Ranji Trophy: ರಣಜಿ ಟ್ರೋಫಿ ಇತಿಹಾಸದಲ್ಲಿ ಕರ್ನಾಟಕಕ್ಕೆ 200ನೇ ಗೆಲುವು; ದಾಖಲೆ ಬರೆದ ರಾಜ್ಯ ತಂಡ!

ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್​ರಂತಹ ಪ್ರಮುಖ ಆಟಗಾರರ ಅನುಪಸ್ಥಿಯಲ್ಲಿ ಬಲಿಷ್ಠ ಮುಂಬೈ ವಿರುದ್ಧ ಜಯ ಸಾಧಿಸಿದ ಕರ್ನಾಟಕ ತಂಡಕ್ಕೆ ಎಲ್ಲೆಡೆಯಿಂದ ಪ್ರಶಂಸೆಯ ನುಡಿಗಳು ಕೇಳಿಬರುತ್ತಿವೆ.

Vinay Bhat | news18-kannada
Updated:January 5, 2020, 8:08 PM IST
Ranji Trophy: ರಣಜಿ ಟ್ರೋಫಿ ಇತಿಹಾಸದಲ್ಲಿ ಕರ್ನಾಟಕಕ್ಕೆ 200ನೇ ಗೆಲುವು; ದಾಖಲೆ ಬರೆದ ರಾಜ್ಯ ತಂಡ!
2016 ರ ನವೆಂಬರ್​ನಿಂದ ರಣಜಿ ಟ್ರೋಫಿಯಲ್ಲಿ ವಿದರ್ಭ ಆಡಿರುವ 29 ಪಂದ್ಯಗಳಲ್ಲಿ ಒಂದರಲ್ಲೂ ಸೋತಿರಲಿಲ್ಲ.
  • Share this:
ಬೆಂಗಳೂರು: ರಣಜಿ ಟ್ರೋಫಿಯ ಮುಂಬೈ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ ಆಲ್ರೌಂಡರ್ ಪ್ರದರ್ಶನ ನೀಡಿ 5 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಪ್ರಸಕ್ತ ಸಾಲಿನ ರಣಜಿ ಟ್ರೋಫಿಯ ಬಿ ಗುಂಪಿನಲ್ಲಿ ಕರುಣ್ ನಾಯರ್ ಪಡೆ ತನ್ನ ಎರಡನೇ ಗೆಲುವು ದಾಖಲಿಸಿದೆ.

ಪ್ರತೀಕ್ ಜೈನ್ ಅವರ ಮಾರಕ ಬೌಲಿಂಗ್ ಮತ್ತು ದೇವದತ್ ಪಡಿಕ್ಕಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ರಾಜ್ಯ ಕ್ರಿಕೆಟ್ ತಂಡ ರಣಜಿ ಟ್ರೋಫಿಯ ನಾಲ್ಕನೇ ಸುತ್ತಿನ ಪಂದ್ಯವನ್ನು ಗೆದ್ದು ಬೀಗಿತು.

ಕರ್ನಾಟಕ ತಂಡ ಅಮೋಘ ವಿಜಯಿಯಾಗುತ್ತಿದ್ದಂತೆ ರಣಜಿ ಕ್ರಿಕೆಟ್​ ಇತಿಹಾಸದಲ್ಲಿ 200ನೇ ಜಯ ಸಾಧಿಸಿ ಹೊಸ ಮೈಲುಗಲ್ಲು ತಲುಪಿದೆ. ಅಷ್ಟೇ ಅಲ್ಲದೆ ರಣಜಿ ಕ್ರಿಕೆಟ್​ ಇತಿಹಾಸದಲ್ಲಿ ಅತೀ ಹೆಚ್ಚು ಜಯ ಸಾಧಿಸಿದ ಎರಡನೇ ತಂಡವಾಗಿ ದಾಖಲೆ ಬರೆದಿದೆ.

 


ರಣಜಿಯಲ್ಲಿ ಈವರೆಗೆ ಮುಂಬೈ ತಂಡ 245 ಪಂದ್ಯಗಳನ್ನು ಗೆದ್ದು ಪ್ರಥಮ ಸ್ಥಾನದಲ್ಲಿದೆ. ಇನ್ನು ಕರ್ನಾಟಕ 200 ಪಂದ್ಯಗಳನ್ನು ಗೆದ್ದು ಎರಡನೇ ಸ್ಥಾನದಲ್ಲಿದ್ದರೆ, ದೆಹಲಿ ತಂಡ 188, ತಮಿಳುನಾಡು 159 ಹಾಗೂ ಬಂಗಾಳ​ 156 ಪಂದ್ಯಗಳಲ್ಲಿ ಜಯ ಸಾಧಿಸಿದೆ.

ಮನೀಶ್ ಪಾಂಡೆ, ಮಯಾಂಕ್ ಅಗರ್ವಾಲ್​ರಂತಹ ಪ್ರಮುಖ ಆಟಗಾರರ ಅನುಪಸ್ಥಿಯಲ್ಲಿ ಬಲಿಷ್ಠ ಮುಂಬೈ ವಿರುದ್ಧ ಜಯ ಸಾಧಿಸಿದ ಕರ್ನಾಟಕ ತಂಡಕ್ಕೆ ಎಲ್ಲೆಡೆಯಿಂದ ಪ್ರಶಂಸೆಯ ನುಡಿಗಳು ಕೇಳಿಬರುತ್ತಿವೆ.

 ಈ ಪಂದ್ಯದಲ್ಲಿ ರಾಜ್ಯ ತಂಡಕ್ಕೆ ಗೆಲ್ಲಲು ಮುಂಬೈ 126 ರನ್ ಗುರಿಯನ್ನು ನೀಡಿತು. ಈ ಸವಾಲನ್ನು ಕರ್ನಾಟಕ 25ನೇ ಓವರ್​ನಲ್ಲಿ ಮುಟ್ಟಿತು. ದೇವದತ್ ಪಡಿಕ್ಕಲ್ ಅಮೋಘ ಅರ್ಧಶತಕ ಭಾರಿಸಿದರು. ರವಿಕುಮಾರ್ ಸಮರ್ಥ್, ರೋಹನ್ ಕದಮ್ ಅವರೂ ಕರ್ನಾಟಕದ ಗೆಲುವನ್ನು ಸುಗಮಗೊಳಿಸಿದರು.

ನಿನ್ನೆ ಎರಡನೇ ದಿನದಾಟದ ಅಂತ್ಯಕ್ಕೆ ಎರಡನೇ ಇನ್ನಿಂಗ್ಸಲ್ಲಿ 5 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿದ್ದ ಮುಂಬೈ ತಂಡ ಇಂದು ಬೆಳಗಿನ ಆಟದಲ್ಲಿ 149 ರನ್​ಗೆ ಆಲೌಟ್ ಆಯಿತು. ಪ್ರತೀಕ್ ಜೈನ್ ಕೇವಲ 11 ರನ್ನಿತ್ತು 4 ವಿಕೆಟ್ ಕಬಳಿಸಿ ಮಾರಕವಾಗಿ ಪರಿಣಮಿಸಿದರು. ಇಂದು ಬಿದ್ದ ಮುಂಬೈನ ಎಲ್ಲಾ ವಿಕೆಟ್​ಗಳೂ ಜೈನ್ ಪಾಲಾದವು. ಮುಂಬೈನ ಎರಡನೇ ಇನ್ನಿಂಗ್ಸಲ್ಲಿ ಸರ್ಫರಾಜ್ ಖಾನ್ 71 ರನ್ ಗಳಿಸಿದ್ದು ಟಾಪ್ ಸ್ಕೋರ್ ಆಯಿತು.

 ಮುಂಬೈ ಒಡ್ಡಿದ 126 ರನ್ ಗುರಿ ಕರ್ನಾಟಕಕ್ಕೆ ದೊಡ್ಡ ಸವಾಲೆನಿಸಲಿಲ್ಲ. ಆದರೆ, ಈ ಪಂದ್ಯದಲ್ಲಿ ಮುಂಬೈನ ಶಶಾಂಕ್ ಅತ್ತಾರ್ಡೆ ಆಲ್​ರೌಂಡರ್ ಆಟ ಗಮನ ಸೆಳೆಯಿತು. ಇಡೀ ಪಂದ್ಯದಲ್ಲಿ ಅವರು 45 ರನ್ ಹಾಗೂ 9 ವಿಕೆಟ್ ಪಡೆದರು. ಆದರೆ, ಅವರ ಈ ಅಮೋಘ ಪ್ರದರ್ಶನವು ಮುಂಬೈಗೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ಕರ್ನಾಟಕ ಪರ ದೇವದತ್ ಪಡಿಕ್ಕಲ್ ಮತ್ತು ಪ್ರತೀಕ್ ಜೈನ್ ಇಬ್ಬರೂ ಉತ್ತಮ ಪ್ರದರ್ಶನ ತೋರಿದರು.

ಕರ್ನಾಟಕಕ್ಕೆ ಈ ರಣಜಿ ಟ್ರೋಫಿಯಲ್ಲಿ ಇದು ಎರಡನೇ ಗೆಲುವಾಗಿದೆ. ಇವತ್ತಿನ ನಾಲ್ಕನೇ ಸುತ್ತಿನ ನಂತರ ಕರ್ನಾಟಕ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಇನ್ನಷ್ಟು ಮೇಲೇರಿದೆ. ರಾಜ್ಯ ತಂಡ ತನ್ನ ಮುಂದಿನ 5ನೇ ಪಂದ್ಯವನ್ನು ಜನವರಿ 11ರಿಂದ ಸೌರಾಷ್ಟ್ರ ವಿರುದ್ಧ ಆಡಲಿದೆ.

 

Published by: Vinay Bhat
First published: January 5, 2020, 8:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading