LIVE NOW

IPL 2019 Live Score, RR vs MI: ಸ್ಮಿತ್-ಪರಾಗ್ ಪರಾಕ್ರಮ: ಮುಂಬೈ ವಿರುದ್ಧ ರಾಜಸ್ಥಾನ್​ಗೆ ಸುಲಭ ಜಯ

ಕಳೆದ ಶನಿವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ 4 ವಿಕೆಟ್‌ಗಳ ಜಯಗಳಿಸಿರುವುದು ರಾಜಸ್ಥಾನ್‌ ತಂಡದ ಆತ್ಮ ವಿಶ್ವಾಸ ಹೆಚ್ಚಿಸಿದೆ.

Kannada.news18.com | April 20, 2019, 7:48 PM IST
facebook Twitter Linkedin
Last Updated April 20, 2019
auto-refresh
ಐಪಿಎಲ್​ನಲ್ಲಿ ಇಂದು ಎರಡು ಪಂದ್ಯಗಳು ನಡೆಯಲಿದ್ದು, ಮೊದಲ ಮ್ಯಾಚ್​ನಲ್ಲಿ ರಾಜಸ್ಥಾನ್ ರಾಯಲ್ಸ್​ ತಂಡ ಮುಂಬೈ ಇಂಡಿಯನ್ಸ್​ ಅನ್ನು ಎದುರಿಸಲಿದೆ. ಎಡರನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ಮುಖಾಮುಖಿಯಾಗಲಿದೆ.

ಮುಂಬೈ ಅನ್ನು ಎದುರಿಸಲಿರುವ ರಾಜಸ್ಥಾನ್ ರಾಯಲ್ಸ್​ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ರೋಹಿತ್ ಶರ್ಮಾ ಪಡೆಯ ವಿರುದ್ಧ ಜಯಗಳಿಸಿ ಪ್ಲೇ ಆಫ್ ಆಸೆ ಜೀವಂತವರಿಸಲು ಕಾತರಿಸುತ್ತದೆ. ಅಂಕ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ರಹಾನೆಯ ರಾಯಲ್ಸ್​ ಈ ಪಂದ್ಯವನ್ನು ಗೆಲ್ಲುವ ಮೂಲಕ ಐಪಿಎಲ್​ನಲ್ಲಿ ಮೂರನೇ ಬಾರಿ ಗೆಲುವಿನ ನಗೆ ಬೀರುವ ತಯಾರಿಯಲ್ಲಿದೆ.
Read More
7:48 pm (IST)
Load Moreಉಭಯ ತಂಡಗಳು 22 ಬಾರಿ ಮುಖಾಮುಖಿ ಆಗಿದ್ದು, ಅಂಕಿ ಅಂಶಗಳು ಸಹ ಸಮತೋಲನದಿಂದ ಕೂಡಿದೆ. ಹೀಗಾಗಿ ಸವಾಯ್​ಮಾನ್​ ಸಿಂಗ್ ಕ್ರೀಡಾಂಗಣದಲ್ಲಿ ಪ್ರಬಲ ಪೈಪೋಟಿಯನ್ನು ನಿರೀಕ್ಷಿಸಬಹುದು. ಇದುವರೆಗೆ ರಾಜಸ್ಥಾನ್ ವಿರುದ್ದ ಮುಂಬೈ 11 ಬಾರಿ ಜಯಗಳಿಸಿದರೆ, ರಾಜಸ್ಥಾನ್ 10 ಬಾರಿ ಗೆದ್ದು ಬೀಗಿದೆ.

ಕಳೆದ ಶನಿವಾರ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ವಿರುದ್ಧ 4 ವಿಕೆಟ್‌ಗಳ ಜಯಗಳಿಸಿರುವುದು ರಾಜಸ್ಥಾನ್‌ ತಂಡದ ಆತ್ಮ ವಿಶ್ವಾಸ ಹೆಚ್ಚಿಸಿದೆ. ಈ ಬಾರಿ ತವರಿನಲ್ಲೇ ರೋಹಿತ್ ಪಡೆಯನ್ನು ಎದುರಿಸುತ್ತಿರುವುದು ರಾಯಲ್ಸ್​ಗೆ ಪ್ಲಸ್​ ಪಾಯಿಂಟ್ ಎನ್ನಬಹುದು. ಆದರೆ ತವರಿನಲ್ಲಿ ಆಡಿರುವ 4 ಪಂದ್ಯಗಳಲ್ಲಿ 3 ರಲ್ಲಿ ಮುಗ್ಗರಿಸಿರುವುದು ಕೂಡ ಆರ್​ಆರ್ ಚಿಂತೆಗೆ ಕಾರಣವಾಗಿದೆ.

ರಾಜಸ್ಥಾನ್​ ತಂಡದಲ್ಲಿ ಜೋಸ್ ಬಟ್ಲರ್​ ಹೊರತು ಪಡಿಸಿ ಉಳಿದ ಬ್ಯಾಟ್ಸ್​ಮನ್​ಗಳಿಂದ ರನ್ ಪ್ರವಾಹ ಹರಿದು ಬರುತ್ತಿಲ್ಲ. ಇನ್ನು ಸಂಜು ಸ್ಯಾಮ್ಸನ್ ಹಾಗೂ ಅಜಿಂಕ್ಯ ರಹಾನೆಯಿಂದ ಸ್ಥಿರ ಪದರ್ಶನ ಮೂಡುತ್ತಿಲ್ಲ. ಹಾಗೆಯೇ ಬೌಲಿಂಗ್ ವಿಭಾಗದಲ್ಲಿ ಜೋಫ್ರಾ ಆರ್ಚರ್, ಶ್ರೇಯಸ್ ಗೋಪಾಲ್ ರಿಂದ ಉತ್ತಮ ಪ್ರದರ್ಶನ ಮೂಡಿ ಬಂದರೂ, ಉಳಿದ ಆಟಗಾರರಿಂದ ಸಾಥ್ ಸಿಗದಿರುವುದು ಮುಳುವಾಗುತ್ತಿದೆ. ಇಂತಹ ಕೆಲ ತಪ್ಪುಗಳನ್ನು ತಿದ್ದುಕೊಂಡರೆ ಮತ್ತೊಮ್ಮೆ ರಾಜಸ್ಥಾನ್​ಗೆ ಜಯ ಒಲಿಯಲಿದೆ.

ಇನ್ನು ದಿನಕಳೆದಂತೆ ಬಲಿಷ್ಠವಾಗಿ ರೂಪುಗೊಳ್ಳುತ್ತಿರುವ ಮುಂಬೈ ಇಂಡಿಯನ್ಸ್ ಉತ್ತಮ ಪ್ರದರ್ಶನ ನೀಡುತ್ತಿದೆ. ತಂಡಕ್ಕೆ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿ ಕೊಕ್ ಉತ್ತಮ ಆರಂಭಿಕ ಅಡಿಪಾಯ ಒದಗಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹಾಗೆಯೇ ಮಧ್ಯಮ ಕ್ರಮಾಂಕದಲ್ಲಿ ಕೀರನ್ ಪೊಲಾರ್ಡ್,ಹಾರ್ದಿಕ್, ಕೃನಾಲ್ ಪಾಂಡ್ಯ ಭರ್ಜರಿ ಪ್ರದರ್ಶನವನ್ನೇ ತೋರ್ಪಡಿಸುತ್ತಿದ್ದಾರೆ. ಬೌಲಿಂಗ್​ನಲ್ಲಿ ಲಸಿತ್ ಮಾಲಿಂಗ ಮುಂಬೈಗೆ ಬಲ ತುಂಬಿದ್ದು, ಅದರೊಂದಿಗೆ ಬುಮ್ರಾ, ರಾಹುಲ್ ಚಾಹರ್ ಸಹ ಎದುರಾಳಿಗಳನ್ನು ನೆಲೆಯೂರಲು ಬಿಡದಂತೆ ಕಾಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಮುಂಬೈ ಇಂಡಿಯನ್ಸ್​ ತಂಡ ಇಂತಿದೆ:
ರೋಹಿತ್ ಶರ್ಮಾ(ನಾಯಕ), ಕ್ವಿಂಟನ್ ಡಿ ಕೊಕ್ , ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ಬೆನ್ ಕಟ್ಟಿಂಗ್, ರಾಹುಲ್ ಚಾಹರ್, ಲಸಿತ್ ಮಾಲಿಂಗ, ಜಸ್​ಪ್ರೀತ್ ಬುಮ್ರಾ, ಮಯಾಂಕ್ ಮಾರ್ಕಂಡೆ 

ರಾಜಸ್ಥಾನ್ ರಾಯಲ್ಸ್ ತಂಡ ಇಂತಿದೆ:
ಸ್ಟೀವ್ ಸ್ಮಿತ್ (ನಾಯಕ), ಅಜಿಂಕ್ಯ ರಹಾನೆಸಂಜು ಸ್ಯಾಮ್ಸನ್, ಬೆನ್ ಸ್ಟೋಕ್ಸ್, ಆಷ್ಟನ್ ಟರ್ನರ್, ಸ್ಟುವರ್ಟ್ ಬಿನ್ನಿ, ರಿಯಾನ್ ಪರಾಗ್, ಶ್ರೇಯಸ್ ಗೋಪಾಲ್, ಜೋಫ್ರಾ ಆರ್ಚರ್, ಧವಲ್ ಕುಲಕರ್ಣಿ, ಜಯದೇವ್ ಉನಾದ್ಕಟ್ 
corona virus btn
corona virus btn
Loading