IPL 2021| ದ್ವಿತಿಯಾರ್ಧದಲ್ಲಿ ರಾಜಸ್ತಾನ ರಾಯಲ್ಸ್​ ತಂಡ ಮತ್ತೆ ಗೆಲುವಿನ ಲಯಕ್ಕೆ ಮರಳಲಿದೆ; ತಬ್ರೇಜ್ ಶಮ್ಸಿ

ಈ ಟೂರ್ನಿಯಲ್ಲಿ ರಾಜಸ್ತಾನ ರಾಯಲ್ಸ್​ ತಂಡದ ಪರ ಪ್ರಮುಖ ಆಟಗಾರರಾಗಿದ್ದ ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್​ ದ್ವಿತಿಯಾರ್ಧದಲ್ಲಿ ಟೂರ್ನಿಯಿಂದ ಹೊರಗೊಳಿದಿದ್ದಾರೆ. ಹೀಗಾಗಿ ರಾಜಸ್ತಾನ ತಂಡ ತಬ್ರೇಜ ಶಮ್ಸಿಯನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ.

ತಬ್ರೇಜ್ ಶಮ್ಸಿ.

ತಬ್ರೇಜ್ ಶಮ್ಸಿ.

  • Share this:
    ಐಪಿಎಲ್ 2021 (IPL 2021) ದ್ವಿತಿಯಾರ್ಧ ನಾಳೆಯಿಂದ ಆರಂಭವಾಗಲಿದೆ. ಯುಎಇ ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ಕಣಕ್ಕಿಳಿಯಲಿದೆ. ಆದರೆ, ಮೊದಲಾರ್ಧದ ಅಂತ್ಯದ ವೇಳೆಗೆ ರಾಜಸ್ತಾನ ರಾಯಲ್ಸ್​ (Rajastan Royals) ತಂಡ ಕಳಪೆ ಪ್ರದರ್ಶನ ನೀಡಿತ್ತು. ಸತತ ಸೋಲಿನಿಂದ ಕಂಗೆಟ್ಟಿತ್ತು. ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಕುಸಿದಿತ್ತು. ಇದೇ ಕಾರಣಕ್ಕೆ ರಾಜಸ್ತಾನ ತಂಡ ದ್ವಿತಿಯಾರ್ಧಕ್ಕೆ ಉತ್ತಮ ಮತ್ತು ಬಲಿಷ್ಠ ತಂಡದೊಂದಿಗೆ ಕಣಕ್ಕಿಳಿಯಲು ಮುಂದಾಗಿದೆ. ಪರಿಣಾಮ ದಕ್ಷಿಣಾ ಆಫ್ರಿಕಾದ (South Africa) ಯಶಸ್ವಿ ನಂಬರ್​.1 ಟಿ20 ಲೆಗ್​ ಸ್ಪಿನ್ನರ್ ತಬ್ರೇಜ್ ಶಮ್ಸಿ (Tabrez Shamsi)​ ಅನ್ನು ಇದೀಗ ತಂಡಕ್ಕೆ ಸೇರಿಸಿಕೊಂಡಿದೆ. ಹೀಗಾಗಿ ಈ ಆವೃತ್ತಿಯಲ್ಲಿ ತಬ್ರೇಜ್ ಶಮ್ಸಿ ಆಟವನ್ನು ಎಲ್ಲರೂ ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಆದರೆ, ರಾಜಸ್ತಾನ ಕ್ಯಾಂಪ್​ಗೆ ಸೇರ್ಪಡೆಯಾಗುತ್ತಿದ್ದಂತೆ ಹೇಳಿಕೆ ಬಿಡುಗಡೆ ಮಾಡಿರುವ ಶಮ್ಸಿ, "ರಾಜಸ್ತಾನ ರಾಯಲ್ಸ್​ ದ್ವಿತಿಯಾರ್ಧದಲ್ಲಿ ಮತ್ತೆ ಗೆಲುವಿನ ಲಯಕ್ಕೆ ಮರಳಲಿದೆ" ಎಂದು ಹೇಳುವ ಮೂಲಕ ತಂಡದಲ್ಲಿ ಹೊಸ ವಿಶ್ವಾವನ್ನು ತುಂಬಲು ಮುಂದಾಗಿದ್ದಾರೆ.

    ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ತಬ್ರೇಜ್ ಶಮ್ಸಿ, "ಟೂರ್ನಿಯ ಮೊದಲಾರ್ಧದಲ್ಲಿ ತಂಡವು ಮೊದಲ ಸ್ಥಾನದಲ್ಲಿದೆಯೋ ಅಥವಾ ಐದನೆಯದೋ ಎಂಬುದನ್ನು ಯೋಚಿಸಿ ಯಾವುದೇ ಪ್ರಯೋಜನ ಇಲ್ಲ. ಬದಲಾಗಿ ದ್ವಿತಿಯಾರ್ಧದಲ್ಲಿ ನಮ್ಮ ಪ್ರದರ್ಶನ ಹೇಗಿರಲಿದೆ? ಮತ್ತೆ ಗೆಲುವಿನ ಟ್ರ್ಯಾಕ್​ಗೆ ಮರಳುವುದು ಹೇಗೆ ಎಂಬುದರ ಮೇಲಿರಬೇಕಿದೆ. ನಾವು ಈಗ ಉತ್ತಮ ಸ್ಥಿತಿಯಲ್ಲಿದ್ದೇವೆ ಮತ್ತು ಅಂಕಪಟ್ಟಿಯಲ್ಲಿ ಮೇಲೆರಲು ಇನ್ನೂ ಉತ್ತಮ ಅವಕಾಶಗಳು ನಮಗೆ ಇದೆ.

    ಹೀಗಾಗಿ ತಂಡದಲ್ಲಿ ಧನಾತ್ಮಕ ಭಾವವನ್ನು ತುಂಬಲು ಅಗತ್ಯವಿರುವ ವಿಚಾರಗಳ ಕಡೆಗೆ ನಾವು ಗಮನ ನೀಡಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ಸಂತೋಷದಲ್ಲಿರುವ ತಂಡ ಮಾತ್ರ ಉತ್ತಮ ಪ್ರದರ್ಶನ ನೀಡಲು ಸಾಧ್ಯ ಎಂಬುದರಲ್ಲಿ ನನಗೆ ದೊಡ್ಡ ನಂಬಿಕೆ ಇದೆ. ಹಾಗಾಗಿ ನಾನು ನನ್ನ ರಾಷ್ಟ್ರೀಯ ತಂಡದೊಂದಿಗೆ ಮಾಡಲು ಪ್ರಯತ್ನಿದ ಎಲ್ಲಾ ವಿಚಾರವನ್ನು ಇಲ್ಲೂ ಮಾಡಲು ಯತ್ನಿಸುತ್ತೇನೆ" ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ಇಂಗ್ಲೆಂಡ್​ನ ಹೊಸ ಮಾದರಿ ಕ್ರಿಕೆಟ್ ಟೂರ್ನಿಯನ್ನ ಕೋವಿಡ್​ಗೆ ಹೋಲಿಸಿದ ಜೋ ರೂಟ್ ಅಜ್ಜ

    ಈ ಟೂರ್ನಿಯಲ್ಲಿ ರಾಜಸ್ತಾನ ರಾಯಲ್ಸ್​ ತಂಡದ ಪರ ಪ್ರಮುಖ ಆಟಗಾರರಾಗಿದ್ದ ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಬೆನ್ ಸ್ಟೋಕ್ಸ್​ ದ್ವಿತಿಯಾರ್ಧದಲ್ಲಿ ಟೂರ್ನಿಯಿಂದ ಹೊರಗೊಳಿದಿದ್ದಾರೆ. ಹೀಗಾಗಿ ರಾಜಸ್ತಾನ ತಂಡ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆಯಲ್ಲಿ ತಬ್ರೇಜ ಶಮ್ಸಿ ಸೇರ್ಪಡೆ ತಂಡಕ್ಕೆ ಯಾವ ರೀತಿ ಬಲ ತುಂಬಲಿದೆ ಎಂಬುದನ್ನು ಕಾದುನೋಡಬೇಕಿದೆ
    Published by:MAshok Kumar
    First published: