Ranji Trophy 2019-20: ಕರ್ನಾಟಕ ವಿರುದ್ಧ ಮಧ್ಯಪ್ರದೇಶ ದಿಟ್ಟ ಹೋರಾಟ; ಕುತೂಹಲದತ್ತ ಪಂದ್ಯ

Karnataka vs Madhya Pradesh: ಕರ್ನಾಟಕ ತಂಡ ಅಂತಿಮವಾಗಿ 132 ಓವರ್​​​ನಲ್ಲಿ 426 ರನ್​ಗೆ ಆಲೌಟ್ ಆಯಿತು. 6 ಪಂದ್ಯಗಳಿಂದ 8 ಪಾಯಿಂಟ್ ಪಡೆದು ಅಂಕಪಟ್ಟಿಯಲ್ಲಿ ತಳದಲ್ಲಿರುವ ಮಧ್ಯ ಪ್ರದೇಶಕ್ಕೆ ಇದು ಮಾಡು ಇಲ್ಲ ಮಡಿ ಎಂಬಂತಿನ ಪಂದ್ಯವಾಗಿದೆ.

news18-kannada
Updated:February 7, 2020, 8:31 AM IST
Ranji Trophy 2019-20: ಕರ್ನಾಟಕ ವಿರುದ್ಧ ಮಧ್ಯಪ್ರದೇಶ ದಿಟ್ಟ ಹೋರಾಟ; ಕುತೂಹಲದತ್ತ ಪಂದ್ಯ
ಕೃಷ್ಣಪ್ಪ ಗೌತಮ್
  • Share this:
ಶಿವಮೊಗ್ಗ (ಫೆ. 07): ಮಧ್ಯಪ್ರದೇಶ ತಂಡ ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ ದಿಟ್ಟ ಹೋರಾಟ  ನಡೆಸುತ್ತಿದೆ. ಆರಂಭಲ್ಲೆ ಪ್ರಮುಖ ವಿಕೆಟ್ ಕಳೆದುಕೊಂಡಿತಾದರು ಬಳಿಕ ಆದಿತ್ಯ ಶ್ರೀವಸ್ತವ್ ಅವರ ಶತಕ ಹಾಗೂ ವೆಂಕಟೇಶ್ ಅಯ್ಯರ್ ಅರ್ಧಶತಕದ ನೆರವಿನಿಂದ  ಮೂರನೇ ದಿನದಾಟದ ಅಂತ್ಯಕ್ಕೆ ಮ. ಪ್ರದೇಶ 4 ವಿಕೆಟ್ ನಷ್ಟಕ್ಕೆ 311 ರನ್ ಕಲೆಹಾಕಿದೆ. 115 ರನ್​ಗಳ ಹಿನ್ನಡೆಯಲ್ಲಿದೆ.

ಶಿವಮೊಗ್ಗದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮಧ್ಯಪ್ರದೇಶ ಎರಡನೇ ದಿನದಾಟದ ಮುಕ್ತಾಯಕ್ಕೆ 34 ಓವರ್‌ಗಳಲ್ಲಿ 2 ವಿಕೆಟ್‌ಗೆ 60 ರನ್‌ ಗಳಿಸಿತ್ತು. ನಿನ್ನೆ ಮೂರನೇ ದಿನದಾಟದ ಆರಂಭದಲ್ಲೇ ಯಶ್ ದುಬೆ 45 ರನ್ ಗಳಿಸಿ ಶ್ರೇಯಸ್ ಗೋಪಾಲ್ ಬೌಲಿಂಗ್​ನಲ್ಲಿ ಔಟ್ ಆದರೆ, ನಾಯಕ ಶುಭಂ ಶರ್ಮಾ ಆಟ 25 ರನ್​ಗೆ ಅಂತ್ಯವಾಯಿತು.

ಬಳಿಕ ನಡೆದಿದ್ದು ಆದಿತ್ಯ ಶ್ರೀವಸ್ತವ್ ಹಾಗೂ ವೆಂಕಟೇಶ್ ಅಯ್ಯರ್ ಆಟ. ಕ್ರೀಸ್ ಕಚ್ಚಿ ಆಡಿದ ಈ ಜೋಡಿ ತಂಡಕ್ಕೆ ಆಸರೆಯಾಗಿ ನಿಂತಿತು. ಈಗಾಗಲೇ ಇವರಿಬ್ಬರು 188 ರನ್​​ಗಳ ಜೊತೆಯಾಟ ಆಡಿ ಇಂದಿಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

32 ವರ್ಷಗಳಲ್ಲಿ 4 ಬಾರಿ ವಿಶ್ವ ಚಾಂಪಿಯನ್, ಆದರೆ ಒಮ್ಮೆಯೂ ವಿಶ್ವಕಪ್ ಆತಿಥ್ಯವಹಿಸಿಲ್ಲ

 



ಆದಿತ್ಯ 223 ಎಸೆತಗಳಲ್ಲಿ 109 ಹಾಗೂ ವೇಂಕಟೇಶ್ 200 ಎಸೆತಗಳಲ್ಲಿ 80 ರನ್ ಗಳಿಸಿ ಕ್ರೀಸ್​ನಲ್ಲಿದ್ದಾರೆ. 3ನೇ ದಿನದಾಟದ ಅಂತ್ಯಕ್ಕೆ ಮಧ್ಯಪ್ರದೇಶ 124 ಓವರ್​ನಲ್ಲಿ 4 ವಿಕೆಟ್ ಕಳೆದುಕೊಂಡು 311 ರನ್ ಗಳಿಸಿದೆ. ಇನ್ನೂ 115 ರನ್​​ಗಳ ಹಿನ್ನಡೆಯಲ್ಲಿದೆ. ಇಂದು ಅಂತಿಮ ದಿನದಾಟ ಬಾಕಿ ಉಳಿದಿದೆ.

ಇದಕ್ಕೂ ಮೊದಲು ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ ಭರ್ಜರಿ ಆಟ ಪ್ರದರ್ಸಿಸಿತು. 83 ರನ್​ಗೆ 3 ವಿಕೆಟ್ ಕಳೆದುಕೊಂಡ ಕರ್ನಾಟಕ ತುಸು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಆರ್. ಸಮರ್ಥ್ ಮತ್ತು ಕೃಷ್ಣಮೂರ್ತಿ ಸಿದ್ಧಾರ್ಥ್ ಜೊತೆಗೂಡಿ 4ನೇ ವಿಕೆಟ್​ಗೆ 161 ರನ್​ಗಳ ಜೊತೆಯಾಟದಲ್ಲಿ ಭಾಗಿಯಾದರು.

IPL 2020: ಐಪಿಎಲ್​ ಆರಂಭಕ್ಕೂ ಮುನ್ನವೇ ರಾಜಸ್ಥಾನ್ ರಾಯಲ್ಸ್​ ತಂಡಕ್ಕೆ ಬಿಗ್ ಶಾಕ್

ಸಮರ್ಥ್​​ 300 ಎಸೆತಗಳಲ್ಲಿ 108 ರನ್ ಬಾರಿಸಿದರೆ, ಸಿದ್ಧಾರ್ಥ್​ 146 ಎಸೆತಗಳಲ್ಲಿ 62 ರನ್ ಗಳಿಸಿದರು. ಬಳಿಕ ಬಂದ ಬ್ಯಾಟ್ಸ್​ಮನ್​ಗಳ ಪೈಕಿ ಕೃಷ್ಣಪ್ಪ ಗೌಥಮ್ ಸ್ಫೋಟಕ ಬ್ಯಾಟಿಂಗ್ ನಡೆಸಿ 68 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ಸಿಡಿಸಿ 82 ರನ್ ಚಚ್ಚಿದರೆ, ಶ್ರೆಯಸ್ ಗೋಪಾಲ್ 50 ರನ್ ಕಲೆಹಾಕಿದರು.

ಕರ್ನಾಟಕ ತಂಡ ಅಂತಿಮವಾಗಿ 132 ಓವರ್​​​ನಲ್ಲಿ 426 ರನ್​ಗೆ ಆಲೌಟ್ ಆಯಿತು. 6 ಪಂದ್ಯಗಳಿಂದ 8 ಪಾಯಿಂಟ್ ಪಡೆದು ಅಂಕಪಟ್ಟಿಯಲ್ಲಿ ತಳದಲ್ಲಿರುವ ಮಧ್ಯ ಪ್ರದೇಶಕ್ಕೆ ಇದು ಮಾಡು ಇಲ್ಲ ಮಡಿ ಎಂಬಂತಿನ ಪಂದ್ಯವಾಗಿದೆ. ಆದರೆ, ಕರ್ನಾಟಕ ತಂಡ 6 ಪಂದ್ಯಗಳಿಂದ 24 ಅಂಕ ಗಳಿಸಿದ್ದು, ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

First published:February 7, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading