Ranji Trophy 2019-20: ಮೊದಲ ದಿನ 17 ವಿಕೆಟ್ ಪತನ; ಕರ್ನಾಟಕ ಅಲ್ಪ ಮುನ್ನಡೆ

ಕೃಷ್ಣಮೂರ್ತಿ ಸಿದ್ಧಾರ್ಥ್​ 29 ರನ್ ಹಾಗೂ ನಾಯಕ ಕರುಣ್ ನಾಯರ್ 47 ರನ್ ಬಾರಿಸಿ ತಂಡಕ್ಕೆ ಕೊಂಚ ಸಮಯ ಆಸರೆಯಾದರು.

news18-kannada
Updated:February 13, 2020, 8:17 AM IST
Ranji Trophy 2019-20: ಮೊದಲ ದಿನ 17 ವಿಕೆಟ್ ಪತನ; ಕರ್ನಾಟಕ ಅಲ್ಪ ಮುನ್ನಡೆ
ಸೆಮಿ ಫೈನಲ್ನಲ್ಲಿ ಕೆ. ಎಲ್ ರಾಹುಲ್, ಮನೀಶ್ ಪಾಂಡೆ ಯಂತಹ ಅಂತರಾಷ್ಟ್ರೀಯ ಅನುಭವಿ ಆಟಗಾರರಿದ್ದರೂ ಕರ್ನಾಟಕ ಗೆಲುವು ಸಾಧಿಸುವಲ್ಲಿ ಎಡವಿತು. ಅದರಲ್ಲು ನಾಯಕ ಕರುಣ್ ನಾಯರ್ ಟೂರ್ನಿಯಿದ್ದಕ್ಕೂ ಅತ್ಯಂತ ಕಳಪೆ ಪ್ರದರ್ಶನ ತೋರಿದರು.
  • Share this:
ಬೆಂಗಳೂರು (ಫೆ. 13): ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಬರೋಡ ನಡುವಣ ರಣಜಿ ಪಂದ್ಯದ ಮೊದಲ ದಿನವೇ ಬರೋಬ್ಬರಿ 17 ವಿಕೆಟ್​ಗಳು ಉರುಳಿದೆ. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಬರೋಡ ಕೇವಲ 85 ರನ್​ಗೆ ಸರ್ವಪತನ ಕಂಡಿತು.

ಕರ್ನಾಟಕ ಮೊದಲ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 165 ರನ್ ಕಲೆಹಾಕಿದೆ. ನಾಯರ್ ಪಡೆ 80 ರನ್​ಗಳ ಅಲ್ಪ ಮುನ್ನಡೆಯಲ್ಲಿದೆ.

 


ಬರೋಡ ಪರ ಅಹ್ಮದ್​​ನೂರ್ ಪಠಾಣ್ 45 ರನ್ ಗಳಿಸಿದ್ದು ಬಿಟ್ಟರೆ, ದೀಪಕ್ ಹೂಡ 20 ಬಾರಿಸಿದ್ದೇ ತಂಡದ ಬ್ಯಾಟ್ಸ್​ಮನ್​ನ ಗರಿಷ್ಠ ಸ್ಕೋರ್ ಆಗಿತ್ತು. ಐದು ಬ್ಯಾಟ್ಸ್​ಮನ್​ಗಳು ಸೊನ್ನೆ ಸುತ್ತಿದರು. 33.5 ಓವರ್​ನಲ್ಲಿ ಬರೋಡ 85 ರನ್​ಗೆ ಆಲೌಟ್ ಆಯಿತು.

ಕೇವಲ 35 ರನ್​ಗಳಿಗೆ ಆಲೌಟ್: ಏಕದಿನ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆದ ನೇಪಾಳ

ಕರ್ನಾಟಕ ತಂಡದ ಪರ ಅಭಿಮನ್ಯು ಮಿಥುನ್ ಹಾಗೂ ಕೃಷ್ಟಪ್ಪ ಗೌಥಮ್ ತಲಾ 3 ವಿಕೆಟ್ ಕಿತ್ತರೆ, ಪ್ರಸಿದ್ಧ್ ಕೃಷ್ಣ 2 ಹಾಗೂ ಶ್ರೇಯಸ್ ಗೋಪಾಲ್ 1 ವಿಕೆಟ್ ಪಡೆದರು.

ಬಳಿಕ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ರಾಜ್ಯ ತಂಡ ಆರಂಭದಲ್ಲೇ ರವಿಕುಮಾರ್ ಸಮರ್ಥ್​(11) ಹಾಗೂ ದೇವದತ್ ಪಡಿಕ್ಕಲ್(6) ವಿಕೆಟ್ ಕಳೆದುಕೊಂಡಿತು. ಕೃಷ್ಣಮೂರ್ತಿ ಸಿದ್ಧಾರ್ಥ್​ 29 ರನ್ ಹಾಗೂ ನಾಯಕ ಕರುಣ್ ನಾಯರ್ 47 ರನ್ ಬಾರಿಸಿ ತಂಡಕ್ಕೆ ಕೊಂಚ ಸಮಯ ಆಸರೆಯಾದರು.

ಪವನ್ ದೇಶಪಾಂಡೆ 15 ರನ್​ಗೆ ನಿರ್ಗಮಿಸಿದರೆ, ಶ್ರೇಯಸ್ ಗೋಪಾಲ್ ಸೊನ್ನೆ ಸುತ್ತಿದರು. ಕೃಷ್ಣಪ್ಪ ಗೌತಮ್ ಆಟ 27 ರನ್​ಗೆ ಅಂತ್ಯವಾಯಿತು. ಪರಿಣಾಮ ಮೊದಲ ದಿನದಾಟದ ಅಂತ್ಯಕ್ಕೆ ಕರ್ನಾಟಕ ತಂಡ 52 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿದೆ. 80 ರನ್​ಗಳ ಮುನ್ನಡೆ ಸಾಧಿಸಿದೆ.

ಐಸಿಸಿ ಆಲ್​ರೌಂಡರ್ ರ‍್ಯಾಕಿಂಗ್ ಪಟ್ಟಿಯಲ್ಲಿ ಏಕೈಕ ಭಾರತೀಯ: ಅಫ್ಘಾನ್ ಆಟಗಾರ ನಂಬರ್ 1

ರಾಜ್ಯ ತಂಡದ ಪರ ಶ್ರೀನಿವಾಸ್ ಶರತ್ 19 ರನ್ ಹಾಗೂ ಅಭಿಮನ್ಯು ಮಿಥುನ್ 9 ರನ್​ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಬರೋಡ ಪರ ಸೊಯೇಬ್ ಸೊಪರಿಯ 3 ವಿಕೆಟ್ ಕಿತ್ತರೆ, ರಜ್ಪೂತ್ ಹಾಗೂ ಭಾರ್ಗವ್ ಭಟ್ ತಲಾ 2 ವಿಕೆಟ್ ಪಡೆದರು.

First published:February 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading