ಸದ್ಯ ಕೊರೋನಾ ವೈರಸ್‌ನಿಂದಾಗಿ ಐಪಿಎಲ್ -2021 ಅನ್ನು ಮುಂದೂಡಲಾಗಿದೆ. ಬಳಿಕ ರಾಜಸ್ಥಾನ್ ರಾಯಲ್ಸ್ ತಂಡದ ವತಿಯಿಂದ ಔತಣಕೂಟ ಆಯೋಜನೆ ಮಾಡಲಾಗಿತ್ತು. ಈ ವೇಳೆ ಅವರು ವಿಡಿಯೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ, ಆಟಗಾರರು ಮೋಜು ಮತ್ತು ರೌಂಡ್ ಟೇಬಲ್‌ನಲ್ಲಿ ಹೊಸ ಆಟವನ್ನು ಆಡುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ಆಟಗಾರ ರಾಹುಲ್ ತಿವಾಟಿಯಾ ಬಾಟಲಿಯೊಂದನ್ನು ಮುಂದಿಟ್ಟುಕೊಂಡು ಅದಕ್ಕೆ ಮದುವೆಯ ನಿವೇದನೆ ಮಾಡಿದ್ದಾರೆ. ಇದನ್ನು ನೋಡಿದ್ದ ಆಟಗಾರರು ತಮಾಷೆ ಮಾಡಿದ್ದಾರೆ.
ಆಟದ ನಿಯಮದ ಪ್ರಕಾರ, ಹಿನ್ನಲೆ ಸಂಗೀತವನ್ನು ಪ್ರಾರಂಭಿಸುತ್ತಾರೆ. ಆಗ ತಂಡದ ಸದಸ್ಯರು ತಮ್ಮ ಪಕ್ಕದ ವ್ಯಕ್ತಿಗೆ ದಿಂಬು ಅಥವಾ ಇನ್ನಾವುದೇ ವಸ್ತುವನ್ನು ರವಾನಿಸಲಾರಂಭಿಸುತ್ತಾರೆ. ಸಂಗೀತ ನಿಂತಾಗ ಯಾರ ಕೈಯಲ್ಲಿ ವಸ್ತುವನ್ನು ಹೊಂದಿರುತ್ತಾರೋ, ಅವರ ಚೀಟಿಯಲ್ಲಿ ಬರೆದ ಚಟುವಟಿಕೆಯನ್ನು ಮಾಡಬೇಕಾಗುತ್ತದೆ. ಅದೇ ರೀತಿ ತೆವಾಟಿಯಾ ಕೈಯಲ್ಲಿ ವಸ್ತು ಇದ್ದಾಗ ಸಂಗೀತ ನಿಂತುಹೋಯಿತು. ತದನಂತರ ತೆವಾಟಿಯಾ ಬೌಲ್ ನಲ್ಲಿದ್ದ ಚೀಟಿಯನ್ನು ನೋಡಿದಾಗ ನೀರಿನ ಲೋಟ ಅಥವಾ ಬಾಟಲ್‌ಗೆ ಪ್ರಪೋಸ್ ಮಾಡುವಂತೆ ಸೂಚಿಸಲಾಗಿರುತ್ತದೆ. ಬಾಟಲಿಯನ್ನು ಪ್ರಪೋಸ್ ಮಾಡುವ ಮೊದಲು ತೆವಾಟಿಯಾ ಇದರ ಬಗ್ಗೆ ತನ್ನ ತಂಡದ ಸದಸ್ಯರಿಂದ ಸಲಹೆ ಪಡೆದುಕೊಂಡರು. ಮೊದಮೊದಲಿಗೆ ಹಿಂದೇಟು ಹಾಕಿದ ತಿವಾಟಿಯಾ ನಂತರ, ಅವರು ತಮ್ಮ ಆಟದಲ್ಲಿ ಮುಂದುವರೆದರು. ಬಾಟಲಿಯನ್ನು ತೆಗೆದುಕೊಂಡ ಆಲ್‌ರೌಂಡರ್ ತಿವಾಟಿಯಾ, ಮೊಣಕಾಲುಗಳ ಮೇಲೆ ಕುಳಿತು "ನೀನು ತುಂಬಾ ಸುಂದರವಾಗಿದ್ದೀಯಾ; ನಾನು ನಿನ್ನನ್ನು ಪ್ರೀತಿಸುತ್ತೇನೆ; ನನ್ನನ್ನು ಮದುವೆಯಾಗುವೆಯಾ" ಎಂದು ಹೇಳಿ ಬಾಟಲಿಗೆ ಮುತ್ತಿಡುತ್ತಿದ್ದಂತೆ ಆಟಗಾರರು ನಗೆಗಡಲಲ್ಲಿ ತೇಳಿದರು.
ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳದಿಂದಾಗಿ ಐಪಿಎಲ್ ಮೆಗಾ ಈವೆಂಟ್ ಅನ್ನು ಬೋರ್ಡ್ ಆಫ್ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ ಆಡಳಿತ ಮಂಡಳಿ (ಐಪಿಎಲ್ ಜಿಸಿ) ಮುಂದೂಡಿದೆ. ಈ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ತೆವಾಟಿಯಾ ರಾಜಸ್ಥಾನ್ ರಾಯಲ್ಸ್ ತಂಡದ ಭಾಗವಾಗಿದ್ದರು. ಅಂಕಗಳ ಪಟ್ಟಿಯಲ್ಲಿ ರಾಜಸ್ಥಾನ ತಂಡ 5 ನೇ ಸ್ಥಾನದಲ್ಲಿದೆ. ತಂಡವು 7 ಪಂದ್ಯಗಳಲ್ಲಿ ಕೇವಲ 3 ಪಂದ್ಯಗಳನ್ನು ಗೆದ್ದಿತ್ತು. ಈ ಋತುವಿನಲ್ಲಿ ರಾಹುಲ್ ತಿವಾಟಿಯಾ 7 ಪಂದ್ಯಗಳನ್ನು ಆಡಿದ್ದು, 86 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರು 2 ವಿಕೆಟ್ ಕೂಡ ಕಬಳಿಸಿದ್ದರು.
𝐑𝐚𝐡𝐮𝐥 𝐓𝐞𝐰𝐚𝐭𝐢𝐚 𝐣𝐮𝐬𝐭 𝐩𝐫𝐨𝐩𝐨𝐬𝐞𝐝! 😱#RoyalsFamily | @rahultewatia02 pic.twitter.com/blpyJveitS
— Rajasthan Royals (@rajasthanroyals) May 9, 2021
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ