Rahul Dravid: ರಾಹುಲ್ ದ್ರಾವಿಡ್ ಸರಳತೆಗೆ ಇನ್ನೊಂದು ಸಾಕ್ಷಿ! ಪಕ್ಕದಲ್ಲಿ ಕೂತೋರಿಗೆ ಇವರೇ ಅವರಂತ ಗೊತ್ತೇ ಆಗಿಲ್ಲ!

ಅವರ ಪಕ್ಕದ್ದಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿದ್ದ ಹುಡುಗಿಗೆ ಪಕ್ಕದಲ್ಲಿ ಕುಳಿತವರು ಯಾರು ಎಂಬುದೇ ಗೊತ್ತಾಗಲಿಲ್ಲ. ಕಾರ್ಯಕ್ರಮದಲ್ಲಿ ಅಷ್ಟು ಸರಳವಾಗಿದ್ದರು ರಾಹುಲ್ ದ್ರಾವಿಡ್ ಎಂದುಕಾಶಿ ಎಂಬ ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ.

ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್

 • Share this:
  ಕ್ರಿಕೆಟ್ ಮೈದಾನದಲ್ಲಿ ‘ದಿ ವಾಲ್’ (The Wall) ಎಂದರೆ ಯಾರು ಅಂತಂದ್ರೆ ಯಾರು ಬೇಕಾದ್ರೂ ರಾಹುಲ್ ದ್ರಾವಿಡ್ ಅಂತಾನೇ ಹೇಳ್ತಾರೆ. ಅಷ್ಟು ಫೇಮಸ್, ಅಷ್ಟು ಡೀಸೆಂಟ್ ಆಗಿರುವ ರಾಹುಲ್ ದ್ರಾವಿಡ್ (Rahul Dravid )ಅವರ ಆಟ ನೋಟ ವ್ಯಕ್ತಿತ್ವನ್ನೆಲ್ಲ ಜಗತ್ತೇ ಮೆಚ್ಚಿಬಿಟ್ಟಿದೆ.  ಅವರ ಇನ್ನೊಂದು ಅವತಾರದಲ್ಲಿ ‘ಇಂದಿರಾನಗರ ಕಾ ಗುಂಡಾ’ (Indiranagar Ka Gunda) ಅವರನ್ನೂ ಸಹ ನೋಡಿದ್ದೀರಿ! ಇದೀಗ ಇಂತಹುದೇ ಇನ್ನೊಂದು ವಿಷಯ ಸಖತ್ ಸುದ್ದಿ ಮಾಡುತ್ತಿದೆ. ಇದು ನಿಮ್ಮನ್ನು ಮತ್ತೊಮ್ಮೆ ರಾಹುಲ್ ದ್ರಾವಿಡ್ ಎಂಬ ದಿ ಬೆಸ್ಟ್ ಕ್ರಿಕೆಟಿಗರನ್ನು ಇಷ್ಟಪಡುವಂತೆ ಮಾಡುವುದು ಪಕ್ಕಾ!

  ಬೆಂಗಳೂರಿನಲ್ಲಿ ನಡೆದ ಪುಸ್ತಕ ಕಾರ್ಯಕ್ರಮವೊಂದರಲ್ಲಿ ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ತಮ್ಮ ವಿನಮ್ರ ಸ್ವಭಾವದಿಂದ ಹೃದಯ ಗೆದ್ದಿದ್ದಾರೆ. ಈವೆಂಟ್‌ನಲ್ಲಿ ರಾಹುಲ್ ದ್ರಾವಿಡ್ ಅವರ‌ ಶಾಂತ ಮತ್ತು ಡೌನ್ ಟು ಅರ್ಥ್ ನಡವಳಿಕೆಯ ಕುರಿತು ಕಾಶಿ ಎಂಬುವವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

  ಜಿಆರ್ ವಿಶ್ವನಾಥ್ ಅವರ ಪುಸ್ತಕ ಬಿಡುಗಡೆಯಲ್ಲಿ ಆಗಿದ್ದೇನು?
  ಮಾಜಿ ಕ್ರಿಕೆಟಿಗ ಜಿಆರ್ ವಿಶ್ವನಾಥ್ ಅವರ ಹೊಸ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಆದ ಈ ಘಟನೆ ಸಖತ್ ಸುದ್ದಿ ಮಾಡುತ್ತಿದೆ. ಮಾಜಿ ಕ್ರಿಕೆಟಿಗ ಜಿಆರ್ ವಿಶ್ವನಾಥ್ ಅವರ ಹೊಸ ಪುಸ್ತಕವಾದ Wrist Assured ಕುರಿತು ಮಾತನಾಡಲು ಬೆಂಗಳೂರಿನ ಪುಸ್ತಕದಂಗಡಿಯೊಂದರಲ್ಲಿ ನಡೆದ ಸಮಾರಂಭದಲ್ಲಿ ರಾಹುಲ್ ದ್ರಾವಿಡ್ ಆಗಮಿಸಿದ್ದರು. ಕಾರ್ಯಕ್ರಮದ ವೇಳೆ ರಾಹುಲ್ ದ್ರಾವಿಡ್ ಮಾಸ್ಕ್ ಧರಿಸಿ ಜನಸಾಮಾನ್ಯರಲ್ಲಿ ಜನಸಾಮಾನ್ಯರಂತೆ ಕಾರ್ಯಕ್ರಮದಲ್ಲಿ ಸದ್ದಿಲ್ಲದೆ ಹಿಂದೆ ಕುಳಿತು ವೀಕ್ಷಿಸುತ್ತಿದ್ದರು.  ಎಷ್ಟು ಸರಳವಾಗಿದ್ದರು ಅಂದ್ರೆ..
  ಅವರು ಮಾಸ್ಕ್ ಧರಿಸಿ ಒಬ್ಬರೇ ನಡೆದರು. ರಾಮ್ ಗುಹಾ ಅವರಿಗೆ ನಮಸ್ಕಾರ ಮಾಡಿದರು. ಆಗ ನಾನು ಮತ್ತು ನನ್ನೊಡನೆ ಇದ್ದ ಸಮೀರ್​ಗೆ ಅವರೇ ರಾಹುಲ್ ದ್ರಾವಿಡ್ ಎಂಬುದು ಅರಿವಾಯಿತು. ಅವರು ಸಂತೋಷದಿಂದ ಕೊನೆಯ ಸಾಲಿನಲ್ಲಿ ಯಾವುದೇ ಗಡಿಬಿಡಿಯಿಲ್ಲದೆ ಕುಳಿತುಕೊಂಡರು.

  ಇದನ್ನೂ ಓದಿ: Worlds Richest Athlete: ಇವರೇ ವಿಶ್ವದ ಶ್ರೀಮಂತ ಅಥ್ಲೀಟ್‌ಗಳು, ಭಾರತದಲ್ಲಿ ಕೊಹ್ಲಿ ಒಬ್ಬರೇ ಕಿಂಗ್

  ಅವರ ಪಕ್ಕದ್ದಲ್ಲಿ ಕುಳಿತು ಕಾರ್ಯಕ್ರಮ ವೀಕ್ಷಿಸುತ್ತಿದ್ದ ಹುಡುಗಿಗೆ ಪಕ್ಕದಲ್ಲಿ ಕುಳಿತವರು ಯಾರು ಎಂಬುದೇ ಗೊತ್ತಾಗಲಿಲ್ಲ. ಕಾರ್ಯಕ್ರಮದಲ್ಲಿ ಅಷ್ಟು ಸರಳವಾಗಿದ್ದರು ರಾಹುಲ್ ದ್ರಾವಿಡ್ ಎಂದುಕಾಶಿ ಎಂಬ ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದಾರೆ.


  ಜನರಿಗೆ ಆಟೋಗ್ರಾಫ್
  ಮಾಜಿ ಕ್ರಿಕೆಟಿಗ ಜಿಆರ್ ವಿಶ್ವನಾಥ್ ಕಾರ್ಯಕ್ರಮಕ್ಕೆ ಆಗಮಿಸಿ ಸಭಿಕರ ನಡುವೆ ಸುಮ್ಮನೆ ಕುಳಿತು ವೀಕ್ಷಿಸುತ್ತಿದ್ದ ರಾಹುಲ್ ದ್ರಾವಿಡ್ ಅವರನ್ನು ಗುರುತಿಸಿದ ನಂತರ, ದ್ರಾವಿಡ್ ಇಷ್ಟವಿಲ್ಲದೆ ಜನರನ್ನು ಸ್ವಾಗತಿಸಲು ವೇದಿಕೆಯ ಬಳಿ ಬಂದರು. ಜನರಿಗೆ ಆಟೋಗ್ರಾಫ್ ನೀಡಿದರು. ಆದರೆ ರಾಹುಲ್ ದ್ರಾವಿಡ್ ತಮ್ಮ ಪಾಡಿಗೆ ತಾವು ಸರಳವಾಗಿ ಇದ್ದುಬಿಡುವ ರೀತಿಯೇ ಇದ್ದರು ಎಂದು ಕಾಶಿ ಅವರು ಚಿತ್ರಗಳ ಸಮೇತ ಟ್ವೀಟ್ ಮಾಡಿದ್ದಾರೆ.

  ಇದನ್ನೂ ಓದಿ: Team India: ವಿಶ್ವಕಪ್​ಗೂ ಮುನ್ನ ಟಿ20 ಸರಣಿ ಆಡಲಿದೆ ಟೀಂ ಇಂಡಿಯಾ, ಆಸ್ಟ್ರೇಲಿಯಾ ನಡುವಿನ ಸರಣಿಯ ವೇಳಾಪಟ್ಟಿ ಬಿಡುಗಡೆ

  ನೆಟಿಜನ್‌ಗಳು ದ್ರಾವಿಡ್ ಅವರ ವಿನಮ್ರ ನಡವಳಿಕೆಯನ್ನು ಭರಪೂರ ಹೊಗಳಿದ್ದಾರೆ. ಇಂತಹ ವಿನಮ್ರತೆ ಮತ್ತು ಸರಳತೆಯ ಕಾರಣಕ್ಕೇ ರಾಹುಲ್ ದ್ರಾವಿಡ್ ಅವರು ತಮ್ಮ ನೆಚ್ಚಿನ ಕ್ರಿಕೆಟಿಗ ಎಂದು ಹಲವರು ಬರೆದುಕೊಂಡಿದ್ದಾರೆ.
  Published by:guruganesh bhat
  First published: