ಗಿಲ್-ರಹಾನೆ ಭರ್ಜರಿ ಶತಕ ಶತಕ; ಡ್ರಾನಲ್ಲಿ ಅಂತ್ಯಕಂಡ ನ್ಯೂಜಿಲೆಂಡ್ ಎ ವಿರುದ್ಧದ ಟೆಸ್ಟ್​ ಸರಣಿ!

ವಾರದ ಹಿಂದೆ ನಡೆದಿದ್ದ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಗಿಲ್ ಅಜೇಯ ದ್ವಿಶತಕ ಬಾರಿಸಿದ್ದರು. ಇದೇ ಪಂದ್ಯದ ಮೊದಲ ಇನ್ನಿಂಗ್ಸಲ್ಲೂ 83 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿದ್ದರು.

news18-kannada
Updated:February 10, 2020, 2:47 PM IST
ಗಿಲ್-ರಹಾನೆ ಭರ್ಜರಿ ಶತಕ ಶತಕ; ಡ್ರಾನಲ್ಲಿ ಅಂತ್ಯಕಂಡ ನ್ಯೂಜಿಲೆಂಡ್ ಎ ವಿರುದ್ಧದ ಟೆಸ್ಟ್​ ಸರಣಿ!
ಶುಭ್ಮನ್ ಗಿಲ್ ಮತ್ತು ಅಜಿಂಕ್ಯಾ ರಹಾನೆ.
  • Share this:
ಭಾರತ ಎ ಹಾಗೂ ನ್ಯೂಜಿಲೆಂಡ್ ಎ ವಿರುದ್ಧದ ಎರಡನೇ ಟೆಸ್ಟ್​ ಪಂದ್ಯವೂ ಡ್ರಾನಲ್ಲಿ ಅಂತ್ಯಕಂಡಿದೆ. ಮೊದಲ ಟೆಸ್ಟ್​ ಕೂಡ ಡ್ರಾ ಆಗಿತ್ತು. ಈ ಮೂಲಕ ಭಾರತ ಎ ತಂಡದ ನ್ಯೂಜಿಲೆಂಡ್ ಪ್ರವಾಸ ಕೊನೆಗೊಂಡಿದೆ.

ಲಿಂಕಾನ್ ನಗರದಲ್ಲಿ ನಡೆದ ಎರಡನೇ ಅನಧಿಕೃತ ಟೆಸ್ಟ್​ ಪಂದ್ಯದಲ್ಲಿ ನ್ಯೂಜಿಲೆಂಡ್ ಎ ತಂಡದ 386 ರನ್​ಗಳ ಮೊದಲ ಇನ್ನಿಂಗ್ಸ್ ಮೊತ್ತಕ್ಕೆ ಪ್ರತಿಯಾಗಿ ಭಾರತ ಎ ತಂಡ ಮೂರನೇ ದಿನಾಂತ್ಯದಲ್ಲಿ 1 ವಿಕೆಟ್ ನಷ್ಟಕ್ಕೆ 234 ರನ್ ಗಳಿಸಿತ್ತು. ಶುಭ್ಮನ್ ಗಿಲ್ ಅಜೇಯ 107  ಹಾಗೂ ಚೇತೇಶ್ವರ್ ಪೂಜಾರ 52 ರನ್ ಗಳಿಸಿ ಇಂದು ಅಂತಿಮ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು.

ಅದರಂತೆ ಇಂದು ಬ್ಯಾಟಿಂಗ್ ಮುಂದುವರೆಸಿದ ಭಾರತ ಎ ಪರ ಪೂಜಾರ 53 ರನ್​ಗೆ ಔಟ್ ಆದರೆ, ಗಿಲ್ ಆಟ 136 ರನ್​ಗೆ ಅಂತ್ಯವಾಯಿತು. ಬಳಿಕ ವಿಜಯ್ ಶಂಕರ್ ಹಾಗೂ ಅಜಿಂಕ್ಯಾ ರಹಾನೆ ಅತ್ಯುತ್ತಮ ಜೊತೆಯಾಟ ಆಡಿದರು. ಪಂದ್ಯವನ್ನು ಡ್ರಾ ಮಾಡುವಲ್ಲಿ ಈ ಜೋಡಿ ಪ್ರಮುಖ ಪಾತ್ರ ವಹಿಸಿತು.

ಟಿ-20 ಕ್ರಿಕೆಟ್​ ಇತಿಹಾಸದಲ್ಲಿ ಮೊದಲ ದ್ವಿಶತಕ; ಯುವರಾಜ್ ಹೇಳಿದ್ದು ಯಾರ ಹೆಸರು..?

4ನೇ ವಿಕೆಟ್​ಗೆ ರಹಾನೆ-ಶಂಕರ್ 120 ರನ್​ಗಳ ಕಾಣಿಕೆ ನೀಡಿದರು. ವಿಜಯ್ ಶಂಕರ್ 103 ಎಸೆತಗಳಲ್ಲಿ 66 ರನ್ ಗಳಿಸಿ ಔಟ್ ಆದರು. ಶ್ರೀಕರ್ ಭರತ್ 22 ರನ್ ಬಾರಿಸಿದರು. ಆರ್ ಅಶ್ವಿನ್ ಅಜೇಯ 1 ರನ್ ಗಳಿಸಿದರು. ರಹಾನೆ 148 ಎಸೆತಗಳಲ್ಲಿ ಅಜೇಯ 101 ರನ್ ಸಿಡಿಸಿದರು.

ಅಂತಿಮವಾಗಿ ಭಾರತ ಎ 4ನೇ ದಿನದಾಟದ ಅಂತ್ಯಕ್ಕೆ 109.3 ಓವರ್​ನಲ್ಲಿ 5 ವಿಕೆಟ್ ನಷ್ಟಕ್ಕೆ 467 ರನ್ ಗಳಿಸಿ ಪಂದ್ಯ ಡ್ರಾ ಎಂದು ಘೋಷಿಸಲಾಯಿತು. ನ್ಯೂಜಿಲೆಂಡ್ ಎ ಪರ ಎಡ್ ನಟಲ್ 2 ವಿಕೆಟ್ ಕಿತ್ತರು. ಎರಡೂ ಟೆಸ್ಟ್​ ಪಂದ್ಯದಲ್ಲಿ ಶುಭ್ಮನ್ ಗಿಲ್ ಅದ್ಭುತ ಪ್ರದರ್ಶನ ತೋರಿದರು.

ವಾರದ ಹಿಂದೆ ನಡೆದಿದ್ದ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಶುಭ್ಮನ್ ಗಿಲ್ ಅಜೇಯ ದ್ವಿಶತಕ ಬಾರಿಸಿದ್ದರು. ಇದೇ ಪಂದ್ಯದ ಮೊದಲ ಇನ್ನಿಂಗ್ಸಲ್ಲೂ 83 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿದ್ದರು. ಇದರೊಂದಿಗೆ ಎರಡು ಪಂದ್ಯಗಳಲ್ಲಿ ಎರಡು ಶತಕ ಹಾಗೂ ಒಂದು ಅರ್ಧಶತಕ ಅವರಿಂದ ಬಂದಂತಾಗಿದೆ.IND vs NZ: ವೈಟ್​ವಾಷ್​​ ಮಾಡಲು ಮಾಸ್ಟರ್ ಪ್ಲಾನ್; ಕಿವೀಸ್ ಪಡೆಯಿಂದ ಹೊರಬಿತ್ತು ಶಾಕಿಂಗ್ ಸುದ್ದಿ!

20 ವರ್ಷದ ಶುಭ್ಮನ್ ಗಿಲ್ 2018ರ ಅಂಡರ್-19 ವಿಶ್ವಕಪ್​ನಲ್ಲೂ ಮಿಂಚಿದ್ದರು. ಭಾರತೀಯ ತಂಡಕ್ಕೆ ಕಿರಿಯರ ವಿಶ್ವಕಪ್ ಮುಕುಟ ಒಲಿದು ಬರಲು ಗಿಲ್ ಕೊಡುಗೆಯೂ ಪ್ರಮುಖವಾದುದು. ಪೃಥ್ವಿ ಶಾ ಮತ್ತು ಶುಭ್ಮನ್ ಗಿಲ್ ಆ ಟೂರ್ನಿಯಲ್ಲಿ ಆಡಿದ್ದು ವಿಶೇಷ.

First published: February 10, 2020, 2:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading