ಲಕ್ನೋ (ನ. 29): ಇಲ್ಲಿನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಎಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಅಂತಿಮ ಇನ್ನಿಂಗ್ಸ್ನಲ್ಲಿ ಎದುರಾಳಿಯ ಗೆಲುವಿಗಾಗಿ ಅಫ್ಘಾನ್ ಕೇವಲ 31 ರನ್ಗಳ ಟಾರ್ಗೆಟ್ ನೀಡಿತಷ್ಟೆ. ಈ ಗುರಿ ಬೆನ್ನಟ್ಟಿದ ವಿಂಡೀಸ್ 6.2 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಈ ಮೂಲಕ ಬ್ಯಾಟಿಂಗ್- ಬೌಲಿಂಗ್ನಲ್ಲಿ ಮಿಂಚಿದ ಹೋಲ್ಡರ್ ಪಡೆ ಭಾರತ ಸರಣಿಗೂ ಮುನ್ನ ಗೆಲುವಿನ ಲಯಕ್ಕೆ ಮರಳಿದೆ.
![Rakheem Cornwall takes 10 as West Indies crush Afghanistan in just over two days]()
ಟ್ರೋಫಿ ಜೊತೆ ವೆಸ್ಟ್ ಇಂಡೀಸ್ ತಂಡದ ಆಟಗಾರರು
(VIDEO): ವಿಕೆಟ್ ಪಡೆದಾಗ ಈ ಬೌಲರ್ ಮೈದಾನದಲ್ಲೇ ಮಾಡ್ತಾನೆ ಮ್ಯಾಜಿಕ್; ಹೇಗೆ ಗೊತ್ತಾ?
ಮೊದಲ ಇನ್ನಿಂಗ್ಸ್ನಲ್ಲಿ ಅಫ್ಘಾನಿಸ್ತಾನ 187 ರನ್ಗೆ ಆಲೌಟ್ ಆಯಿತು. ವಿಂಡೀಸ್ ಪರ ರಖೀಮ್ ಕಾರ್ನ್ವಾಲ್ 7 ವಿಕೆಟ್ ಕಿತ್ತು ಮಿಂಚಿದರೆ, ಹೋಲ್ಡರ್ 2 ವಿಕೆಟ್ ಪಡೆದರು. ಇತ್ತ ವೆಸ್ಟ್ ಇಂಡೀಸ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ ಶಮರ್ತ್(111) ಶತಕ ಹಾಗೂ ಜಾನ್ ಕಾಂಪ್ಬೆಲ್(55) ಅರ್ಧಶತಕದ ನೆರವಿನಿಂದ 277 ರನ್ ಕಲೆಹಾಕಿತು. ಅಫ್ಘಾನ್ ಪರ ಅಮಿರ್ ಹಂಜಾ 5 ಹಾಗೂ ನಾಯಕ ರಶೀದ್ ಖಾನ್ 3 ವಿಕೆಟ್ ಕಿತ್ತರು.
90 ರನ್ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ ಮತ್ತೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ವಿಂಡೀಸ್ ಬೌಲರ್ಗಳ ಸಂಘಟಿತ ದಾಳಿಗೆ ನಲುಗಿದ ಕ್ರಿಕೆಟ್ ಶಿಶುಗಳು 43.1 ಓವರ್ಗಳಲ್ಲೇ 120 ರನ್ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು.
ಐಪಿಎಲ್ನಲ್ಲಿ ಭಾರತದ ಕೋಚ್ಗಳಿಗೆ ಅವಕಾಶವಿಲ್ಲ; ಬೇಸರ ಹೊರಹಾಕಿದ ದ್ರಾವಿಡ್
2ನೇ ಇನ್ನಿಂಗ್ಸ್ನಲ್ಲಿ ವಿಂಡೀಸ್ ಪರ ಕಾರ್ನ್ವಾಲ್, ಹೋಲ್ಡರ್ ಹಾಗೂ ರೊಸ್ಟನ್ ಚೇಸ್ ತಲಾ 3 ವಿಕೆಟ್ ಪಡೆದರು.
ಈ ಮೂಲಕ 32 ರನ್ಗಳ ಟಾರ್ಗೆಟ್ ಬೆನ್ನಟ್ಟಿದ ವಿಂಡೀಸ್ 6.2 ಓವರ್ನಲ್ಲೇ 33 ರನ್ ಬಾರಿಸಿ 9 ವಿಕೆಟ್ಗಳಿಂದ ಗೆದ್ದು ಬೀಗಿತು. ಎರಡೂ ಇನ್ನಿಂಗ್ಸ್ ಸೇರಿ ಒಟ್ಟು 10 ವಿಕೆಟ್ ಕಿತ್ತ ರಖೀಮ್ ಕಾರ್ನ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.
ವೆಸ್ಟ್ ಇಂಡೀಸ್ ತನ್ನ ಮುಂದಿನ ಸರಣಿಯನ್ನು ಭಾರತ ವಿರುದ್ಧ ಆಡಲಿದೆ. ಮೂರು ಪಂದ್ಯಗಳ ಟಿ-20 ಸರಣಿ ಪೈಕಿ ಟೀಂ ಇಂಡಿಯಾ ವಿರುದ್ಧ ಡಿ. 6 ರಂದು ಮೊದಲ ಕದನ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ