟದಲ್ಲಿ ಮಧ್ಯಪ್ರದೇಶ
ಕೃಷ್ಣಪ್ಪ ಗೌತಮ್
  • Share this:
ಶಿವಮೊಗ್ಗ (ಫೆ. 06): ರವಿಕುಮಾರ್ ಸಮರ್ಥ್ ಅಮೋಘ ಶತಕದ ಜೊತೆ ಕೃಷ್ಣಪ್ಪ ಗೌತಮ್ ಅವರ ಅರ್ಧಶತಕದ ನೆರವಿನಿಂದ ಕರ್ನಾಟಕ ಕ್ರಿಕೆಟ್ ತಂಡ ಮಧ್ಯಪ್ರದೇಶ ವಿರುದ್ಧದ ರಣಜಿ ಪಂದ್ಯದಲ್ಲಿ 426 ರನ್ ಬಾರಿಸಿತ್ತು. ಬಳಿಕ ತನ್ನ ಮೊದಲ ಇನ್ನಿಂಗ್ಸ್​ ಆರಂಭಿಸಿದ ಮಧ್ಯಪ್ರದೇಶ ಸದ್ಯ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಶಿವಮೊಗ್ಗದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ನಿನ್ನೆ ಮಧ್ಯಪ್ರದೇಶ ದಿನದಾಟದ ಮುಕ್ತಾಯಕ್ಕೆ 34 ಓವರ್‌ಗಳಲ್ಲಿ 2 ವಿಕೆಟ್‌ಗೆ 60 ರನ್‌ ಗಳಿಸಿತ್ತು. ಇಂದು ಮೂರನೇ ದಿನದಾಟದ ಆರಂಭದಲ್ಲೇ ಯಶ್ ದುಬೆ 45 ರನ್ ಗಳಿಸಿ ಶ್ರೇಯಸ್ ಗೋಪಾಲ್ ಬೌಲಿಂಗ್​ನಲ್ಲಿ ಔಟ್ ಆದರೆ, ನಾಯಕ ಶುಭಂ ಶರ್ಮಾ ಆಟ 25 ರನ್​ಗೆ ಅಂತ್ಯವಾಯಿತು.

 


India vs New Zealand: ಕೊಹ್ಲಿ ಪಡೆಗೆ ಮಾಡು ಇಲ್ಲವೇ ಮಡಿ ಪಂದ್ಯ; ಎರಡನೇ ಏಕದಿನ ಏಲ್ಲಿ?, ಯಾವಾಗ?

ಸದ್ಯ ಮಧ್ಯಪ್ರದೇಶನಕ್ಕೆ ಆದಿತ್ಯ ಶ್ರೀವಸ್ತವ್ ಹಾಗೂ ವೆಂಕಟೇಶ್ ಅಯ್ಯರ್ ಆಸರೆಯಾಗಿ ನಿಂತಿದ್ದಾರೆ. ಈಗಾಗಲೇ 4 ವಿಕೆಟ್ ಕಳೆದುಕೊಂಡು ಮಧ್ಯಪ್ರದೇಶ ತಂಡ ಸಂಕಷ್ಟಕ್ಕೆ ಸಿಲುಕಿದೆ. ಕರ್ನಾಟಕ ಬೌಲರ್​ಗಳು ಎದುರಾಳಿಗರನ್ನು ಆಲೌಟ್ ಮಾಡುವ ವಿಶ್ವಾಸದಲ್ಲಿದ್ದಾರೆ. ಮಧ್ಯಪ್ರದೇಶ ಇನ್ನೂ 200ಕ್ಕೂ ಅಧಿಕ ರನ್​ಗಳ ಹಿನ್ನಡೆಯಲ್ಲಿದೆ.

ಇದಕ್ಕೂ ಮೊದಲು ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಭರ್ಜರಿ ಆಟ ಪ್ರದರ್ಸಿಸಿತು. 83 ರನ್​ಗೆ 3 ವಿಕೆಟ್ ಕಳೆದುಕೊಂಡ ಕರ್ನಾಟಕ ತುಸು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಆರ್. ಸಮರ್ಥ್ ಮತ್ತು ಕೃಷ್ಣಮೂರ್ತಿ ಸಿದ್ಧಾರ್ಥ್ ಜೊತೆಗೂಡಿ 4ನೇ ವಿಕೆಟ್​ಗೆ 161 ರನ್​ಗಳ ಜೊತೆಯಾಟದಲ್ಲಿ ಭಾಗಿಯಾದರು.

ಸಮರ್ಥ್​​ 300 ಎಸೆತಗಳಲ್ಲಿ 108 ರನ್ ಬಾರಿಸಿದರೆ, ಸಿದ್ಧಾರ್ಥ್​ 146 ಎಸೆತಗಳಲ್ಲಿ 62 ರನ್ ಗಳಿಸಿದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳ ಪೈಕಿ ಕೃಷ್ಣಪ್ಪ ಗೌಥಮ್ ಸ್ಫೋಟಕ ಬ್ಯಾಟಿಂಗ್ ನಡೆಸಿ 68 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸಿಡಿಸಿ 82 ರನ್ ಚಚ್ಚಿದರೆ, ಶ್ರೆಯಸ್ ಗೋಪಾಲ್ 50 ರನ್ ಕಲೆಹಾಕಿದರು.

India vs New Zealand: ಭಾರತ ಸೋಲುಂಡಿದ್ದು ಕೇವಲ ಬೌಲರ್​ಗಳಿಂದ ಮಾತ್ರವಲ್ಲ; ಇಲ್ಲಿವೆ 3 ಕಾರಣ

ಕರ್ನಾಟಕ ತಂಡ ಅಂತಿಮವಾಗಿ 132 ಓವರ್​​​ನಲ್ಲಿ 426 ರನ್​ಗೆ ಆಲೌಟ್ ಆಯಿತು. 6 ಪಂದ್ಯಗಳಿಂದ 8 ಪಾಯಿಂಟ್ ಪಡೆದು ಅಂಕಪಟ್ಟಿಯಲ್ಲಿ ತಳದಲ್ಲಿರುವ ಮಧ್ಯ ಪ್ರದೇಶಕ್ಕೆ ಇದು ಮಾಡು ಇಲ್ಲ ಮಡಿ ಎಂಬಂತಿನ ಪಂದ್ಯವಾಗಿದೆ. ಆದರೆ, ಕರ್ನಾಟಕ ತಂಡ 6 ಪಂದ್ಯಗಳಿಂದ 24 ಅಂಕ ಗಳಿಸಿದ್ದು, ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

First published:February 6, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading