ಅಶ್ವಿನ್ ಜೊತೆಗೆ ಇನ್ನೂ ಇಬ್ಬರು ಹಿರಿಯ ಕ್ರಿಕೆಟಿಗರು ಕೊಹ್ಲಿ ವಿರುದ್ಧ ಬಿಸಿಸಿಐಗೆ ದೂರು ನೀಡಿದ್ದರಾ?

Virat Kohli Captaincy- ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ ಆಟಗಾರರ ಬಗ್ಗೆ ಕೊಹ್ಲಿ ಬಹಿರಂಗವಾಗಿಯೇ ಟೀಕೆ ಮಾಡಿದ್ದರು. ಆ ಕೆಲ ಆಟಗಾರರು ಕೊಹ್ಲಿ ಬಗ್ಗೆ ಬಿಸಿಸಿಐ ಬಳಿ ದೂರು ಕೊಟ್ಟಿದ್ದರೆನ್ನಲಾಗಿದೆ.

ಭಾರತದ ಟೆಸ್ಟ್ ಕ್ರಿಕೆಟಿಗರು

ಭಾರತದ ಟೆಸ್ಟ್ ಕ್ರಿಕೆಟಿಗರು

 • Cricketnext
 • Last Updated :
 • Share this:
  ನವದೆಹಲಿ, ಸೆ. 29: ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿಗೆ ಸಂಬಂಧಿಸಿದಂತೆ ದಿನಕ್ಕೊಂದು ವರ್ತಮಾನ ಬರುತ್ತಲೇ ಇದೆ. ಭಾರತ ತಂಡದಲ್ಲಿದ್ದ ಕೆಲ ಹಿರಿಯ ಕ್ರಿಕೆಟಿಗರು ವಿರಾಟ್ ಕೊಹ್ಲಿ ಬಗ್ಗೆ ಅಸಮಾಧಾನಗೊಂಡು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬಳಿ ದೂರು ನೀಡಿದ್ದರೆಂಬ ಸುದ್ದಿ ದಟ್ಟವಾಗಿದೆ. ಆರ್ ಅಶ್ವಿನ್ ಅವರತ್ತ ಬೊಟ್ಟು ಮಾಡಿದ ಸುದ್ದಿಯೂ ಬಂದಿತ್ತು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆರ್ ಅಶ್ವಿನ್ ಅವರನ್ನ ಆಡಿಸಲು ಕೊಹ್ಲಿ ಆಸಕ್ತಿ ತೋರಸದೇ ಹೋಗಿದ್ದು ಅದೇ ಕಾರಣಕ್ಕೆ ಎಂಬ ಮಾತಿದೆ. ಈಗ ಬಂದಿರುವ ಸುದ್ದಿ ಪ್ರಕಾರ, ಆರ್ ಅಶ್ವಿನ್ ಅಷ್ಟೇ ಅಲ್ಲ ಇನ್ನೂ ಹಲವರು ಹಿರಿಯ ಕ್ರಿಕೆಟಿಗರು ವಿರಾಟ್ ಕೊಹ್ಲಿ ಬಗ್ಗೆ ಬಿಸಿಸಿಐ ಬಳಿ ನೆಗಟಿವ್ ಆಗಿ ಮಾತನಾಡಿದ್ದರೆನ್ನಲಾಗಿದೆ. ಅವರಲ್ಲಿ ಪ್ರಮುಖರು ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವರ್ಲ್ಡ್ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದಲ್ಲಿ ಆಡಿದ ಕೆಲ ಆಟಗಾರರ ಧೋರಣೆ ಬಗ್ಗೆ ಕೊಹ್ಲಿ ಅಸಮಾಧಾನಗೊಂಡು ಝಾಡಿಸಿದ್ದರು. ಅದರಲ್ಲೂ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಬಗ್ಗೆ ಕೊಹ್ಲಿ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದರು.

  ಇಂಗ್ಲೆಂಡ್​ನಲ್ಲಿ ನಡೆದ ಆ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 8 ವಿಕೆಟ್​ಗಳಿಂದ ಸುಲಭವಾಗಿ ಸೋತಿತ್ತು. ಭಾರತ ಎರಡನೇ ಇನ್ನಿಂಗ್ಸಲ್ಲಿ ಕೇವಲ 170 ರನ್​ಗೆ ಆಲೌಟ್ ಆಗಿತ್ತು. ಆ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಮೊದಲ ಇನ್ನಿಂಗ್ಸಲ್ಲಿ 54 ಬಾಲ್​ನಲ್ಲಿ ಗಳಿಸಿದ್ದು 8 ರನ್ ಮಾತ್ರ. ಎರಡನೇ ಇನ್ನಿಂಗ್ಸಲ್ಲಿ 80 ಎಸೆತದಲ್ಲಿ 15 ರನ್ ಗಳಿಸಿದ್ದರು. ಇನ್ನು, ಅಜಿಂಕ್ಯ ರಹಾನೆ ಅವರು ಮೊದಲ ಇನ್ನಿಂಗ್ಸಲ್ಲಿ 117 ಎಸೆತಗಳಿಂದ 49 ರನ್, ಹಾಗೂ ದ್ವಿತೀಯ ಇನ್ನಿಂಗ್ಸಲ್ಲಿ 40 ಬಾಲ್​ಗಳಿಂದ 15 ರನ್ ಮಾತ್ರ ಗಳಿಸಿದ್ದರು. ರಾಹುಲ್ ದ್ರಾವಿಡ್​ರಂತೆ ಭಾರತ ಟೆಸ್ಟ್ ತಂಡದ ಹೆಬ್ಬಂಡೆಗಳು ಎಂದೇ ಹೊಗಳಲಾಗುವ ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಅವರ ನಿಧಾನಗತಿ ಬ್ಯಾಟಿಂಗ್ ಬಹಳಷ್ಟು ಟೀಕೆಗೆ ಒಳಗಾಗಿತ್ತು.

  ಆ ಸೋಲಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ವಿರಾಟ್ ಕೊಹ್ಲಿ, “ನಮ್ಮ ದೃಷ್ಟಿ ಯಾವಾಗಲೂ ರನ್ ಗಳಿಸುವುದರತ್ತ ಇರಬೇಕು. ರನ್ ಗಳಿಸುವ ದಾರಿ ಹುಡುಕುತ್ತಲೇ ಇರಬೇಕು. ಔಟಾಗಿ ಬಿಡುತ್ತೇನೆ ಎಂದು ಯೋಚಿಸುತ್ತಾ ನಿಂತುಬಿಟ್ಟರೆ ಎದುರಾಳಿ ತಂಡದ ಬೌಲರ್​ಗಳು ಪಾರಮ್ಯ ಮೆರೆಯತೊಡಗುತ್ತಾರೆ” ಎಂದು ಹೇಳಿದ್ದರು. ನಂತರ ಅವರು ರಹಾನ್ ಹಾಗೂ ಪೂಜಾರ ಇಬ್ಬರ ಬ್ಯಾಟಿಂಗ್ ಬಗ್ಗೆ ನೇರ ಟೀಕೆಗಳನ್ನ ಮಾಡಿದ್ದರು.

  ನ್ಯೂ ಇಂಡಿಯನ್ ಎಕ್ಸ್​ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ, ಭಾರತ-ನ್ಯೂಜಿಲೆಂಡ್ ನಡುವಿನ ಆ ಟೆಸ್ಟ್ ಪಂದ್ಯದ ಬಳಿಕ ಕೊಹ್ಲಿ ಆಡಿದ ಮಾತುಗಳಿಂದ ವಿಚಲಿತರಾದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ಕರೆ ಮಾಡಿ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ನಾಯಕತ್ವದಿಂದಾಗಿ ತಮ್ಮ ಆತ್ಮಬಲ ಕುಗ್ಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಆಗ ಬಿಸಿಸಿಐ ಟೀಮ್ ಇಂಡಿಯಾದ ವ್ಯವಹಾರದಲ್ಲಿ ಮಧ್ಯ ಪ್ರವೇಶಿಸಲು ನಿರ್ಧರಿಸಿದೆ. ರಹಾನೆ ಮತ್ತು ಪೂಜಾರ ಬಿಟ್ಟು ಉಳಿದ ಆಟಗಾರರನ್ನ ಸಂಪರ್ಕಿಸಿ ಕೊಹ್ಲಿ ನಾಯಕತ್ವದ ಬಗ್ಗೆ ಅಭಿಪ್ರಾಯಗಳನ್ ಕಲೆಹಾಕಿದೆ. ಇಂಗ್ಲೆಂಡ್ ಪ್ರವಾಸ ಬಳಿಕ ಕೊಹ್ಲಿ ಕ್ಯಾಪ್ಟನ್ಸಿ ಬಗ್ಗೆ ನಿಲುವು ತೆಗೆದುಕೊಳ್ಳಲು ಬಿಸಿಸಿಐ ನಿರ್ಧರಿಸಿಯೂ ಆಗಿತ್ತೆನ್ನಲಾಗಿದೆ.

  ಇದನ್ನೂ ಓದಿ: ‘ನನ್ನ ಹೆಂಡ್ತಿ ಬಿಡ್ತಿಲ್ಲ’- ಆರ್​ಸಿಬಿ ಜೆರ್ಸಿ ತೊಟ್ಟು ಬಂದ ಸಿಎಸ್​ಕೆ ಫ್ಯಾನ್; ವೈರಲ್ ಆಯ್ತು ಆತನ ಪ್ಲೆಕಾರ್ಡ್

  ಬಿಸಿಸಿಐನ ನಿರ್ಧಾರದ ಬಗ್ಗೆ ಮಾಹಿತಿ ಗೊತ್ತಾದುದರಿಂದಲೇ ವಿರಾಟ್ ಕೊಹ್ಲಿ ಅವರು ಟಿ20 ವಿಶ್ವಕಪ್ ಬಳಿಕ ಭಾರತ ಟಿ20 ತಂಡದ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಣೆ ಮಾಡಿದರು ಎಂದು ಹೇಳಲಾಗುತ್ತಿದೆ. ಮೂರು ಮಾದರಿ ಕ್ರಿಕೆಟ್​ನಲ್ಲಿ ನಾಯಕತ್ವದ ಹೊರೆ ಕಷ್ಟವಾಗುತ್ತಿದೆ. ಬ್ಯಾಟಿಂಗ್ ಮೇಲೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಟಿ20 ಕ್ರಿಕೆಟ್ ತಂಡದ ನಾಯಕ ಸ್ಥಾನದಿಂದ ಹಿಂದೆ ಸರಿಯುತ್ತೇನೆ ಎಂದು ಕೊಹ್ಲಿ ಕಾರಣ ಕೊಟ್ಟಿದ್ದರು. ಆದರೆ, ಬಿಸಿಸಿಐ ನಿರ್ಧಾರದ ಬಗ್ಗೆ ಮೊದಲೇ ಗೊತ್ತಾದ ಹಿನ್ನೆಲೆಯಲ್ಲಿ ಕೊಹ್ಲಿ ತಾವಾಗಿಯೇ ಕ್ಯಾಪ್ಟನ್ಸಿ ತ್ಯಜಿಸುವ ನಿರ್ಧಾರ ಪ್ರಕಟಿಸಿದರು ಎನ್ನುತ್ತವೆ ವರದಿಗಳು.

  ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಜೊತೆಗೆ ಇನ್ನೂ ಕೆಲ ಹಿರಿಯ ಕ್ರಿಕೆಟಿಗರು ಕೊಹ್ಲಿ ನಾಯಕತ್ವದ ಬಗ್ಗೆ ಬಿಸಿಸಿಐ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅವರಲ್ಲಿ ಆರ್ ಅಶ್ವಿನ್ ಕೂಡ ಒಬ್ಬರೆನ್ನಲಾಗಿದೆ. ಹೀಗಾಗಿಯೇ, ಆರ್ ಅಶ್ವಿನ್ ಭಾರತದ ಬೆಸ್ಟ್ ಸ್ಪಿನ್ನರ್ ಆಗಿದ್ದಾಗ್ಯೂ ಇಂಗ್ಲೆಂಡ್ ಪ್ರವಾಸದಲ್ಲಿ ಅವರನ್ನ ಯಾವ ಪಂದ್ಯದಲ್ಲೂ ಆಡಿಸಲಿಲ್ಲ. ಕೊಹ್ಲಿಯ ನಿಕಟ ಮಾರ್ಗದರ್ಶಕರೇ ಎನಿಸಿರುವ ರವಿಶಾಸ್ತ್ರಿ ಹೇಳಿದರೂ ಕೊಹ್ಲಿ ಕಿವಿಗೊಡಲಿಲ್ಲವೆನ್ನಲಾಗಿದೆ.
  Published by:Vijayasarthy SN
  First published: