ತನ್ನ ಕೋಚ್ ಮಗಳನ್ನೇ ಮದುವೆಯಾದ ರೈನಾ; ಇಲ್ಲಿದೆ ಸುರೇಶ್-ಪ್ರೀಯಾಂಕ ಪ್ರೇಮ್ ಕಹಾನಿ

ರೈನಾರನ್ನು ಮದುವೆಯಾದ ಬಳಿಕ ಪ್ರಿಯಾಂಕ ಭಾರತದಲ್ಲೇ ನೆಲೆಸಿದ್ದಾರೆ. ಅಲ್ಲದೇ ಇಲ್ಲಿದ್ದುಕೊಂಡೇ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಿಷ್ಟೆ ಅಲ್ಲದೆ ರೆಡಿಯೋ ಸ್ಟೇಷನ್​​ವೊಂದನ್ನು ನಡೆಸುತ್ತಿರುವ ಪ್ರಿಯಾಂಕ ಅವರು ಹೆಣ್ಮು ಮಕ್ಕಳ ದನಿಯಾಗಿದ್ದಾರೆ.

ಸುರೇಶ್ ರೈನಾ ಹಾಗೂ ಅವರ ಹೆಂಡತಿ ಪ್ರಿಯಾಂಕ

ಸುರೇಶ್ ರೈನಾ ಹಾಗೂ ಅವರ ಹೆಂಡತಿ ಪ್ರಿಯಾಂಕ

 • Share this:
  ಟೀಂ ಇಂಡಿಯಾದ ಕ್ಯೂಟ್ ಜೋಡಿಗಳಲ್ಲಿ ಸುರೇಶ್ ರೈನಾ ಹಾಗೂ ಪ್ರಿಯಾಂಕ ಚೌಧರಿ ಕೂಡ ಒಬ್ಬರು. ರೈನಾ 2015ರ ಏಪ್ರಿಲ್​​ 3 ರಂದು ತನ್ನ ಬಾಲ್ಯಕಾಲದ ಸಖಿ ಪ್ರಿಯಾಂಕ ಚೌಧರಿಯನ್ನ ವರಿಸಿ ಮದುವೆಯಾದರು. ಆದರೆ, ರೈನಾ -ಪ್ರಿಯಾಂಕ ಲವ್​ಸ್ಟೋರಿ ಬಗ್ಗೆ ಮತ್ತು ಪ್ರೀಯಾಂಕ ಕುರಿತು ಹೆಚ್ಚಿನವರಿಗೆ ತಿಳಿದಿಲ್ಲ. ಈ ಕುರಿತ ಮಾಹಿತಿ ಇಲ್ಲಿದೆ.

  ಕ್ರಿಕೆಟರ್ ಆಗುವ ಕನಸು ಕಂಡಿದ್ದ ರೈನಾ ಅವರು ಮೊದಲು ಕೋಚಿಂಗ್ ಪಡೆದಿದ್ದು ಪ್ರಿಯಾಂಕ ಅವರ ತಂದೆ ತೇಜ್​ಪಾಲ್ ಚೌಧರಿ ಬಳಿ. ತನ್ನ ಕ್ರಿಕೆಟ್ ಗುರುವಿನ ಮನೆಯಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ರೈನಾ ಅವರು ಮೊಟ್ಟ ಮೊದಲ ಬಾರಿಗೆ ಪ್ರಿಯಾಂಕ ಅವರನ್ನು ನೋಡಿದರಂತೆ. ಅಲ್ಲೆ ಲವ್ ಅಟ್ ಫಸ್ಟ್​​ಸೈಟ್ ಎಂಬ ಹಾಗೆ ಇಬ್ಬರು ಕೂಡ ಒಂದೇ ನೋಟದಲ್ಲಿ ಪ್ರೇಮಾಂಕುರಕ್ಕೆ ಬಂಧಿಯಾದರು.

  ಧೋನಿಯನ್ನು ಗ್ರೇಟ್ ಫಿನಿಶರ್ ಮಾಡಿದ್ದೇ ನಾನು ಎಂದ ಚಾಪೆಲ್​ಗೆ ಹರ್ಭಜನ್‌ ಸಿಂಗ್ ಖಡಕ್ ತಿರುಗೇಟು

  ಅಲ್ಲಿಂದ ಶುರುವಾದ ಡೇಟಿಂಗು, ಚಾಟಿಂಗೂ ಇಬ್ಬರನ್ನ ಒಂದಾಗಿಸಿ, ದಾಂಪತ್ಯ ಜೀವನಕ್ಕೆ ದಾರಿ ಮಾಡಿಕೊಟ್ಟಿತು. ಇದು ಇವರ ಲವ್​ ಸ್ಟೋರಿಯಾದರೆ, ಪ್ರೀಯಾಂಕ ಅವರ ಬಗ್ಗೆ ನೀವು ತಿಳಿಯಲೇ ಬೇಕಾದ ಕೆಲ ಸಂಗತಿಗಳಿವೆ.

  ಪ್ರಿಯಾಂಕ ಚೌಧರಿ ಅವರು ಬಿಟೆಕ್ ಪದವಿ ವಿಜೇತೆ. ಉತ್ತರ ಪ್ರದೇಶದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ಒಂದರಲ್ಲಿ ಬಿಟೆಕ್ ಪದವಿ ಪಡೆದ ಪ್ರಿಯಾಂಕ ನೆದರ್​​​ಲೆಂಡ್​ನಲ್ಲಿ ನೆಲೆಸಿದ್ದರು. ಅಲ್ಲಿಯೇ ಖಾಸಗಿ ಬ್ಯಾಂಕ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹೀಗಿದ್ದರು ರೈನಾ ಅವರ ಎಲ್ಲಾ ವಿಷಯಗಳಲ್ಲೂ ಪ್ರಿಯಾಂಕ ಪಾಲು ಬಹುದೊಡ್ದುದು. ಅದೇನೇ ನಿರ್ಧಾರ ತೆಗೆದುಕೊಳ್ಳಲಿದ್ದರು ರೈನಾ ಅವರು ಪ್ರಿಯಾಂಕ ಮಾತಿಗೆ ಹೆಚ್ಚು ಒತ್ತು ನೀಡುತ್ತಾರಂತೆ.

  ಮತ್ತೊಮ್ಮೆ ತೆಲುಗು ಹಾಡಿಗೆ ಹೆಜ್ಜೆ ಹಾಕಿದ ಡೇವಿಡ್ ಕುಟುಂಬ; ಟಿಕ್ ಟಾಕ್ ವಿಡಿಯೋ ವೈರಲ್​​

  ರೈನಾರನ್ನು ಮದುವೆಯಾದ ಬಳಿಕ ಪ್ರಿಯಾಂಕ ಭಾರತದಲ್ಲೇ ನೆಲೆಸಿದ್ದಾರೆ. ಅಲ್ಲದೇ ಇಲ್ಲಿದ್ದುಕೊಂಡೇ ತಮ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಿಷ್ಟೆ ಅಲ್ಲದೆ ರೆಡಿಯೋ ಸ್ಟೇಷನ್​​ವೊಂದನ್ನು ನಡೆಸುತ್ತಿರುವ ಪ್ರಿಯಾಂಕ ಅವರು ಹೆಣ್ಮು ಮಕ್ಕಳ ದನಿಯಾಗಿದ್ದಾರೆ. ಹಿಂದುಳಿದ ಪ್ರದೇಶಗಳ ಹೆಣ್ಣು ಮಕ್ಕಳಿಗೆ ಉಚಿತ ಆರೋಗ್ಯ ಸಲಹೆ, ತಪಾಸಣೆ ನಡೆಸುವಂತ ಕಾರ್ಯಕ್ರಮಗಳನ್ನು ನಡೆಸಿ ಮಾದರಿಯಾಗಿದ್ದಾರೆ.

  First published: