ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು 'ಮೆನ್ ಇನ್ ಬ್ಲೂ' ಟೀಮ್ ಇಂಡಿಯಾದ (Team India) ಮುಖ್ಯ ಕೋಚ್ ಪಾತ್ರದ ಬಗ್ಗೆ ಆಸಕ್ತಿದಾಯಕ ಅಂಶವನ್ನು ಹಂಚಿಕೊಂಡಿದ್ದಾರೆ. ರಾಹುಲ್ ದ್ರಾವಿಡ್ (Rahul Dravid) ತಮ್ಮ ಅವಧಿಯ ಆರಂಭದಲ್ಲಿ 6 ವಿಭಿನ್ನ ನಾಯಕರೊಂದಿಗೆ (Team India Captains) ಕೆಲಸ ಮಾಡುವುದನ್ನು ನಿರೀಕ್ಷಿಸಿರಲಿಲ್ಲ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಐದನೇ ಮತ್ತು ಅಂತಿಮ T20 ಪಂದ್ಯದ ನಂತರ ಮಾತನಾಡಿದ ರಾಹುಲ್ ದ್ರಾವಿಡ್, 8 ತಿಂಗಳಲ್ಲಿ ಭಾರತದ 6 ನಾಯಕರ ಜೊತೆ ಕೆಲಸ ಮಾಡಿರುವ ಸಂದರ್ಭವನ್ನು ನೆನೆಸಿಕೊಂಡಿದ್ದಾರೆ.
8 ತಿಂಗಳಲ್ಲಿ ರಾಹುಲ್ ದ್ರಾವಿಡ್ ಕೆಲಸ ಮಾಡಿರುವ 6 ನಾಯಕರು ಯಾರೆಲ್ಲ? ಇಲ್ಲಿದೆ ಪಟ್ಟಿ
ರಾಹುಲ್ ದ್ರಾವಿಡ್ ಕಳೆದ ವರ್ಷ ನ್ಯೂಜಿಲೆಂಡ್ ವಿರುದ್ಧದ ಸ್ವದೇಶಿ ಸರಣಿಯ ಸಮಯದಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಮುಖ್ಯ ತರಬೇತುದಾರರಾಗಿ ತಮ್ಮ ಕೆಲಸವನ್ನು ಪ್ರಾರಂಭಿಸಿದರು. ರೋಹಿತ್ ಶರ್ಮಾ ನಂತರ ರಾಹುಲ್ ದ್ರಾವಿಡ್ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಬ್ ಪಂತ್ ಮತ್ತು ಶಿಖರ್ ಧವನ್ ಮುಂತಾದವರ ಜೊತೆ ಕೆಲಸ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಭಾರತವನ್ನು ಮೊದಲ ಬಾರಿಗೆ ಮುನ್ನಡೆಸುತ್ತಿದ್ದು, ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬರುವ ಐರ್ಲೆಂಡ್ ಪ್ರವಾಸದಲ್ಲಿ ತಂಡದ ನಾಯಕತ್ವ ವಹಿಸಲು ಸಿದ್ಧರಾಗಿದ್ದಾರೆ.
ಮುಖ್ಯ ತರಬೇತುದಾರರಾಗಿ ನಾನು ಜವಾಬ್ದಾರಿ ವಹಿಸಿಕೊಂಡ ನಂತರ ಕಳೆದ 8 ತಿಂಗಳುಗಳಲ್ಲಿ 6 ನಾಯಕರನ್ನು ನೋಡಿದೆ. ಆದರೆ ಹೀಗೆ 8 ನಾಯಕರನ್ನು ನಾನು ಈ ಅವಧಿಯಲ್ಲಿ ನೋಡುತ್ತೇವೆ ಎಂದುಕೊಂಡಿರಲಿಲ್ಲ ಎಂದಿದ್ದಾರೆ ರಾಹುಲ್ ದ್ರಾವಿಡ್.
ಐಪಿಎಲ್ನಿಂದ ತುಂಬಾ ಸಹಾಯವಾಗಿದೆ ಐಪಿಎಲ್ ಸಮಯದಲ್ಲಿ ನಮ್ಮಲ್ಲಿರುವ ವೇಗದ ಬೌಲಿಂಗ್ ಪ್ರತಿಭೆ ವಿಶೇಷವಾಗಿತ್ತು. ಅಲ್ಲಿ ಬಹಳಷ್ಟು ಯುವಕರು ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶವನ್ನು ಪಡೆದರು. ಅವರಲ್ಲಿ ಬಹಳಷ್ಟು ಮಂದಿ ಉತ್ತಮ ಅವಕಾಶ ಪಡೆದುಕೊಂಡರು. ಇದು ಭಾರತೀಯ ಕ್ರಿಕೆಟ್ಗೆ ನಿಜವಾಗಿಯೂ ಉತ್ತಮ ಸಮಯ ಬರುವ ಸೂಚನೆ ಎಂದು ರಾಹುಲ್ ದ್ರಾವಿಡ್ ತಿಳಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಗೆ ಧನ್ಯವಾದ ಸೂಚಿಸಿದ್ದಾರೆ.
ಐಪಿಎಲ್ನಂತಹ ಪಂದ್ಯಾವಳಿಗಳಿಂದ ಭಾರತ ಕ್ರಿಕೆಟ್ ತಂಡಕ್ಕೆ ಇನ್ನಷ್ಟು ನಾಯಕರನ್ನು, ಉತ್ತಮ ಆಟಗಾರರನ್ನು ರಚಿಸಲು ಸಾಧ್ಯವಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.
ಟೀಂ ಇಂಡಿಯಾ ಗೆಲುವಿಗೆ ವರುಣನ ಅಡ್ಡಿ, ಭಾರತ - ಆಫ್ರಿಕಾ ಪಂದ್ಯ ರದ್ದು ಭಾರತ ಮತ್ತು ದಕ್ಷಿಣ ಆಫ್ರಿಕಾ (IND vs SA) ನಡುವಿನ ಐದನೇ ಹಾಗೂ ಕೊನೆಯ ಟಿ20 ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ ಉಭಯ ತಂಡಗಳು ಈಗಾಗಲೇ ಸರಣಿಯಲ್ಲಿ 2-2ರ ಸಮಬಲ ಸಾದಿಸಿರುವುದರಿಂದ ಸರಣಿಯನ್ನು ಎರಡೂ ತಂಡಗಳಿಗೂ ಹಂಚಿಕೆ ಮಾಡಲಾಗಿದೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಬೇಕಿತ್ತು. ಆದರೆ ಬೆಂಗಳೂರಿನಲ್ಲಿ ಸತತ ಮಳೆಯ ಕಾರಣದಿಂದಾಗಿ ಪಂದ್ಯವನ್ನು ಅಧಿಕೃತವಾಗಿ ರದ್ದು ಮಾಡಿರುವುದಾಗಿ ಬಿಸಿಸಿಐ ತಿಳಿಸಿದೆ. ಇನ್ನು, ಸತತ 2 ಗೆಲುವುಗಳನ್ನು ಕಂಡಿರುವ ರಿಷಭ್ ಪಂತ್ (Rishabh pant) ನಾಯಕತ್ವದ ಟೀಂ ಇಂಡಿಯಾ ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಳುವ ತವಕದಲ್ಲಿತ್ತು.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ