• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • Rafale Jets Induction: ಭಾರತೀಯ ವಾಯುಪಡೆಗೆ ರಫೆಲ್​ ಸೇರ್ಪಡೆ: ಐಎಎಫ್​ಗೆ ಶುಭಕೋರಿದ ಎಂಎಸ್ ಧೋನಿ

Rafale Jets Induction: ಭಾರತೀಯ ವಾಯುಪಡೆಗೆ ರಫೆಲ್​ ಸೇರ್ಪಡೆ: ಐಎಎಫ್​ಗೆ ಶುಭಕೋರಿದ ಎಂಎಸ್ ಧೋನಿ

ಎಂಎಸ್ ಧೋನಿ.

ಎಂಎಸ್ ಧೋನಿ.

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರಫೇಲ್ ಫೈಟರ್ ಜೆಟ್‌ಗಳನ್ನು ಭಾರತೀಯ ವಾಯುಪಡೆ ಸೇರ್ಪಡೆಯ ಬಗ್ಗೆ ಟ್ವೀಟ್ ಮಾಡಿದ್ದು, ಐಎಎಫ್ ಪೈಲಟ್‌ಗಳು 'ವಿಶ್ವದ ಅತ್ಯುತ್ತಮ ಫೈಟರ್ ಪೈಲಟ್‌ಗಳು' ಎಂದು ಪ್ರಶಂಸಿಸಿದ್ದಾರೆ.

  • Share this:

    ಭಾರತೀಯ ವಾಯುಸೇನೆಗೆ ಅಧಿಕೃತವಾಗಿ ರಫೆಲ್ ಯುದ್ಧ ವಿಮಾನಗಳು ಸೇರ್ಪಡೆಯಾಗಿವೆ. ಹರಿಯಾಣ ರಾಜ್ಯದ ಅಂಬಾಲದಲ್ಲಿರುವ ವಾಯುನೆಲೆಯಲ್ಲಿ ಐದು ರಫೇಲ್ ವಿಮಾನಗಳನ್ನ ಅಧಿಕೃತವಾಗಿ ವಾಯುಸೇನೆಗೆ ಇಂದು ನಿಯೋಜಿಸಲಾಗಿದೆ. ಭಾರತ ಮತ್ತು ಫ್ರಾನ್ಸ್ ದೇಶಗಳ ರಕ್ಷಣಾ ಸಚಿವರು ಹಾಗೂ ವಾಯುಪಡೆ ಮುಖ್ಯಸ್ಥ ಆರ್.ಕೆ.ಎಸ್. ಭಡೋರಿಯಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅಂಬಾಲದಲ್ಲಿರುವ 17ನೇ ಸ್ಕ್ವಾಡ್ರನ್ ‘ಗೋಲ್ಡನ್ ಆರೋಸ್’ ತಂಡ ಈ ಐದು ರಫೇಲ್ ವಿಮಾನಗಳನ್ನ ನಿರ್ವಹಿಸಲಿದೆ. ಈ ಐದು ವಿಮಾನಗಳಲ್ಲಿ ಮೂರು ವಿಮಾನಗಳು ಸಿಂಗಲ್ ಸೀಟರ್ ಆಗಿದ್ದರೆ ಇನ್ನೆರಡು ವಿಮಾನಗಳು ಎರಡು ಸೀಟಗಳನ್ನ ಹೊಂದಿವೆ. ಜಗತ್ತಿನ ಅತ್ಯುತ್ತಮ ಹಾಗೂ ಪರಿಣಾಮಕಾರಿ ಯುದ್ಧವಿಮಾನಗಳ ಪೈಕಿ ರಫೇಲ್ ಕೂಡ ಒಂದೆಂದು ಗುರುತಿಸಲಾಗಿದೆ.


    ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರಫೇಲ್ ಫೈಟರ್ ಜೆಟ್‌ಗಳನ್ನು ಭಾರತೀಯ ವಾಯುಪಡೆ ಸೇರ್ಪಡೆಯ ಬಗ್ಗೆ ಟ್ವೀಟ್ ಮಾಡಿದ್ದು, ಐಎಎಫ್ ಪೈಲಟ್‌ಗಳು 'ವಿಶ್ವದ ಅತ್ಯುತ್ತಮ ಫೈಟರ್ ಪೈಲಟ್‌ಗಳು' ಎಂದು ಪ್ರಶಂಸಿಸಿದ್ದಾರೆ.


    Rafale Jets Induction: ಅಂಬಾಲದಲ್ಲಿ ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾದ ರಫೆಲ್​ ಯುದ್ಧ ವಿಮಾನಗಳು



    ಮುಂದೊಂದು ದಿನ ರಫೆಲ್​ ಯುದ್ಧ ವಿಮಾನ ಮಿರಾಜ್​ 2000 ಯುದ್ಧ ವಿಮಾನದ ಸರ್ವೀಸ್​ ದಾಖಲೆಯನ್ನು ಹಿಂದಿಕ್ಕಬಹುದು ಎನ್ನುವ ನಂಬಿಕೆ ನಮ್ಮದೆಲ್ಲರದ್ದಾಗಿದೆ. ಆದರೆ ಸುಖೋಯ್​ 30 ಎಂಕೆಐ ನನ್ನ ಫೇವರಿಟ್​ ಫೈಟರ್​. ನಾವೆಲ್ಲರೂ ರಫೇಲ್ ಮಿರಾಜ್ 2000 ರ ಸೇವಾ ದಾಖಲೆಯನ್ನು ಮುರಿಯಲಿದೆ ಎಂದು ಭಾವಿಸುತ್ತೇವೆ. ಆದರೆ ಸು 30 ಎಂಕೆಐ ನನ್ನ ಪರವಾಗಿದೆ. ಹುಡುಗರು ಡಾಗ್ ಫೈಟ್ ಗೆ ಹೊಸ ಗುರಿಯನ್ನು ಪಡೆಯಲಿದ್ದಾರೆ. ಅವರು ಬಿವಿಆರ್ ಎಂಗೇಜ್ ಮೆಂಟ್ ಗಾಗಿ ನಿರೀಕ್ಷಿಸುತ್ತಾರೆ. ಸೂಪರ್ ಸುಖೋಯ ಅನ್ನು ಅಪ್‌ಗ್ರೇಡ್ ಮಾಡಿ 'ಎಂದು ಧೋನಿ ಟ್ವೀಟ್‌ನಲ್ಲಿ ಬರೆದಿದ್ದಾರೆ.


    ನಮ್ಮವರಿಗೆ ವೈಮಾನಿಕ ಯುದ್ಧದಲ್ಲಿ ಹೊಸ ಟಾರ್ಗೆಟ್​ ಸಿಕ್ಕಿದ್ದು ಸೂಪರ್​ ಸುಖೋಯ್​ ಬಿವಿಆರ್​ ಮೇಲ್ದರ್ಜೆಗೇರಬೇಕಿದೆ ಎಂದು ಧೋನಿ ತಿಳಿಸಿದ್ದಾರೆ. ಎಂ.ಎಸ್​. ಧೋನಿಗೆ 2011ರಲ್ಲಿ ಭಾರತೀಯ ಟೆರಿಟೋರಿಯಲ್ ಆರ್ಮಿ ಗೌರವ ಲೆಫ್ಟಿನೆಂಟ್​ ಕರ್ನಲ್​ ಹುದ್ಧೆ ನೀಡಿತ್ತು. ಸೈನ್ಯ, ದೇಶದ ಬಗ್ಗೆ ಧೋನಿ ಅಪಾರ ಗೌರವ ಹೊಂದಿದ್ದಾರೆ. ಕಳೆದ ವರ್ಷ ಏಕದಿನ ವಿಶ್ವಕಪ್ ಮುಗಿದ ಬಳಿಕ ಕ್ರಿಕೆಟ್​ನಿಂದ ವಿಶ್ರಾಂತಿ ಪಡೆದು ಭಾರತೀಯ ಸೈನ್ಯದೊಂದಿಗೆ ಕೆಲವು ದಿನಗಳಲ್ಲಿ ಕಳೆದಿದ್ದರು.



    ಇನ್ನು, ವಾಯಪಡೆ ಮುಖ್ಯಸ್ಥ ಭಡೂರಿಯಾ ಅವರು ರಫೇಲ್ ಯುದ್ಧವಿಮಾನಗಳು ಸಕಾಲದಲ್ಲಿ ಸೇರ್ಪಡೆಯಾಗಿವೆ ಎಂದು ಸ್ವಾಗತ ಮಾಡಿದರು.


    Prithvi Shaw: ಡೇಟಿಂಗ್​ನಲ್ಲಿ ಟೀಂ ಇಂಡಿಯಾ ಆಟಗಾರ ಪೃಥ್ವಿ ಶಾ: ಹುಡುಗಿ ಯಾರು ಕೇಳಿದ್ರೆ ಶಾಕ್ ಆಗ್ತೀರಾ!


    ಫ್ರಾನ್ಸ್ ದೇಶದಿಂದ 7000 ಕಿಮೀ ದೂರ ಹಾರುತ್ತಾ ರಫೇಲ್ ಜೆಟ್ ವಿಮಾನಗಳು ಜುಲೈ 29ರಂದು ಅಂಬಾಲ ವಾಯು ನೆಲೆಗೆ ಬಂದಿಳಿದಿದ್ದವು. ಪಾಕ್ ಗಡಿಭಾಗದಿಂದ 220 ಕಿಮೀ ಈಚೆಗೆ ಈರುವ ಅಂಬಾಲ ವಾಯುನೆಲೆ ನಮ್ಮ ಸೇನೆಗೆ ಬಹಳ ಆಯಕಟ್ಟಿನ ಜಾಗ ಎನಿಸಿದೆ.


    ಇನ್ನು, ಈಗ ವಾಯುಪಡೆಗೆ ಸೇರ್ಪಡೆಯಾಗಿರುವ ಐದು ಜೆಟ್​ಗಳನ್ನು ಸೇರಿದಂತೆ ಫ್ರಾನ್ಸ್ ದೇಶದಿಂದ ಭಾರತ 36 ರಫೇಲ್ ಯುದ್ಧವಿಮಾನಗಳನ್ನ ಖರೀದಿ ಮಾಡುತ್ತಿದೆ. ಇವುಗಳಲ್ಲಿ 30 ವಿಮಾನಗಳು ಸಮರಾಂಗಣಕ್ಕೆ ಇಳಿಯುವಂಥ ವಿಮಾನಗಳಾಗಿರಲಿವೆ. ಇನ್ನುಳಿದ 6 ವಿಮಾನಗಳು ತರಬೇತಿಗೆಂದು ಬಳಕೆ ಆಗಲಿವೆ. ಉಳಿದ 31 ರಫೇಲ್ ಯುದ್ಧವಿಮಾನಗಳನ್ನು ಡಸಾಲ್ಟ್ ಸಂಸ್ಥೆ ಹಂತ ಹಂತವಾಗಿ ಭಾರತಕ್ಕೆ ಹಸ್ತಾಂತರಿಸಲಿದೆ.

    Published by:Vinay Bhat
    First published: