Rahul Dravid| ಕೊನೆಗೂ ಭಾರತ ತಂಡದ ಕೋಚ್​ ಆಗಲು ಒಪ್ಪಿದ ರಾಹುಲ್ ಡ್ರಾವಿಡ್​; T20 ವಿಶ್ವಕಪ್ ನಂತರ ಅಧಿಕಾರ!

ಭಾರತ ಕ್ರಿಕೆಟ್​ ತಂಡಕ್ಕೆ ಕೋಚ್​ ಆಗುವ ಸಂಬಂಧ ರಾಹುಲ್ ದ್ರಾವಿಡ್ ಈಗಾಗಲೇ ಬಿಸಿಸಿಐ ಕಾರ್ಯದರ್ಶಿ ಜೈ ಶಾ  ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ  ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ರಾಹುಲ್ ದ್ರಾವಿಡ್.

ರಾಹುಲ್ ದ್ರಾವಿಡ್.

  • Share this:
    ಟಿ-20 ವಿಶ್ವಕಪ್​ (T20 World Cup) ನಂತರ ಭಾರತದ ಕೋಚ್​ ಯಾರಾಗಲಿದ್ದಾರೆ? ಎಂಬ ಕುರಿತು ಅನೇಕ ಊಹಾಪೋಹಗಳು ಮನೆ ಮಾಡಿದ್ದವು. ಆದರೆ, ರಾಹುಲ್ ದ್ರಾವಿಡ್ (Rahul Dravid)​ ಭಾರತ ತಂಡದ ಹಂಗಾಮಿ ಕೋಚ್​ (Indian Cricket Team Coach) ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ತಿಳಿದುಬಂದಿರುವ ಅನೇಕ ಕುತೂಹಲಕಾರಿ ವರದಿಗಳ ಮಾಹಿತಿಯ ಪ್ರಕಾರ ವಿಶ್ವಕಪ್ ನಂತರ ಮಾಜಿ ನಾಯಕ ರಾಹುಲ್ ದ್ರಾವಿಡ್​ ಭಾರತ ಪುರುಷ ತಂಡಕ್ಕೆ ಪೂರ್ಣ ಪ್ರಮಾಣದ ಮುಖ್ಯ ಕೋಚ್ ಆಗಿ ನೇಮಕವಾಗಲಿದ್ದಾರೆ. ಈ ಬಗೆಗಿನ ಬಿಸಿಸಿಐ (BCCI) ಕೋರಿಕೆಗೆ ದ್ರಾವಿಡ್​ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ಅಂಡರ್​ 19 ರಾಷ್ಟ್ರೀಯ (Under-19 Team) ತಂಡದ ಕೋಚ್​ ಆಗಿದ್ದ ರಾಹುಲ್ ದ್ರಾವಿಡ್​ ಮತ್ತೊಂದು ಹೊಸ ಇನ್ನಿಂಗ್ಸ್​ ಆರಂಭವಾಗುವುದು ಖಚಿತವಾದಂತಾಗಿದೆ.

    ಈ ವರ್ಷದ ಟಿ-20 ವಿಶ್ವಕಪ್​ನೊಂದಿಗೆ ಪ್ರಸ್ತುತ ಕೋಚ್​ ಆಗಿರುವ ರವಿಶಾಸ್ತ್ರಿ ಅವರ ಒಪ್ಪಂದ ಅಂತ್ಯವಾಗಲಿದೆ. ಹೀಗಾಗಿ ಅವರ ಸ್ಥಾನಕ್ಕೆ ಹೊಸ ಕೋಚ್​ ನೇಮಕ ಮಾಡಬೇಕಿರುವ ಅನಿವಾರ್ಯತೆ ಬಿಸಿಸಿಐ ಎದುರಿದೆ. ಹೀಗಾಗಿ ಈ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಅವರೇ ಸೂಕ್ತ ಎಂಬುದು ಬಿಸಿಸಿಐ ನಿರ್ಧಾರ. ಆದರೆ, ಇಷ್ಟು ದಿನ ಹಿರಿಯ ಪುರುಷ ತಂಡಕ್ಕೆ ಕೋಚ್ ಆಗಲು ಒಪ್ಪದ ರಾಹುಲ್ ದ್ರಾವಿಡ್ ಕೊನೆಗೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

    ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಯ ಮುಖ್ಯಸ್ಥರಾಗಿರುವ ರಾಹುಲ್ ದ್ರಾವಿಡ್ ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ನಡೆಯಲಿರುವ ಟಿ-20 ವಿಶ್ವಕಪ್ ನಂತರ ಭಾರತ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

    "ಭಾರತ ಪುರುಷ ಹಿರಿಯರ ತಂಡದ ತರಬೇತುದಾರನಾಗಲು ಕೊನೆಗೂ ರಾಹುಲ್ ದ್ರಾವಿಡ್ ಒಪ್ಪಿಗೆ ಸೂಚಿಸಿದ್ದಾರೆ. ವಿಕ್ರಮ್ ರಾಥೋಡ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಮುಂದುವರೆಯಲಿದ್ದು, ಉಳಿದಿರುವ ಇತರ ಸ್ಥಾನಗಳಿಗೆ ಸೂಕ್ತ ವ್ಯಕ್ತಿಗಳನ್ನು ನೇಮಕ ಮಾಡಲಾಗುವುದು. ಪ್ರಸ್ತುತ ಭಾರತೀಯ ತಂಡವು ಯುವಕರೊಂದಿಗೆ ಪರಿವರ್ತನೆಯ ಸ್ಥಿತಿಯಲ್ಲಿದೆ. ಅಲ್ಲದೆ, ಈ ಎಲ್ಲಾ ಯುವ ಆಟಗಾರರ ಜೊತೆಗೂ ರಾಹುಲ್ ದ್ರಾವಿಡ್ ಅಂಡರ್​-19 ಕೋಚ್ ಆಗಿದ್ದಾಗ ಕೆಲಸ ಮಾಡಿದ್ದಾರೆ.

    ಇದನ್ನೂ ಓದಿ: Kolkata Knight Riders| 2008 ರಿಂದ 2021ರವರೆಗಿನ ಕೋಲ್ಕತ್ತಾ ನೈಟ್​ ರೈಡರ್ಸ್​ ಐಪಿಎಲ್ ಜರ್ನಿ ಹೀಗಿದೆ!

    ಹೀಗಾಗಿ ಭವಿಷ್ಯದಲ್ಲಿ ವಿಶ್ವ ಕ್ರಿಕೆಟ್​ನಲ್ಲಿ ಭಾರತ ಮತ್ತಷ್ಟು ಉನ್ನತ ಸ್ಥಾನಕ್ಕೆ ಏರಲು ಮತ್ತು ಉತ್ತಮ ಫಲಿತಾಂಶಗಳನ್ನು ಪಡೆಯಲು ಕೋಚ್ ಸ್ಥಾನಕ್ಕೆ ರಾಹುಲ್ ದ್ರಾವಿಡ್​ ಅವರ ಆಯ್ಕೆ ಅತ್ಯುತ್ತಮವಾದದ್ದು" ಎಂದು ಎಎನ್ಐ ಸುದ್ದಿ ಮೂಲವೊಂದನ್ನು ಉಲ್ಲೇಖಿಸಿದೆ.

    "ಭಾರತ ಕ್ರಿಕೆಟ್​ ತಂಡಕ್ಕೆ ಕೋಚ್​ ಆಗುವ ಸಂಬಂಧ ರಾಹುಲ್ ದ್ರಾವಿಡ್ ಈಗಾಗಲೇ ಬಿಸಿಸಿಐ ಕಾರ್ಯದರ್ಶಿ ಜೈ ಶಾ  ಮತ್ತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ  ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಕೋಚ್​ ಸ್ಥಾನಕ್ಕೆ ತಾನೇ ಸೂಕ್ತ ಎಂಬುದು ದ್ರಾವಿಡ್​ಗೆ ಮನವರಿಕೆಯಾಗಿದೆ. ಹೀಗಾಗಿ ಹಿರಿಯ ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸಲು ಅವರು ಉತ್ಸುಕರಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಭವಿಷ್ಯದಲ್ಲಿ ಇನ್ನೂ ಉತ್ತಮ ಸಾಧನೆ ಮಾಡಲಿದೆ" ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: David Warner| ಸಿಎಸ್​ಕೆ ಜರ್ಸಿ ಧರಸಿ ಪೋಟೋ ಹಂಚಿಕೊಂಡ ವಾರ್ನರ್​; CSK ಪಾಲಾಗಲಿದ್ದಾರಾ SRH ನಾಯಕ?

    ಅಕ್ಟೋಬರ್ 24 ರಂದು ದುಬೈನಲ್ಲಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯುವ ಮೂಲಕ ಭಾರತ ತನ್ನ ಟಿ-20 ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಮುಂಬರುವ ಟಿ-20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಸಹ ನಾಯಕತ್ವ ಸ್ಥಾನದಿಂದ ಕೆಳಗಿಳಿಯಲಿದ್ದಾರೆ. ಹೀಗಾಗಿ ರಾಹುಲ್ ದ್ರಾವಿಡ್ ಹೊಸ ನಾಯಕನ ಜೊತೆಗೆ ಕಾರ್ಯ ನಿರ್ವಹಿಸಲಿದ್ದಾರೆ.
    Published by:MAshok Kumar
    First published: