Pakistan: ಪಾಕಿಸ್ತಾನ ಕ್ರಿಕೆಟ್​ ಮಂಡಲಿ ಅಧ್ಯಕ್ಷರಾಗಿ ರಮೀಜ್​ ರಾಜಾ ಸೋಮವಾರ ಅಧಿಕಾರ ಸ್ವೀಕಾರ

ಮೂರು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಎಹ್ಸಾನ್ ಮಣಿಯ ಬದಲಾಗಿ ರಮೀಜ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು ಎಂಬುದು ಮೊದಲೇ ತೀರ್ಮಾನವಾಗಿದೆ. ನ್ಯಾಷನಲ್ ಹೈ ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ಸಭೆಯ ನಂತರ ಹೊಸ ಅಧ್ಯಕ್ಷರು ಮಾಧ್ಯಮ ಗೋಷ್ಠಿಯನ್ನು ಸಹ ನಡೆಸುತ್ತಾರೆ ಎಂದು ಪಿಸಿಬಿ (PCB) ಹೇಳಿದೆ.

ಪಾಕಿಸ್ತಾನ ಕ್ರಿಕೆಟ್​ ಮಂಡಲಿಯ ಅಧ್ಯಕ್ಷರಾಗಲಿರುವ ರಮೀಜ್​ ರಾಜಾ

ಪಾಕಿಸ್ತಾನ ಕ್ರಿಕೆಟ್​ ಮಂಡಲಿಯ ಅಧ್ಯಕ್ಷರಾಗಲಿರುವ ರಮೀಜ್​ ರಾಜಾ

  • Share this:
    Cricket  ಪಾಕಿಸ್ತಾನ ಕ್ರಿಕೆಟ್​ ತಂಡದ  ಮಾಜಿ ನಾಯಕ ರಮೀಜ್ ರಾಜಾ (Ramiz Raja) ಅವರು ಸೋಮವಾರ ಅಧಿಕೃತವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (The Pakistan Cricket Board) ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ವರದಿಗಳು ಹೇಳಿವೆ.

    ಪಿಸಿಬಿ ಚುನಾವಣಾ ಆಯುಕ್ತರಾದ (BoG)  ಜಸ್ಟಿಸ್ (ನಿವೃತ್ತ) ಶೇಖ್ ಅಜ್ಮತ್ ಸಯೀದ್ (Sheikh Azmat Saeed) ಅವರು ಚುನಾವಣೆಯನ್ನು ನಡೆಸುತ್ತಾರೆ ಮತ್ತು ವಿಶೇಷ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಶನಿವಾರ ಮಂಡಳಿಯ ವಿಶೇಷ ಸಭೆಯನ್ನು ಕರೆಯಲಾಗಿದೆ ಎಂದು ಶನಿವಾರ ಪ್ರಕಟಿಸಿದೆ.

    ಪಿಸಿಬಿಯ ಮುಖ್ಯ ಪೋಷಕರೂ ಆಗಿರುವ ಪ್ರಧಾನಿ ಇಮ್ರಾನ್ ಖಾನ್ (Prime Minister Imran Khan) ರಮೀಜ್ ಮತ್ತು ಹಿರಿಯ ಅಧಿಕಾರಿಯಾದ ಅಸದ್ ಅಲಿ ಖಾನ್ ಅವರನ್ನು ಬಿಒಜಿಯ ಹೊಸ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದ್ದಾರೆ. ಕಳೆದ ತಿಂಗಳು ತನ್ನ ಮೂರು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಎಹ್ಸಾನ್ ಮಣಿಯ ಬದಲಾಗಿ ರಮೀಜ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗುವುದು ಎಂಬುದು ಮೊದಲೇ ತೀರ್ಮಾನವಾಗಿದೆ. ನ್ಯಾಷನಲ್ ಹೈ ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ಸಭೆಯ ನಂತರ ಹೊಸ ಅಧ್ಯಕ್ಷರು ಮಾಧ್ಯಮ ಗೋಷ್ಠಿಯನ್ನು ಸಹ ನಡೆಸುತ್ತಾರೆ ಎಂದು ಪಿಸಿಬಿ (PCB) ಹೇಳಿದೆ.

    ರಮೀಜ್ ಇನ್ನೂ ಅಧಿಕೃತವಾಗಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸದಿದ್ದರೂ ವಿಶ್ವಕಪ್ ತಂಡದ ಆಯ್ಕೆ ಮತ್ತು ಅವರ ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ (Misbah-ul-Haq) ಮತ್ತು ಬೌಲಿಂಗ್ ಕೋಚ್ ವಕಾರ್ ಯೂನಿಸ್ (Waqar Younis) ಅವರ ಹಠಾತ್ ರಾಜೀನಾಮೆಗಳಲ್ಲಿ ಅವರ ಪ್ರಭಾವವು ಗೋಚರಿಸಿದೆ. ರಮೀಜ್ ಪಾಕಿಸ್ತಾನದಲ್ಲಿ ಕ್ರಿಕೆಟ್ ಸಂಘಟನೆ, ಆಯ್ಕೆ ಸಮಿತಿ ವ್ಯವಸ್ಥೆ ಮತ್ತು ಇತರ ಪ್ರಮುಖ ವಿಷಯಗಳ ಕುರಿತು ಕೆಲವು ನೀತಿ ನಿರ್ಧಾರಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ.

    ಕಳೆದ ಅನೇಕ ವರ್ಷಗಳಿಂದ ಪಾಕಿಸ್ತಾನ ಕ್ರಿಕೆಟ್​ ತಂಡವು ಯಾವುದೇ ಹೇಳಿಕೊಳ್ಳುವಂತಹ ಸಾಧನೆಯನ್ನು ಅಂತರರಾಷ್ಟ್ರಿಯ ಕ್ರಿಕೆಟ್​ನಲ್ಲಿ ಮಾಡಿಲ್ಲ. ಅದರಂತೆ ಈ ತಂಡವು ಭಾಗವಹಿಸಿದ ಪ್ರಮುಖ ಟೂರ್ನಿಗಳಲ್ಲೂ ಕೂಡ ಗಮನಾರ್ಹ ಸಾಧನೆಯನ್ನು ಸಹ ಇದು ಮಾಡಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶ.


    ಇದನ್ನೂ ಓದಿ: Photos gallery: 20 ವರ್ಷಗಳಿಂದ ಭಯೋತ್ಪಾದಕ ಆರೋಪಿಗಳೇ ತುಂಬಿರುವ ಗ್ವಾಂಟನಾಮೊ ಕೊಲ್ಲಿ ಹೇಗಿದೆ? ಇಲ್ಲಿದೆ ಒಂದಷ್ಟು ಫೋಟೋಗಳು

    ರಮೀಜ್​ ರಾಜ ಉತ್ತಮ ಹೆಸರು ಹೊಂದಿರುವ ಹಾಗೂ ಆಕ್ರಮಣಕಾರಿ ಆಟಕ್ಕೆ ಹೆಸರಾಗಿದ್ದ ಆಟಗಾರ. ಈಗ ಇವರ ನೇಮಕವು ಪಾಕಿಸ್ತಾನ ಕ್ರಿಕೆಟ್​ ತಂಡದಲ್ಲಿ ಸಾಕಷ್ಟು ಸಂಚಲನವನ್ನು ಮೂಡಿಸಿದೆ ಎಂದು ಹೇಳಬಹುದು.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
    Published by:HR Ramesh
    First published: