Ranji Trophy 2019-20: ಬರೋಡ ವಿರುದ್ಧ ಕರ್ನಾಟಕಕ್ಕೆ 8 ವಿಕೆಟ್​ಗಳ ಜಯ; ಕ್ವಾರ್ಟರ್ ಫೈನಲ್​ಗೆ ನಾಯರ್ ಪಡೆ

ಕರ್ನಾಟಕ ತಂಡ ಬರೋಡ ವಿರುದ್ಧ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 2019-20ನೇ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟಿದೆ.

news18-kannada
Updated:February 14, 2020, 3:50 PM IST
Ranji Trophy 2019-20: ಬರೋಡ ವಿರುದ್ಧ ಕರ್ನಾಟಕಕ್ಕೆ 8 ವಿಕೆಟ್​ಗಳ ಜಯ; ಕ್ವಾರ್ಟರ್ ಫೈನಲ್​ಗೆ ನಾಯರ್ ಪಡೆ
ಕರುಣ್ ನಾಯರ್.
  • Share this:
ಬೆಂಗಳೂರು (ಫೆ. 14): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಬರೋಡ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ರಾಜ್ಯ ತಂಡ ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟಿದೆ.

ಬರೋಡವನ್ನು 2ನೇ ಇನ್ನಿಂಗ್ಸ್​ನಲ್ಲಿ 296 ರನ್​ಗೆ ಆಲೌಟ್ ಮಾಡಿ ರಾಜ್ಯ ತಂಡ ಗೆಲ್ಲಲು 149 ರನ್​ಗಳ ಟಾರ್ಗೆಟ್ ಪಡೆದುಕೊಂಡಿತು. ದೇವದತ್ ಪಡಿಕ್ಕಲ್(6) ಆರಂಭದಲ್ಲೆ ನಿರ್ಗಮಿಸಿದರಾದರು ನಾಯಕ ಕರುಣ್ ನಾಯರ್ ಅರ್ಧಶತಕ ಬಾರಿಸಿ ತಂಡಕ್ಕೆ ಗೆಲುವು ತಂದಿಟ್ಟರು.

 

ನಾಯರ್ 126 ಎಸೆತಗಳಲ್ಲಿ ಅಜೇಯ 71 ರನ್ ಗಳಿಸಿದರೆ, ಕೃಷ್ಣಮೂರ್ತಿ ಸಿದ್ಧಾರ್ಥ್​ ಅಜೇಯ 29 ರನ್ ಗಳಿಸಿದರು. ಕರ್ನಾಟಕ 44.4 ಓವರ್​ನಲ್ಲಿ 2 ವಿಕೆಟ್ ಕಳೆದುಕೊಂಡು 150 ರನ್ ಬಾರಿಸಿ ಗೆಲುವಿನ ನಗೆ ಬೀರಿತು.

 IPL 2020: ಐಪಿಎಲ್​ನಿಂದ ಮ್ಯಾಕ್ಸ್​ವೆಲ್​ ಔಟ್?; ಬದಲಿ ಆಟಗಾರ ಯಾವ ಸ್ಟಾರ್ ಆಲ್ರೌಂಡರ್​ ಗೊತ್ತಾ..?

ಮೊದಲ ಇನ್ನಿಂಗ್ಸ್‌ನಲ್ಲಿ ತೀರಾ ಕಳಪೆ ಬ್ಯಾಟಿಂಗ್‌ ನಡೆಸಿ ಕೇವಲ 85 ರನ್​ಗೆ ಸರ್ವಪತನ ಕಂಡಿದ್ದ ಬರೋಡ ದ್ವಿತೀಯ ಇನ್ನಿಂಗ್ಸ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.

ಅಮಹ್ಮದ್​ನೂರ್ ಪಠಾಣ್ 162 ಎಸೆತಗಳಲ್ಲಿ 90 ರನ್ ಬಾರಿಸಿದರೆ, ಅಭಿಮನ್ಯು ರಜ್​ಪೂತ್ 52 ಹಾಗೂ ದೀಪಕ್ ಹೂಡ ಅರ್ಧಶತಕ ಬಾರಿಸಿದರಷ್ಟೆ.

ಬರೋಡ ಎರಡನೇ ಇನ್ನಿಂಗ್ಸ್​ನಲ್ಲಿ 89.5 ಓವರ್​​ನಲ್ಲಿ 296 ರನ್​ಗೆ ಆಲೌಟ್ ಆಯಿತು. ರಾಜ್ಯ ತಂಡದ ಪರ ಪ್ರಸಿದ್ಧ್ ಕೃಷ್ಣ 4 ವಿಕೆಟ್ ಕಿತ್ತು ಮಿಂಚಿದರೆ, ರೋನಿತ್ ಮೊರೆ 3, ಕೃಷ್ಣಪ್ಪ ಗೌತಮ್ 2 ವಿಕೆಟ್ ಪಡೆದರು. ಈ ಮೂಲಕ ಕರ್ನಾಟಕಕ್ಕೆ 149 ರನ್​ಗಳ ಟಾರ್ಗೆಟ್ ನೀಡಿತು.

ಸದ್ಯ ಈ ಸವಾಲನ್ನು ಬೆನ್ನಟ್ಟಿರುವ ಕರ್ನಾಟಕ ಉತ್ತಮ ಆರಂಭ ಪಡೆದುಕೊಂಡಿದ್ದು, ಗೆಲುವಿನತ್ತ ದಾಪುಗಾಲಿಡುತ್ತಿದೆ.

T20 World Cup 2020: ಟೀಂ ಇಂಡಿಯಾದ ಈ ಮೂರು ಸ್ಟಾರ್ ಆಟಗಾರರ ವಿಶ್ವಕಪ್ ಎಂಟ್ರಿ ನಿರ್ಧರಿಸಲಿದೆ ಐಪಿಎಲ್

ಬರೋಡ ಮೊದಲ ಇನ್ನಿಂಗ್ಸ್​ನಲ್ಲಿ 85 ರನ್​ಗೆ ಪತನಗೊಂಡ ಬಳಿಕ, ಇದಕ್ಕುತ್ತರಿಸಿದ್ದ ರಾಜ್ಯ ತಂಡವೂ 233 ರನ್​ ಗಳಿಸಿತ್ತು. ರಾಜ್ಯ ತಂಡದ ಪರ ನಾಯಕ ಕರುಣ್ ನಾಯರ್47, ಅಭಿಮನ್ಯು ಮಿಥುನ್ 40 ರನ್ ಗಳಿಸಿದರು.

First published: February 14, 2020, 3:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading