Rahul Dravid- ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ

India Cricket Team’s New Coach- ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದಾರೆ. ಕ್ರಿಕೆಟ್ ಅಡ್ವೈಸರಿ ಕಮಿಟಿ ಒಮ್ಮತದಿಂದ ದ್ರಾವಿಡ್ ಅವರನ್ನ ಆಯ್ಕೆ ಮಾಡಿದೆ.

ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್

 • Share this:
  ನವದೆಹಲಿ, ನ. 03: ನಿರೀಕ್ಷೆಯಂತೆ ಕನ್ನಡಿಗ ರಾಹುಲ್ ದ್ರಾವಿಡ್ (Rahul Dravid) ಅವರು ಟೀಮ್ ಇಂಡಿಯಾದ ನೂತನ ಮುಖ್ಯ ಕೋಚ್ (New Coach of Indian Cricket Team) ಆಗಿದ್ದಾರೆ. ಈ ಟಿ20 ವಿಶ್ವಕಪ್ (T20 World Cup) ಬಳಿಕ ರಾಹುಲ್ ದ್ರಾವಿಡ್ ಕೋಚ್ ಆಗಿ ಕರ್ತವ್ಯ ಶುರು ಮಾಡಲಿದ್ದಾರೆ. ಸುಲಕ್ಷಣಾ ನಾಯಕ್ (Sulakshana Naik) ಮತ್ತು ಆರ್ ಪಿ ಸಿಂಗ್ (R P Singh) ಅವರಿರುವ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ ಇಂದು ಬುಧವಾರ ರಾಹುಲ್ ದ್ರಾವಿಡ್ ಅವರನ್ನ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಲು ಒಮ್ಮತದ ನಿರ್ಧಾರ ಕೈಗೊಂಡಿತು.

  ಸದ್ಯ, ಮತ್ತೊಬ್ಬ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ (Ravi Shastri) ಅವರು ಭಾರತ ತಂಡದ ಕೋಚ್ ಆಗಿದ್ದಾರೆ. ಈ ಟಿ20 ವಿಶ್ವಕಪ್ ಬಳಿಕ ಅವರ ಕೋಚಿಂಗ್ ಗುತ್ತಿಗೆ ಅವಧಿ ಅಂತ್ಯವಾಗಲಿದೆ. ಅದಾದ ಬಳಿಕ ಅವರು ಕೋಚ್ ಆಗಿ ಮುಂದುವರಿಯು ಇಚ್ಛ ತೋರಿಲ್ಲ. ಅವರ ಸ್ಥಾನ ತುಂಬಲು ಬಿಸಿಸಿಐ ಅಕ್ಟೋಬರ್ 26ರಂದು ಅರ್ಜಿಗಳನ್ನ ಆಹ್ವಾನಿಸಿತ್ತು.

  ಇದೇ ವೇಳೆ, ಭಾರತ ಕ್ರಿಕೆಟ್ ತಂಡದ ಬೆಳವಣಿಗೆಗೆ ಕೋಚಿಂಗ್ ತಂಡದ ಕೊಡುಗೆಯನ್ನ ಸ್ಮರಿಸಿದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಬಿ ಅರುಣ್, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಅವರ ಸೇವೆಯನ್ನ ಶ್ಲಾಘಿಸಿದೆ.

  ಸೌರವ್ ಗಂಗೂಲಿ ಸ್ವಾಗತ:

  ರಾಹುಲ್ ದ್ರಾವಿಡ್ ಅವರ ಕ್ರಿಕೆಟ್ ವೃತ್ತಿ ಜೀವನ ಮಹೋನ್ನತವಾಗಿದೆ. ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಅವರ ಉತ್ಕೃಷ್ಟ ಸೇವೆ ಸ್ಮರಣೀಯವಾಗಿದೆ. ಅವರಿಂದ ಬೆಳವಣಿಗೆ ಕಂಡ ಆಟಗಾರರು ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನ ಪ್ರತಿನಿಧಿಸಿದ್ದಾರೆ. ಅವರು ಕೋಚ್ ಆಗಿರುವುದರಿಂದ ಭಾರತೀಯ ಕ್ರಿಕೆಟ್ ಇನ್ನಷ್ಟು ಎತ್ತರಕ್ಕೆ ಹೋಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಹಾಗೂ ರಾಹುಲ್ ದ್ರಾವಿಡ್ ಅವರ ಅಂದಿನ ಟೀಮ್ ಕ್ಯಾಪ್ಟನ್ ಸೌರವ್ ಗಂಗೂಲಿ (Sourav Ganguly) ಹೇಳಿದ್ದಾರೆ.

  ರಾಹುಲ್ ದ್ರಾವಿಡ್ ಹೇಳಿಕೆ:

  ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗುವದು ಹೆಮ್ಮೆಯ ವಿಷಯ. ಈ ಜವಾಬ್ದಾರಿ ಹೊರಲು ತುದಿಗಾಲಲ್ಲಿ ನಿಂತಿದ್ದೇನೆ. ಶಾಸ್ತ್ರಿ ಅವರ ಕೈಕೆಳಗೆ ಭಾರತ ತಂಡ ಬಹಳ ಚೆನ್ನಾಗಿ ಆಡಿದೆ. ಇದೇ ಸಾಧನೆಯನ್ನ ಮುಂದುವರಿಸುವ ವಿಶ್ವಾಸದಲ್ಲಿ ನಾನಿದ್ದೇನೆ. ಭಾರತ ತಂಡದಲ್ಲಿರುವ ಬಹುತೇಕ ಆಟಗಾರರ ಜೊತೆ ನಾನು ಎನ್​ಸಿಎ, ಅಂಡರ್-19 ಮತ್ತು ಇಂಡಿಯಾ ಎ ವ್ಯವಸ್ಥೆಯಲ್ಲಿ ಕೆಲಸ ಮಾಡಿರುವುದರಿಂದ ಅವರ ಪ್ರತಿಭೆ ಏನೆಂದು ನನಗೆ ಗೊತ್ತು ಎಂದು ರಾಹುಲ್ ದ್ರಾವಿಡ್ ತಿಳಿಸಿದ್ದಾರೆ.

  ಇದನ್ನೂ ಓದಿ: T20 World Cup- ರವಿಶಾಸ್ತ್ರಿ 24 ಗಂಟೆ ನಶೆಯಲ್ಲೇ ಇರ್ತಾರೆ: ನಟ ಕೆಆರ್​ಕೆ ಗಂಭೀರ ಆರೋಪ

  ಮುಂದಿನ ಎರಡು ವರ್ಷ ಕೆಲ ಬಹು ತಂಡಗಳ ಟೂರ್ನಿಗಳಿವೆ. ಅವುಗಳತ್ತ ಗಮನ ಕೊಡಬೇಕಿದೆ. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರದರ್ಶನ ನೀಡಲು ಆಟಗಾರರಿಗೆ ಸಾಧ್ಯವಾಗುವಂತೆ ಅವರ ಜೊತೆ ಕೆಲಸ ಮಾಡಬಯಸುತ್ತೇನೆ ಎಂದು ಇದೇ ವೇಳೆ ಅವರು ಹೇಳಿದ್ದಾರೆ.

  ರವಿಶಾಸ್ತ್ರಿ ಕೋಚಿಂಗ್ ಅವಧಿಯಲ್ಲಾದ ಸಾಧನೆಗಳು (Achievement during Ravi Shastri tenure):

  ರವಿಶಾಸ್ತ್ರಿ ಅವರ ಗರಡಿಯಲ್ಲಿ ಭಾರತ ತಂಡ ದೇಶ ಹಾಗೂ ವಿದೇಶಗಳ ಪಿಚ್​ಗಳಲ್ಲಿ ನಿರ್ಭೀತಿಯಿಂದ ಆಡುವ ರೀತಿಯನ್ನ ಅವಳಡಿಸಿಕೊಂಡಿದೆ. ಟೆಸ್ಟ್ ಕ್ರಿಕೆಟ್​ನಲ್ಲಿ ಅಗ್ರಸ್ಥಾನಕ್ಕೇರಿದೆ. ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಭಾರತ ಫೈನಲ್ ಹಂತಕ್ಕೂ ತಲುಪಿತ್ತು.

  ಇದನ್ನೂ ಓದಿ: Khel Ratna: ನೀರಜ್ ಚೋಪ್ರಾ ಸೇರಿ 12 ಮಂದಿಗೆ ಖೇಲ್ ರತ್ನ; ಹಾಸನದ ಯುವಕನಿಗೆ ಅರ್ಜುನ ಪ್ರಶಸ್ತಿ; ಇಲ್ಲಿದೆ ಸಂಪೂರ್ಣ ಪಟ್ಟಿ

  ಆಸ್ಟ್ರೇಲಿಯಾದಲ್ಲಿ 2018-19ರಲ್ಲಿ ಭಾರತ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಮೊದಲ ಏಷ್ಯನ್ ತಂಡವೆಂಬ ದಾಖಲೆ ಭಾರತದ್ದಾಗಿದೆ. 2020-21ರಲ್ಲೂ ಭಾರತ ಮತ್ತೊಂದು ಬಾರಿ ಸರಣಿ ಜಯಿಸಿತು.

  ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನ ಭಾರತ 5-0ಯಿಂದ ಕ್ಲೀನ್ ಸ್ವೀಪ್ ಮಾಡಿತು. ಈ ರೀತಿ ಕಿವೀಸ್ ವಿರುದ್ಧ ಐದು ಪಂದ್ಯಗಳ ಸರಣಿಯನ್ನ ಕ್ಲೀನ್ ಸ್ವೀಪ್ ಮಾಡಿದ ವಿಶ್ವದ ಮೊದಲ ದೇಶ ಭಾರತ ಎನಿಸಿದೆ.

  ರವಿಶಾಸ್ತ್ರಿ ಅವರ ಅಡಿಯಲ್ಲಿ ಭಾರತದಲ್ಲಿ ಆಡಿದ ಎಲ್ಲಾ ಏಳು ಟೆಸ್ಟ್ ಸರಣಿಗಳನ್ನೂ ತಂಡ ಗೆದ್ದಿದೆ.
  Published by:Vijayasarthy SN
  First published: