ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಮೈದಾನದಲ್ಲಿ ಅರ್ಧಶತಕ ಸಿಡಿಸಿದ ವೇಳೆ ಅವರು ಸಂಭ್ರಮಿಸುವ ಪರಿ ಎಲ್ಲರೂ ನೋಡಿರುತ್ತೀರಿ. ಬ್ಯಾಟ್ ಹಿಡಿದು ಕತ್ತಿ ಜಳಪಿಸುವಂತೆ ತಿರುಗಿಸಿ ವಿಶಿಷ್ಠವಾಗಿ ಸಂಭ್ರಮಾರಣೆ ಮಾಡುತ್ತಾರೆ.
ಇತ್ತೀಚೆಗಷ್ಟೆ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಜಡೇಜಾ ಅವರ ಈ ಶೈಲಿಯನ್ನು ಅನುಕರಿಸಿ ವಿಡಿಯೋ ಹಂಚಿಕೊಂಡಿದ್ದರು. ಇದಕ್ಕೆ ಜಡ್ಡು ಹಾಗೂ ವಿರಾಟ್ ಕೊಹ್ಲಿ ಕಮೆಂಟ್ ಕೂಡ ಮಾಡಿದ್ದರು.
ಸದ್ಯ ಜಡೇಜಾ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಇದರಲ್ಲಿ ನಿಜವಾದ ಕತ್ತಿಯನ್ನೇ ಕ್ಷತ್ರಿಯನಂತೆ ತಿರುಗಿಸಿ ಎಲ್ಲರ ಮನ ಗೆದ್ದಿದ್ದಾರೆ. ಈ ಕತ್ತಿ ಹೊಳಪನ್ನು ಕಳೆದುಕೊಂಡಿರುವಬಹುದು, ಆದರೆ ತನ್ನ ಮಾಸ್ಟರ್ಗೆ ಯಾವತ್ತಿಗೂ ನಿಮತ್ತಾಗಿ ಇರುತ್ತದೆ ಎಂದು ಬರೆದುಕೊಂಡಿದ್ದಾರೆ.
ಆ ಒಂದು ಘಟನೆ ನಡೆದ ಬಳಿಕ ಭಾರತದಲ್ಲಿ ನನ್ನನ್ನು ಕ್ರಿಸ್ ಗೇಲ್ರಂತೆ ಕಾಣುತ್ತಾರೆ!
ರವೀಂದ್ರ ಜಡೇಜಾ ಅವರು ಮೂಲತಃ ರಜಪೂತ ಮನೆತನದವರಾಗಿದ್ದಾರೆ. ಅಲ್ಲದೆ ಇತ್ತೀಚೆಗಷ್ಟೆ ಕುದುರೆ ಸವಾರಿಯನ್ನು ಮಾಡುವ ವಿಡಿಯೋವನ್ನು ಜಡ್ಡು ಹಂಚಿಕೊಂಡಿದ್ದರು.
ಟಿ-20 ವಿಶ್ವಕಪ್ ಮುಂದೂಡಿದರೆ ಮಿ. 360 ಕಮ್ಬ್ಯಾಕ್ ಸಾಧ್ಯವೇ?; ಈ ಬಗ್ಗೆ ಏನಂದ್ರು ಎಬಿಡಿ?
ಕೊರೋನಾ ವೈರಸ್ನಿಂದಾಗಿ ಇಡೀ ಕ್ರೀಡಾ ಜಗತ್ತು ಸ್ತಬ್ದಗೊಂಡಿದೆ. ಯಾವುದೇ ಕ್ರಿಕೆಟ್ ಪಂದ್ಯ ನಡೆಯುತ್ತಿಲ್ಲ. ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಕೂಡ ಮುಂದಕ್ಕೋಗಿದೆ. ಹೀಗಾಗಿ ಆಟಗಾರರು ತಮ್ಮ ಮನೆಯಲ್ಲಿಯೇ ಕುಳಿತು ಸಮಯ ಕಳೆಯುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ